ನೆಲಮಂಗಲ, ಜೂನ್ 30: ಬೆಂಗಳೂರು ಗ್ರಾಮಾಂತರ (Bengaluru Rural) ಜಿಲ್ಲೆಯ ನೆಲಮಂಗಲದ (Nelamangala) ಖಾಸಗಿ ಆಸ್ಪತ್ರೆಯಲ್ಲಿ ಐಎಮ್ಎ (IMA) ಅಧ್ಯಕ್ಷರಿಗೆ ಕಪಾಳಮೋಕ್ಷ ಮಾಡಲಾಗಿದೆ.
ಡಾ.ಜಯಪ್ರಸಾದ್ ಹಲ್ಲೆಗೆ ಒಳಗಾದ ಐಎಂಎ ಅಧ್ಯಕ್ಷ. ಡಾ.ಅಬ್ದುಲ್ ಹಲ್ಲೆ ಮಾಡಿದ ಆರೋಪಿ. ಆರೋಪಿ ಡಾ.ಅಬ್ದುಲ್ ರೆಹಮಾನ್ ಶರೀಫ್ ಖಾಸಗಿ ಅಸ್ಪತ್ರೆಯಲ್ಲಿ ಮೈಕ್ರೋ ಬಯಾಲಜಿಸ್ಟ್ ಆಗಿ ಕೆಲಸ ಮಾಡುತ್ತಿದ್ದನು.
ಮಗನ ಆರೋಗ್ಯ ಹದಗೆಟ್ಟ ಹಿನ್ನೆಲೆಯಲ್ಲಿ ಡಾ. ಅಬ್ದುಲ್ ವೈದ್ಯಕೀಯ ಸಂಘದಿಂದ 25 ಲಕ್ಷ ರೂ. ಸಹಾಯ ಮಾಡಿ ಎಂದು ಐಎಂಎ ಅಧ್ಯಕ್ಷ ಡಾ.ಜಯಪ್ರಸಾದ್ ಅವರಿಗೆ ಮನವಿ ಮಾಡಿದ್ದನು.
ಆದರೆ, ಐಎಂಎ ಅಧ್ಯಕ್ಷ ಡಾ.ಜಯಪ್ರಸಾದ್ ಹಣ ಸಹಾಯ ಮಾಡಿರಲಿಲ್ಲ. ಇದರಿಂದ ಕೋಪಕೊಂಡ ಡಾ.ಅಬ್ದುಲ್ ಡಾ.ಜಯಪ್ರಸಾದ್ ಮೇಲೆ ಹಲ್ಲೆ ಮಾಡಿದ್ದಾನೆ. ಹಲ್ಲೆಯಿಂದಾಗಿ ಅಧ್ಯಕ್ಷ ಡಾ.ಜಯಪ್ರಸಾದ್ ಎಡಕಿವಿ ಮತ್ತು ಎಡ ದವಡೆಗೆ ಪೆಟ್ಟಾಗಿದೆ. ಎಡ ಕಿವಿ ತಮಟೆ ಹೊಡೆದು ಕಿವಿ ಕೇಳುತ್ತಿಲ್ಲ.