Breaking News
Home / ಜಿಲ್ಲೆ / ಬಾಗಲಕೋಟೆ / ಜಮಖಂಡಿ ತಾಲ್ಲೂಕಿಗೆ ಹಿಪ್ಪರಗಿ ಮರುಸೇರ್ಪಡೆ

ಜಮಖಂಡಿ ತಾಲ್ಲೂಕಿಗೆ ಹಿಪ್ಪರಗಿ ಮರುಸೇರ್ಪಡೆ

Spread the love

ಮಖಂಡಿ: ರಾಜ್ಯದಲ್ಲಿ ಹೊಸ ತಾಲ್ಲೂಕುಗಳ ರಚನೆಯ ಬಳಿಕ ರಬಕವಿ-ಬನಹಟ್ಟಿ ತಾಲ್ಲೂಕಿಗೆ ಸೇರ್ಪಡೆಯಾಗಿದ್ದ ಹಿಪ್ಪರಗಿ ಗ್ರಾಮವನ್ನು ಜಮಖಂಡಿ ತಾಲ್ಲೂಕಿಗೆ ಮರುಸೇರ್ಪಡೆಗೊಳಿಸಿ ಸರ್ಕಾರದ ಅಧೀನ ಕಾರ್ಯದರ್ಶಿ (ಕಂದಾಯ ಇಲಾಖೆ ಭೂಮಾಪನ) ಎಸ್. ಗುರುಮೂರ್ತಿ ಅಧಿಸೂಚನೆ ಹೊರಡಿಸಿದ್ದಾರೆ.

 

ರಬಕವಿ-ಬನಹಟ್ಟಿ ತಾಲ್ಲೂಕಿನ ಹಿಪ್ಪರಗಿ ಗ್ರಾಮವನ್ನು ಜಮಖಂಡಿ ತಾಲ್ಲೂಕಿಗೆ ಸೇರ್ಪಡೆಗೊಳಿಸಿ ಜೂನ್‌ 14 ರಂದು ಅಂತಿಮ ಅಧಿಸೂಚನೆ ಹೊರಡಿಸಿದ್ದು, ಜೂನ್‌ 24ರಂದು ರಾಜ್ಯ ಪತ್ರದಲ್ಲಿ ಪ್ರಕಟಿಸಲಾಗಿದೆ.

ಅಧಿಸೂಚನೆ ಮಾಹಿತಿಯನ್ನು ಅಗತ್ಯ ಕ್ರಮದ ಸಲುವಾಗಿ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಕಚೇರಿಗಳ ಗಮನಕ್ಕೆ ತರುವಂತೆ ಹಾಗೂ ಗ್ರಾಮದ ದಾಖಲಾತಿಗಳನ್ನು ಕಾಲೋಚಿತಗೊಳಿಸಲು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಅಧೀನ ಕಾರ್ಯದರ್ಶಿಗಳು ನಿರ್ದೇಶನ ನೀಡಿದ್ದಾರೆ ಎಂದು ತಮ್ಮ ಗ್ರಾಮವನ್ನು ಜಮಖಂಡಿ ತಾಲ್ಲೂಕಿಗೆ ಮರುಸೇರ್ಪಡೆಗೊಳಿಸಲು 7 ವರ್ಷದಿಂದ ನಿರಂತರ ಹೋರಾಟ ನಡೆಸಿದ ನಾಗೇಶ ಜತ್ತಿ ತಿಳಿಸಿದ್ದಾರೆ.

ರಬಕವಿ-ಬನಹಟ್ಟಿ ತಾಲ್ಲೂಕಿಗೆ ನಮ್ಮ ಗ್ರಾಮವನ್ನು ಸೇರಿಸಿದ್ದರಿಂದ ಸರ್ಕಾರಿ ಕೆಲಸಗಳನ್ನು ಮಾಡಿಕೊಳ್ಳಲು ಬಹಳ ತೊಂದರೆ ಆಗಿತ್ತು. ಸರ್ಕಾರ ನಮ್ಮ ಗ್ರಾಮವನ್ನು ಹಳೇ ತಾಲ್ಲೂಕಿಗೆ ಮರು ಸೇರ್ಪಡೆ ಮಾಡಿದ್ದು ಸ್ವಾಗತಾರ್ಹ ಕ್ರಮವಾಗಿದೆ ಎಂದು ಹಿಪ್ಪರಗಿ ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದ್ದಾರೆ.


Spread the love

About Laxminews 24x7

Check Also

ಜಾತಿಗೊಂದು ಡಿಸಿಎಂ ಹುದ್ದೆ ಬೇಕು: ಸಚಿವ ರಾಜಣ್ಣ

Spread the love ಬಾಗಲಕೋಟೆ: ರಾಜ್ಯದ ಪ್ರಮುಖ ಸಮುದಾಯಗಳಲ್ಲಿ ಕೆಲವು ಜಾತಿಗೆ ಆದ್ಯತೆ ನೀಡಲಯ ಸಮುದಾಯ ಆಧಾರಿತ ಡಿಸಿಎಂ ಹುದ್ದೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ