ಖಾನಾಪುರ: ಮನೆಯ ಶೌಚಾಲಯದಲ್ಲಿ ನೇಣು ಹಾಕಿಕೊಂಡು ವಿದ್ಯಾರ್ಥಿನಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಬೀಡಿ ಗ್ರಾಮದಲ್ಲಿ ಮಂಗಳವಾರ ನಡೆದಿದೆ.
ಮೆಹೇಕ್ ಶಕೀಲ್ ಸಂಗೊಳ್ಳಿ (19) ಮೃತ ವಿದ್ಯಾರ್ಥಿನಿ. ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದ ಖಾಸಗಿ ಕಾಲೇಜಿನಲ್ಲಿ ಬಿಸಿಎ ಕೋರ್ಸ್ ಮಾಡುತ್ತಿದ್ದ ಮೆಹೇಕ್ ಶಕೀಲ್ ಪ್ರಥಮ ವರ್ಷ ಮುಗಿಸಿದ್ದರು.
‘ಕೂಲಿ ಮಾಡುತ್ತಿರುವ ನಾವು ಈ ವರ್ಷ ಕೋವಿಡ್-19 ಸಂಕಷ್ಟದಿಂದಾಗಿ ಆರ್ಥಿಕ ಮುಗ್ಗಟ್ಟು ಎದುರಾಗಿದ್ದರಿಂದ ಕಾಲೇಜಿನ ಶುಲ್ಕ ಪಾವತಿಸಲು ಆಗಿರಲಿಲ್ಲ. ಇದರಿಂದ ನೊಂದು ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೆÇೀಷಕರು ದೂರು ನೀಡಿದ್ದಾರೆ’ ಎಂದು ನಂದಗಡ ಠಾಣೆ ಪೊಲೀಸರು ಮಾಹಿತಿ ನೀಡಿದ್ದಾರೆ.