Breaking News

ಜಮೀರ್ ಅಹ್ಮದ್ ಜೊತೆಗೂಡಿ C.M. ಹಾದಿ ಬಿಟ್ಟಿದ್ದಾರೆ: ಯತ್ನಾಳ್ ಕಿಡಿ

Spread the love

ವಿಜಯಪುರ, (ಡಿಸೆಂಬರ್ 22): ಬರ ಪರಿಹಾರದ ಚರ್ಚೆಗಾಗಿ ದೆಹಲಿಗೆ ತೆರಳಿದ್ದ ಸಿಎಂ ಸಿದ್ದರಾಮಯ್ಯ (Siddaramaiah) ಮತ್ತು ವಸತಿ ಸಚಿವ ಜಮೀರ್‌ ಅಹ್ಮದ್‌ ಖಾನ್‌ (Zameer Ahmad Khan) ಅವರು ಐಷಾರಾಮಿ ವಿಮಾನದಲ್ಲಿ (Luxurious flight) ಮರಳಿ ಬೆಂಗಳೂರಿಗೆ ಬಂದಿದ್ದಾರೆ. ಆದ್ರೆ, ವಿಶೇಷತೆ ವಿಮಾನದಲ್ಲಿ ಸಿಎಂ ಪ್ರಯಾಣಿಸಿದ್ದಕ್ಕೆ ಬಿಜೆಪಿ ತೀವ್ರವಾಗಿ ಖಂಡಿಸಿದೆ. ಈ ಬಗ್ಗೆ ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪ್ರತಿಕ್ರಿಯಿಸಿದ್ದು, ಸಿದ್ದರಾಮಯ್ಯನವರು ಸಮಾಜವಾದ ಬಡವರ ಪರವಾಗಿ ಏನೇನೋ ಕಥೆ ಹೊಡೆಯುತ್ತಿದ್ದರು. ಆದ್ರೆ, ಈಗ ಜಮೀರ್ ಅಹ್ಮದ್ ಜೊತೆ ಸೇರಿ ಹಾದಿ ಬಿಟ್ಟಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ವಿಜಯಪುರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಯತ್ನಾಳ್, ಸಿಎಂ ಸಿದ್ದರಾಮಯ್ಯ ಹಾಗೂ ಜಮೀರ್ ಅಹ್ಮದ್ ಖಾನ್ ಪ್ರಯಾಣ ಮಾಡಿದ ವಿಮಾನ ಫೈವ್ ಸ್ಟಾರ್ ಮಾದರಿಯಲ್ಲಿದೆ. ಸಿದ್ದರಾಮಯ್ಯನವರು ಸಮಾಜವಾದ ಬಡವರ ಪರವಾಗಿ ಏನೇನೋ ಕಥೆ ಹೊಡೆಯುತ್ತಿದ್ದರು. ಜಮೀರ್ ಅಹ್ಮದ್ ಜೊತೆಗೂಡಿ ಹಾದಿ ಬಿಟ್ಟಿದ್ದಾರೆ. ಜಮೀರ್ ಅಹ್ಮದ್ ಜೊತೆಗೆ ಯಾರು ಕೊಡುತ್ತಾರೆ ಅವರು ಹಾದಿ ಬಿಡುತ್ತಾರೆ ಎಂದು ಕಿಡಿಕಾರಿದರು.


Spread the love

About Laxminews 24x7

Check Also

ದುರ್ಗಾದೇವಿ ಮಂಜುನಾಥ ದತ್ತ ಮಂದಿರ ಟ್ರಸ್ಟ್ ಜಾಂಬೋಟ್ಟಿಯ ಕಾರ್ಯಕ್ರಮದಲ್ಲಿ ಮಾಜಿ ಶಾಸಕಿ ಎಐಸಿಸಿ ಕಾರ್ಯದರ್ಶಿ ಡಾಕ್ಟರ್ ಅಂಜಲಿ ನಿಂಬಾಳ್ಕರ್ ಭಾಗಿ

Spread the love ದುರ್ಗಾದೇವಿ ಮಂಜುನಾಥ ದತ್ತ ಮಂದಿರ ಟ್ರಸ್ಟ್ ಜಾಂಬೋಟ್ಟಿಯ ಕಾರ್ಯಕ್ರಮದಲ್ಲಿ ಮಾಜಿ ಶಾಸಕಿ ಎಐಸಿಸಿ ಕಾರ್ಯದರ್ಶಿ ಡಾಕ್ಟರ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ