Breaking News

ನ್ಯೂ ಇಂಡಿಯನ್ ಕ್ರಾಫ್ಟ್ ಪ್ರದರ್ಶನ

Spread the love

ಹಾವೇರಿ: ದೇಶದ ವಿವಿಧ ಭಾಗಗಳಲ್ಲಿ ಹೆಸರುವಾಸಿಯಾಗಿರುವ ‘ನ್ಯೂ ಇಂಡಿಯನ್ ಕ್ರಾಫ್ಟ್’ ಪ್ರದರ್ಶನ ಜೂನ್ 19ರಿಂದ ಹಾವೇರಿಯ ಮುನ್ಸಿಪಲ್ ಹೈಸ್ಕೂಲ್ ಮೈದಾನದಲ್ಲಿ ಆರಂಭವಾಗಿದ್ದು, ತರಹೇವಾರಿ ವಸ್ತುಗಳು ಖರೀದಿಗೆ ಲಭ್ಯವಿವೆ.

ದೇಶದಾದ್ಯಂತ ಪ್ರಸಿದ್ಧಿ ಪಡೆದಿರುವ ವಿವಿಧ ವಸ್ತುಗಳ ಮಾರಾಟಗಾರರ 60ಕ್ಕೂ ಹೆಚ್ಚು ಮಳಿಗೆಗಳು ಪ್ರದರ್ಶನದಲ್ಲಿವೆ.

ಹಾವೇರಿ: ನ್ಯೂ ಇಂಡಿಯನ್ ಕ್ರಾಫ್ಟ್ ಪ್ರದರ್ಶನ

ಕರ್ನಾಟಕ, ಉತ್ತರ ಪ್ರದೇಶ, ಮಧ್ಯಪ್ರದೇಶ, ಒಡಿಶಾ, ಕಾಶ್ಮೀರ, ಶಿಮ್ಲಾ, ಪಂಜಾಬ್, ಅಸ್ಸಾಂ, ಅರುಣಾಚಲ, ಪಶ್ಚಿಮ ಬಂಗಾಳ, ರಾಜಸ್ಥಾನ, ಹರಿಯಾಣ, ಉತ್ತರಾಖಂಡ, ಕೇರಳ, ಆಂಧ್ರಪ್ರದೇಶ ಮತ್ತು ತಮಿಳುನಾಡಿನ ಕುಶಲಕರ್ಮಿಗಳ ಕರಕುಶಲ ವಸ್ತುಗಳು ಪ್ರದರ್ಶನದಲ್ಲಿ ರಿಯಾಯಿತಿ ಬೆಲೆಗೆ ಲಭ್ಯವಿವೆ. ಕೈಯಿಂದ ಮಾಡಿದ ಉಡುಗೊರೆಗಳು, ಕೃತಕ ಆಭರಣಗಳು, ಅಲಂಕಾರಿಕ ವಸ್ತುಗಳು, ಗೃಹಾಲಂಕಾರ, ವಿವಿಧ ವಿನ್ಯಾಸ ಉಡುಪುಗಳು, ಸೀರೆಗಳು ಮತ್ತು ಬಟ್ಟೆಗಳು, ಪಂಜಾಬಿ ಮತ್ತು ರಾಜಸ್ಥಾನಿ ಚಪ್ಪಲ್‌ಗಳು, ಬಾಗಿಲು ಚಾಪೆ, ಹರ್ಬಲ್ ಉತ್ಪನ್ನಗಳು, ಕಾಶ್ಮೀರ್ ಶಾಲುಗಳು ಮತ್ತು ಸೂಟ್‌ಗಳು, ಖಾದಿ ಬಟ್ಟೆ, ಖಾದಿ ಕೈಮಗ್ಗಗಳು, ಗುಜರಾತಿ ಪರ್ಸ್, ಕಿಚನ್ ಸೆಟ್, ಮತ್ತು ಸಹರಾನ್‌ಪುರ ಪೀಠೋಪಕರಣಗಳು, ಚನ್ನಪಟ್ಟಣದ ಆಟಿಕೆಗಳು, ಸೌಂದರ್ಯ ವರ್ಧಕಗಳು ಪ್ರದರ್ಶನದಲ್ಲಿವೆ.


Spread the love

About Laxminews 24x7

Check Also

2000 ಕೋಟಿ ವೆಚ್ಚದ ಅಭಿವೃದ್ಧಿ ಕೆಲಸಗಳನ್ನು ಹಣವಿಲ್ಲದೆ ಮಾಡಲು ಸಾಧ್ಯವೇ ?: ಮುಖ್ಯಮಂತ್ರಿ ಸಿದ್ದರಾಮಯ್ಯ*

Spread the love 2000 ಕೋಟಿ ವೆಚ್ಚದ ಅಭಿವೃದ್ಧಿ ಕೆಲಸಗಳನ್ನು ಹಣವಿಲ್ಲದೆ ಮಾಡಲು ಸಾಧ್ಯವೇ ?: ಮುಖ್ಯಮಂತ್ರಿ ಸಿದ್ದರಾಮಯ್ಯ ಚಿಕ್ಕಬಳ್ಳಾಪುರ(ಶಿಡ್ಲಘಟ್ಟ), …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ