Breaking News

ದಲಿತರ ಮೇಲೆ ದೌರ್ಜನ್ಯ ಪ್ರಕರಣ; ಒಂದೇ ಗ್ರಾಮದ 98 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ! ಸುದ್ದಿ ತಿಳಿಯುತ್ತಿದಂತೆ ಓರ್ವ ಸಾವು!

Spread the love

ಕೊಪ್ಪಳ: ದಲಿತರ ಮೇಲೆ ದೌರ್ಜನ್ಯ ಪ್ರಕರಣಕ್ಕೆ (Assault Case) ಸಂಬಂಧಿಸಿದಂತೆ ಬರೋಬ್ಬರಿ‌ 98 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಕೊಪ್ಪಳ ಜಿಲ್ಲೆಯ (Koppala) ಗಂಗಾವತಿ ತಾಲೂಕಿನ (Gangavathi) ಮರಕುಂಬಿ ಗ್ರಾಮದ ನಿವಾಸಿಗಳಿಗೆ ಜಿಲ್ಲಾ ನ್ಯಾಯಾಲಯ ಶಿಕ್ಷೆ ನೀಡಿ ಆದೇಶ ನೀಡಿದೆ.

2014ರ ಆಗಸ್ಟ್ 28 ರಂದು ಘಟನೆ ನಡೆದಿತ್ತು. ಮಂಜುನಾಥ್ ಎನ್ನುವವರಿಗೆ ನಾಲ್ವರು ಯುವಕರು ಹಲ್ಲೆ ಮಾಡಿದ್ದರು. ಥಿಯೇಟರ್​ನಿಂದ (Cinema Theatre) ಊರಿಗೆ ತೆರಳಿದ್ದ ಮಂಜುನಾಥ್ ಊರಿವರಿಗೆ ವಿಷಯ ಮುಟ್ಟಿಸಿದ್ದರು. ಮಂಜುನಾಥ್ ಪರವಾಗಿ ಊರ ಜನರು ಅನೇಕ ಗುಡಿಸಲುಗಳಿಗೆ ಬೆಂಕಿ ಹಚ್ಚಿ ಗಲಾಟೆ ಮಾಡಿದ್ದರು. ಈ ಕುರಿತು ಭೀಮೇಶ್ ನೀಡಿದ ದೂರಿನನ್ವಯ ಶಿಕ್ಷೆ ಪ್ರಕಟಿಸಲಾಗಿದೆ.

ಏನಿದು ಪ್ರಕರಣ?

2014 ರ ಆಗಸ್ಟ್ ನಲ್ಲಿ ಕೊಪ್ಪಳದ ಮರಕುಂಬಿಯಲ್ಲಿ ದಲಿತರ ಮೇಲೆ ಹಲ್ಲೆ ನಡೆಸಿರುವ ಪ್ರಕರಣಕ್ಕೆ ಸಂಬಂಧಿಸಿದಂರೆ ಬರೋಬ್ಬರಿ 98 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. 101 ಅಪರಾಧಿಗಳ ಪೈಕಿ ಮೂವರಿಗೆ 5 ವರ್ಷಗಳ ಕಾಲ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಲಾಗಿದೆ. ತೀರ್ಪು ನೀಡುತ್ತಿದ್ದಂತಯೇ ನ್ಯಾಯಾಲಯದ ಮುಂದೆ ಅಪರಾಧಿಗಳ ಕುಟುಂಬಸ್ಥರು ಕಣ್ಣೀರು ಹಾಕಿ, ನ್ಯಾಯ ಕೊಡಿಸ್ತೀವಿ ಎಂದು ಅಮಾಯಕರಿಗೆ ಕೋರ್ಟ್ ಶಿಕ್ಷೆ ನೀಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

ಅಲ್ಲದೇ, ಕೆಲ ಜನ ತಪ್ಪು ಮಾಡಿದ್ದಾರೆ ಅವರಿಗೆ ಶಿಕ್ಷೆ ಆಗಲಿ. ಅಮಾಯಕರಾದವರಿಗೆ ಶಿಕ್ಷೆ ಯಾಕೆ ಎಂದು ಶಿಕ್ಷೆ ಪ್ರಕಟವಾಗುತ್ತಿದ್ದಂತಯೇ ಅಪರಾಧಿಗಳು ಕಣ್ಣೀರು ಹಾಕಿದ್ದಾರೆ. ಅಲ್ಲದೇ ಜೈಲಿಗೆ ಕರೆದೊಯ್ಯುವಾಗ ಗಳಗಳನೆ ಕಣ್ಣೀರು ಹಾಕಿ, ನಾವು ತಪ್ಪೇ ಮಾಡಿಲ್ಲ ಎಂದು ಗೋಳಾಡಿದ್ದಾರೆ. ಕೊಪ್ಪಳ ಜಿಲ್ಲಾ ನ್ಯಾಯಾಲಯದ ಆವರಣ ಸಿನಿಮೀಯ ರೀತಿಯಲ್ಲಿ ಘಟನೆಗೆ ಸಾಕ್ಷಿಯಾಗಿತ್ತು.


Spread the love

About Laxminews 24x7

Check Also

ನಮಗೆ ಇ.ಡಿ ಸಮನ್ಸ್ ಮೂಲಕ ಕಿರುಕುಳ ನೀಡಲಾಗುತ್ತಿದೆ: ಡಿಸಿಎಂ ಡಿ.ಕೆ.ಶಿವಕುಮಾರ್

Spread the loveಬೆಂಗಳೂರು: ನ್ಯಾಷನಲ್ ಹೆರಾಲ್ಡ್ ಹಾಗೂ ಯಂಗ್ ಇಂಡಿಯಾ ಸಂಸ್ಥೆಗಳಿಗೆ ದೇಣಿಗೆ ನೀಡಿದ್ದಕ್ಕೆ ಜಾರಿ ನಿರ್ದೇಶನಾಲಯ (ಇ.ಡಿ) ಸಮನ್ಸ್ ನೀಡಿದೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ