Breaking News

ಉತ್ತರ ಕರ್ನಾಟಕ   ಜನರ ಬಗ್ಗೆ ಬಿಜೆಪಿ ಸರ್ಕಾರಕ್ಕೆ ಕಾಳಜಿಯೇ ಇಲ್ಲ :ಡಿ.ಕೆ. ಶಿ

Spread the love

ಬೆಳಗಾವಿ:  ಉತ್ತರ ಕರ್ನಾಟಕ   ಜನರ ಬಗ್ಗೆ ಬಿಜೆಪಿ ಸರ್ಕಾರಕ್ಕೆ ಕಾಳಜಿಯೇ ಇಲ್ಲ  ಅಂತಾ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ.

ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಭೀಕರ ಪ್ರವಾಹದಿಂದ ಈ ಭಾಗದ ಜನ  ಮನೆ, ಆಸ್ತಿ ಪಾಸ್ತಿ ಕಳೆದುಕೊಂಡು ಬೀದಿ ಪಾಲಾಗಿದ್ದಾರೆ.  ಪರಿಹಾರ, ಮನೆ ಕೊಡಲು ಸಾಧ್ಯವಾಗಲಿಲ್ಲ.  ಜನರ ಸಮಸ್ಯೆ ಆಲಿಸಲು ಸುವರ್ಣಸೌಧ ನಿರ್ಮಿಸಲಾಗಿದೆ.  ಆದ್ರೆ  ಅಧಿವೇಶನದಲ್ಲಿ ಕರೆಯದೇ ಬಿಜೆಪಿ ಕಾರ್ಯ ಕಾರಣಿ ಸಭೆ ಬೆಳಗಾವಿಯಲ್ಲಿ ನಡೆಸುತ್ತಿದ್ದಾರೆ ಎಂದು ಕಿಡಿಕಾರದು.

 ಬಿಜೆಪಿಯವರೊಂದಿಗೆ ಕೈ ಜೋಡಿಸಿದ್ದರೆ ನಾನು ಈಗಲೂ ಸಿಎಂ ಇರುತ್ತಿದ್ದೆ ಎಂದ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಲು ಡಿ.ಕೆ. ಶಿವಕುಮಾರ್ ನಿರಾಕರಿಸಿದರು.   ವೈಯಕ್ತಿಕ ಆರೋಪಕ್ಕೆ ನಾನು ಉತ್ತರ ಕೊಡುವುದಿಲ್ಲ ಎಂದಷ್ಟೇ ಹೇಳಿದರು.

ಶಾಸಕ ಸವದಿ ವಿರುದ್ದ ಹಮ್ಮಿಕೊಳ್ಳಲಾಗಿರುವ ಪ್ರತಿಭಟನೆಯಲ್ಲಿ ಭಾಗಿಯಾಗಲು ತೇರದಾಳ ಪಟ್ಟಣಕ್ಕೆ ತೆರಳಿದರು.


Spread the love

About Laxminews 24x7

Check Also

ಬೆಳಗಾವಿ ಲೋಕಸಭಾ ಕ್ಷೇತ್ರದ 28 ಶಾಲೆಗಳು ಕೇಂದ್ರದ ‘ಪಿಎಂ-ಶ್ರೀ’ ಯೋಜನೆಗೆ ಆಯ್ಕೆ – ಸಂಸದ ಈರಣ್ಣ ಕಡಾಡಿ

Spread the loveಮೂಡಲಗಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ ‘ಪಿಎಂ-ಶ್ರೀ’ ಯೋಜನೆಯಡಿ ಬೆಳಗಾವಿ ಲೋಕಸಭಾ ಕ್ಷೇತ್ರದ 21 ಪ್ರಾಥಮಿಕ, …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ