ಬೆಂಗಳೂರು : ರಾಜ್ಯಾದ್ಯಂತ ಮಳೆ ಶುರುವಾಗಿದ್ದು, ಬಿಸಿಲಿನ ಬೇಗೆಗೆ ತಂಪೆರೆದಿದೆ. ಈ ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿವಹಿಸಬೇಕು ಎಂದು ಸರ್ಕಾರ ಪ್ರಕಟಣೆ ಹೊರಡಿಸುವ ಮೂಲಕ ಎಚ್ಚರಿಕೆ ನೀಡಿದೆ.
ಮಳೆಗಾಲದಲ್ಲಿ ಹರಡುವ ರೋಗಗಳು
1) ಕಾಲರಾ
2) ಮಲೇರಿಯಾ
3) ಡೆಂಗ್ಯೂ
4) ಚಿಕುನ್ ಗುನ್ಯಾ
5) ವಿಷಮಶೀತ ಜ್ವರ
6) ಕಾಮಾಲೆ

ಮನೆಯ ಸುತ್ತ ನಿಲ್ಲುವ ನೀರಿನಿಂದ ಸೊಳ್ಳೆಗಳು ಉತ್ಪತ್ತಿಯಾಗುತ್ತದೆ. ಇದರಿಂದ ಅನೇಕ ರೋಗಗಳು ಕಾಣಿಸಿಕೊಳ್ಳುತ್ತವೆ. ಮಲೇರಿಯಾ, ಡೆಂಗ್ಯೂ, ವಿಷಮಶೀತ ಜ್ವರ, ಚಿಕುನ್ ಗುನ್ಯಾ, ಕಾಲರಾ, ಕಾಮಾಲೆ ಮುಂತಾದ ರೋಗಗಳು ಜನರನ್ನು ಕಾಡಲು ಶುರುಮಾಡುತ್ತದೆ. ಈ ಬಗ್ಗೆ ಜಾಗರೂಕತೆಯಿಂದಿರಿ. ಮನೆಯ ಸುತ್ತಮುತ್ತ ಸ್ವಚ್ಛವಾಗಿಟ್ಟುಕೊಳ್ಳಿ. ಉತ್ತಮ ಆಹಾರವನ್ನು ಸೇವಿಸಿ. ಆರೋಗ್ಯವನ್ನು ಕಾಪಾಡಿಕೊಳ್ಳಿ ಎಂದು ಸರ್ಕಾರ ಪ್ರಕಟಣೆ ಹೊರಡಿಸಿದೆ.
Laxmi News 24×7