Breaking News

ಭೀಮಶಿ ಭರಮನ್ನವರನಿಗೆ ಬಂಧಿಸಲು ಗೋಕಾಕ ಪೊಲೀಸರಿಂದ ಸಾಧ್ಯವಾಗದ ಮಾತು: ಸತೀಶ ಜಾರಕಿಹೊಳಿ ಕಿಡಿ

Spread the love

ಗೋಕಾಕ: ವೈದ್ಯನಿಗೆ ಜೀವ ಬೆದರಿಕೆ ಮತ್ತು  ಹಣ ಸೂಲಿಗೆ ಯತ್ನಿಸಿದ ಭೀಮಶಿ ಭರಮನ್ನವರನಿಗೆ ಬಂಧಿಸಲು ಗೋಕಾಕ ಪೊಲೀಸರಿಂದ ಸಾಧ್ಯವಾಗದ ಮಾತು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಕಿಡಿಕಾರಿದ್ದಾರೆ.

ಈ ಹಿಂದೆ ಕೂಡ ಹಲವು ಪ್ರಕರಣಗಳಲ್ಲಿ ಭೀಮಶಿ ಭರಮನ್ನವರ ಹೆಸರು ಕೇಳಿ ಬಂದಿದೆ. ಆದ್ರೆ ಪ್ರಥಮ ಬಾರಿಗೆ ಡಾ. ಹೊಸಮನಿ ಅವರ ಧೈರ್ಯದಿಂದ ಪ್ರಕರಣ ಪೊಲೀಸ ಠಾಣೆಗೆ ಬಂದಿದೆ. ಅವರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ.ಆದ್ರೆ ಭರಮಣ್ಣವರನನ್ನು ಗೋಕಾಕ ಪೊಲೀಸರು ಬಂಧಿಸಲು ಆಗುವುದಿಲ್ಲ.ಯಾಕೆಂದರೆ ಅವನ ಕೈಯಲ್ಲಿ ಗೋಕಾಕ ಪೊಲೀಸರು ಇದ್ದಾರೆ. ಅವನ ತಾಳಕ್ಕೆ ಇವರು ಕುಣಿಯುತ್ತಾರೆ ಎಂದು ಗೋಕಾಕ ಪೊಲೀಸರ ಕಾರ್ಯವೈಖರಿ ಕುರಿತು ಅಸಮಾಧಾನ ವ್ಯಕ್ತಪಡಿಸಿದರು,

ಗೋಕಾಕ ಪೊಲೀಸರು ಅಮಿತ ಶಾ ರನ್ನು ಹಿಡಿಯಬಹುದು ಆದ್ರೆ ಇವರನ್ನು ಹಿಡಿಯಲು ಸಾಧ್ಯವಿಲ್ಲ ಎಂದು ವ್ಯಂಗ್ಯವಾಡಿದರು. ಗೋಕಾಕ ಪೊಲೀಸರ ಮೇಲೆ ಅವರ ನಿಯಂತ್ರಣವಿದೆ.  ಅವರ ಹಿಂದೆ ರಾಜಕೀಯ ದ್ರೋಣನ ಅಭಯ ಹಸ್ತವಿದೆ ಎಂದರು.

ಗೋಕಾಕ ಪೊಲೀಸರು ಅಸಹಾಯಕರಿದ್ದಾರೆ ಅವರನ್ನು ಬಂಧನ ಮಾಡಲು ಅವರಿಂದ ಸಾಧ್ಯವಿಲ್ಲ.ಹೀಗಾಗಿ ವೈದ್ಯರು ಕಾನೂನಿನ ಹೋರಾಟ ಮುಂದುವರೆಸಬೇಕು ಎಂದು ಸಲಹೆ ನೀಡಿದ ಅವರು ಜಿಲ್ಲಾ ಎಸ್ ಪಿ, ಗಮನಕ್ಕೆ ತರಲು ತಿಳಿಸಿದರು.

ಗೋಕಾಕ ಪೊಲೀಸರನ್ನು 5 ಜನರು ನಿಯಂತ್ರಣ ಮಾಡುತ್ತಾರೆ ಎಂದ ಅವರು ಇವರಿಂದ ಗೋಕಾಕ ತಾಲೂಕಿಗೆ ಅನ್ಯಾಯವಾಗುತ್ತಿದೆ ಎಂದು ಕಿಡಿಕಾರಿದರು. ಭರಮಣ್ಣವರ ಈ ಹಿಂದೆ  ಇಂತಹ ಹಲವು ಕೆಲಸಗಳನ್ನು ಮಾಡಿದ್ದಾನೆ ರಾಜಕೀಯ ಪ್ರಭಾವದಿಂದ ಬಚಾವ ಆಗುತ್ತಾ ಬಂದಿದ್ದಾನೆ ಮುಂದಿನ ದಿನಗಳಲ್ಲಿ ಜನರೇ ಇದಕ್ಕೆ ಉತ್ತರ ನೀಡಬೇಕು ಎಂದರು.


Spread the love

About Laxminews 24x7

Check Also

ಅಥಣಿ ನಗರದಲ್ಲಿ ಇಂದು ರೋಟರಿ ಸಂಸ್ಥೆ ಅಧೀನದಲ್ಲಿ ಶ್ರೀ ಜ್ಯೋತಿಬಾ ದೇವಸ್ಥಾನ ಆವರಣದಲ್ಲಿ ನೂತನವಾಗಿ ನಿರ್ಮಿಸಿದ ರೋಟರಿ ಉದ್ಯಾನವನ

Spread the loveಅಥಣಿ ನಗರದಲ್ಲಿ ಇಂದು ರೋಟರಿ ಸಂಸ್ಥೆ ಅಧೀನದಲ್ಲಿ ಶ್ರೀ ಜ್ಯೋತಿಬಾ ದೇವಸ್ಥಾನ ಆವರಣದಲ್ಲಿ ನೂತನವಾಗಿ ನಿರ್ಮಿಸಿದ ರೋಟರಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ