ಬೆಳಗಾವಿ, ಡಿ.23 : ಹಿಜಾಬ್ ವಾಪಾಸ್ ಪಡೆಯುತ್ತೇವೆ ಎಂಬ ಸಿಎಂ ಸಿದ್ದರಾಮಯ್ಯ( Siddaramaiah )ನವರ ಹೇಳಿಕೆ ವಿಚಾರ ‘ಒಬ್ಬರಿಗೆ ಒಂದು ಕಾನೂನು, ಇನ್ನೊಬ್ಬರಿಗೆ ಒಂದು ಕಾನೂನು ಮಾಡುವುದರಿಂದಸಮಾಜದಲ್ಲಿದೊಡ್ಡ ಕ್ಷೋಭೆ(ಅಲ್ಲೋಲ-ಕಲ್ಲೋಲ) ಉಂಟಾಗುತ್ತದೆ ಎಂದು ವಿಶ್ವ ಪ್ರಸನ್ನ ತೀರ್ಥ ಪೇಜಾವರ ಶ್ರೀಗಳು( Vishwa Prasanna Theertha Swamij ) ಹೇಳಿದರು.
ಬೆಳಗಾವಿಯಲ್ಲಿ ಮಾತನಾಡಿದ ಅವರು ‘ಕಾನೂನು ಮಾಡಲಿ ಅದು ಸಮಾಜದಲ್ಲಿ ಒಂದು ಪಂಗಡವನ್ನ ಗುರಿಯಾಗಿರಿಸಿಕೊಂಡು ಮಾಡುವುದು ಸರಿಯಲ್ಲ ಎಂದು ಹೇಳಿದರು.
ಯಾವುದೇ ಒಂದು ಪಂಗಡದ ಸಿಎಂ ಅವರಲ್ಲ
ಕರ್ನಾಟಕದ ಎಲ್ಲರ ಮುಖ್ಯಮಂತ್ರಿ ಅವರು ಆಗಿದ್ದಾರೆ ಹೊರತು ಯಾವುದೇ ಒಂದು ಪಂಗಡದ ಸಿಎಂ ಅಲ್ಲ. ಇಂತಹ ನಡುವಳಿಕೆ ಸಮಾಜದಲ್ಲಿ ಗೊಂದಲಕ್ಕೆ ಕಾರಣವಾಗುತ್ತದೆ. ಮೊನ್ನೆ ಪರೀಕ್ಷೆ ಬರೆಯುವಾಗ ಹಿಂದೂಗಳಾದವರು ಕಾಲುಂಗರ, ತಾಳಿ ತಗೆಯಬೇಕು ಒಂದು ಕಡೆ ಹೀಗೆ, ಮತ್ತೊಂದು ಪಂಗಡದವರಿಗೆ ಮುಸುಕು ದಾರಿಗಳು ಆಗಿ ಹೋಗಬಹುದು ಎನ್ನುತ್ತಾರೆ. ಇದನ್ನ ಯಾರು ಮಾಡಬಾರದು, ಇವರಂತೂ ಖಂಡಿತವಾಗಿ ಮಾಡಬಾರದು ಎಂದು ಸಿಎಂ ಸಿದ್ದರಾಮಯ್ಯನವರ ಹೇಳಿಕೆಗೆ ಶ್ರೀಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
.