Breaking News

ಹಿತನನ್ನೇ ಕೊಂದ ಗೆಳೆಯರು; ಮೂವರು ಆರೋಪಿಗಳು ಅರೆಸ್ಟ್

Spread the love

ಲಬುರ್ಗಿ: ಕೊಟ್ಟ ಹಣ ವಾಪಾಸ್ ಕೇಳಿದ್ದಕ್ಕೆ ಸ್ನೇಹಿತನನ್ನೇ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಕಲಬುರ್ಗಿ ಪೊಲೀಸರು ಬಂಧಿಸಿದ್ದಾರೆ.

ರೋಹನ್ ಕೊಲೆಯಾದ ದುರ್ದೈವಿ. ನಾಲ್ವರು ಗೆಳೆಯರು ಸೇರಿ ರೋಹನ್ ನನ್ನು ಚಾಕುವಿನಿಂದ ಇರುದು ಹತ್ಯೆಗೈದಿದ್ದರು.

ಕೃತ್ಯದ ಬಳಿಕ ಆರೋಪಿಗಳು ಪರಾರಿಯಾಗಿದ್ದರು.

ಪ್ರಕರಣ ದಾಖಲಿಸಿಕೊಂಡ ಪೊಲೀಸರು ಇದೀಗ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಸುನೀಲ್ ಸಿಂಗ್, ಭಗತ್ ಸಿಂಗ್, ಸೊಹೆಲ್ ಬಂಧಿತ ಆರೋಪಿಗಳು. ಓರ್ವ ಆರೋಪಿ ತಪ್ಪಿಸಿಕೊಂಡಿದ್ದು, ಆತನಿಗಾಗಿ ಹುಡುಕಾಟ ನಡೆಸಲಾಗಿದೆ.

ರೋಹನ್ ನಿಂದ ಗೆಳೆಯರು 2-3 ಸಾವಿರ ರೂಪಾಯಿ ಹಣ ಪಡೆದಿದ್ದರು. ತಿಂಗಳು ಕಳೆದರೂ ಕೊಟ್ಟ ಹಣವನ್ನು ವಾಪಾಸ್ ಕೊಟ್ಟಿರಲಿಲ್ಲ. ಫೆ.6ರಂದು ರೋಹನ್ ತನ್ನ ಸ್ನೇಹಿತರಿಗೆ ಹಣ ಹಿಂದಿರುಗಿಸುವಂತೆ ತಾಕೀತು ಮಾಡಿದ್ದನಂತೆ. ಇದೇ ವಿಚಾರವಾಗಿ ಸುನೀಲ್ ಸಿಂಗ್ ಹಾಗೂ ಗ್ಯಾಂಗ್ ರೋಹನ್ ನಂದು ಮನೆಯಿಂದ ಹೊರಗೆ ಬರುವಂತೆ ಕರೆದು ಚಿಂಚೋಳಿ ಕ್ರಾಸ್ ಬಳಿ ಕರೆದೊಯ್ದು ಬರ್ಬರವಾಗಿ ಕೊಲೆ ಮಾಡಿ ಪರಾರಿಯಾಗಿದ್ದರು.


Spread the love

About Laxminews 24x7

Check Also

ಅಸ್ಸಾಂ, ತಮಿಳುನಾಡು, ಕೇರಳಕ್ಕೆ ಏ.9 ರಂದು ಚುನಾವಣೆ – ಮೇ 4 ರಂದು ಫಲಿತಾಂಶ

Spread the loveನವದೆಹಲಿ: 4 ರಾಜ್ಯ  ಮತ್ತು 1 ಕೇಂದ್ರಾಡಳಿತ ಪ್ರದೇಶದ ಚುನಾವಣೆಗೆ ಮುಹೂರ್ತ ಫಿಕ್ಸ್‌ ಆಗಿದೆ. ಅಸ್ಸಾಂ, ತಮಿಳುನಾಡು,ಕೇರಳ, …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ