Breaking News

ಹೆಸ್ಕಾಂನಲ್ಲಿ 51 ಕೋಟಿ ರೂ. ವಂಚನೆ: ಮಧ್ಯಂತರ ವರದಿ ಸಲ್ಲಿಕೆ; ಐವರು ಸಿಬ್ಬಂದಿ ಅಮಾನತು…

Spread the love

ಹುಬ್ಬಳ್ಳಿ: ಹೆಸ್ಕಾಂನ ಹುಬ್ಬಳ್ಳಿಯ ಉಗ್ರಾಣದಲ್ಲಿ ನಡೆದ 51 ಕೋಟಿ ರೂ. ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಸ್ಕಾಂನ ಲೆಕ್ಕಾಧಿಕಾರಿ ಸೇರಿದಂತೆ ಐವರನ್ನು ಅಮಾನತು ಮಾಡಲಾಗಿದೆ.

ಲೆಕ್ಕಾಧಿಕಾರಿ ಬೆಂಜಮಿನ್ ಮಸ್ಕನರ್ಸ್, ಸಹಾಯಕ ಲೆಕ್ಕಾಧಿಕಾರಿ ಯು.ಎಸ್.ಉಳ್ಳಾಗಡ್ಡಿ, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ಗಳಾದ ವಿಶ್ವನಾಥ ಶಿರಹಟ್ಟಿಮಠ, ವಸಂತಕುಮಾರ ರಾಠೋಡ, ಅಂಜಿನಪ್ಪ ಬಿ, ಅಮಾನತುಗೊಂಡವರು.

ಅವ್ಯವಹಾರದ ಕುರಿತು ತನಿಖೆ ನೆಡೆಸಲು ಐವರು ಅಧಿಕಾರಿಗಳ ತಂಡ ರಚಿಸಲಾಗಿತ್ತು. ತಂಡ ಮೂರು ವರ್ಷ ತನಿಖೆ ನಡೆಸಿ, ಮಧ್ಯಂತರ ವರದಿ ಸಲ್ಲಿಸಿದ್ದು, ಅದರನ್ವಯ ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಹಮದ್ ರೋಷನ್ ಐವರನ್ನು ಅಮಾನತುಗೊಳಿಸಿ ಆದೇಶಿಸಿದ್ದಾರೆ.

ಏನಿದು ಪ್ರಕರಣ?: ಬಸವರಾಜ್ ಮರಳಿಮಠ ಅವರು 2007 ರಿಂದ 2023ರ ಜುಲೈ 31 ರವರೆಗೆ ಹೆಸ್ಕಾಂ‌ನ ಕಾರ್ಯ ಮತ್ತು ಪಾಲನೆ ನಗರದ ವಿಭಾಗ ಮತ್ತು 2014 ರಿಂದ 2023 ಜುಲೈ 31ರವರೆಗೆ ಗ್ರಾಮೀಣ ವಿಭಾಗದ ಹುಬ್ಬಳ್ಳಿಯ ಉಗ್ರಾಣದಲ್ಲಿ ಉಗ್ರಾಣ ಪಾಲಕರಾಗಿ ಕಾರ್ಯನಿರ್ವಹಿಸಿ ನಿವೃತ್ತರಾಗಿದ್ದಾರೆ. ಈ ಅವಧಿಯಲ್ಲಿ ಅವ್ಯವಹಾರ ನಡೆದಿರುವ ಬಗ್ಗೆ ಹೆಸ್ಕಾಂಗೆ ದೂರು ಸಲ್ಲಿಕೆಯಾಗಿತ್ತು.

ಬಸವರಾಜ ಮಳಿಮಠ ಅವರು ನಾಲ್ಕು ಪ್ರತ್ಯೇಕ ಪ್ರಕರಣಗಳಲ್ಲಿ 51,69,49,054 ಮೌಲ್ಯದ ಸಾಮಗ್ರಿಗಳನ್ನು ದುರುಪಯೋಗ ಪಡಿಸಿಕೊಂಡು, ಕಂಪನಿಗೆ ಆರ್ಥಿಕ ನಷ್ಟ ಉಂಟು ಮಾಡಿದ್ದಾರೆ ಎಂದು ತನಿಖಾ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಅಮಾನತುಗೊಂಡಿರುವವರು ತಮ್ಮ ಅವಧಿಯಲ್ಲಿ ಹುಬ್ಬಳ್ಳಿ ನಗರ ವಿಭಾಗದ ಉಗ್ರಾಣದಿಂದ ಗ್ರಾಮೀಣ ವಿಭಾಗದ ಉಗ್ರಾಣಕ್ಕೆ ಭೌತಿಕವಾಗಿ ಸಾಮಗ್ರಿಗಳನ್ನು ವರ್ಗಾಯಿಸದೇ ಸಾಮಗ್ರಿಗಳನ್ನು ಮತ್ತು ಅದರ ಮೊತ್ತದಷ್ಟು ಸರಕು ಪಟ್ಟಿ, ಸುಳ್ಳು ದಾಖಲೆ ಸೃಷ್ಟಿಸಿ ಅದರ ಮೊತ್ತವನ್ನು ದುರುಪಯೋಪಡಿಸಿಕೊಂಡು, ಅವ್ಯವಹಾರದಲ್ಲಿ ಭಾಗಿಯಾಗಿ ಕರ್ತವ್ಯಲೋಪ ಎಸಗಿದ್ದಾರೆ ಎಂದು ತಿಳಿಸಲಾಗಿದೆ.


Spread the love

About Laxminews 24x7

Check Also

ಸಿಎಂ ಫೋನ್ ಮಾಡಿ ಸಮಾಧಾನಪಡಿಸಿದ ಬಳಿಕ ಕರ್ತವ್ಯಕ್ಕೆ ಹಾಜರಾದ ASP ಭರಮನಿ

Spread the loveಧಾರವಾಡ/ಬೆಂಗಳೂರು: ಸ್ವಯಂ ನಿವೃತ್ತಿಗೆ ಕೋರಿಕೆ ಸಲ್ಲಿಸಿದ್ದ ಧಾರವಾಡ ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎನ್‌.ವಿ.ಭರಮನಿ ಅವರು ಸಿಎಂ ಸಮಾಧಾನಪಡಿಸಿದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ