ಗೋಕಾಕ ತಾಲೂಕಿನ ಅರಭಾವಿ ಮಠದ ಶ್ರೀ ದುರದುಂಡೇಶ್ವರ ಸಿದ್ಧಸಂಸ್ಥಾನ ಮಠದ ಶ್ರೀ ಸಿದ್ದಲಿಂಗ ಮಹಾಸ್ವಾಮೀಜಿಯವರು ಲಿಂಗೈಕ್ಯರಾದ ಸುದ್ದಿ ತಿಳಿದು ತೀವ್ರ ನೋವಾಗಿದೆ ಎಂದು ಗೋಕಾಕ ಶಾಸಕ ರಮೇಶ್ ಜಾರಕಿಹೊಳಿ ,ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ , ಶಾಸಕ ಬಾಲಚಂದ್ರ ಜಾರಕಿಹೊಳಿ ಹಾಗೂ ವಿಧಾನ ಪರಿಷತ್ ಸದಸ್ಯ ಲಖನ್ ಜಾರಕಿಹೊಳಿ ಸಂತಾಪ ಸೂಚಿಸಿದ್ದಾರೆ.
ಸ್ವಾಮೀಜಿ ನಿಧನದಿಂದ ಶೋಕಸಾಗರಲ್ಲಿ ಮುಳುಗಿದ ಅಪಾರ ಭಕ್ತ ಸಮೂಹದಲ್ಲಿ ನಾವು ಕೂಡ ಭಾಗಿಯಾಗಿದ್ದೇವೆ. ಅರಭಾವಿ ಭಾಗದಲ್ಲಿ ಭಕ್ತರ ಪಾಲಿನ ದೇವರು ಆಗಿದ್ದ ಹಾಗೂ ಶಾಂತ ಸ್ವಭಾವದ ಸಾಕಾರ ಮೂರ್ತಿಯಾಗಿದ್ದ ಪೂಜ್ಯರ ಅಗಲಿಕೆಯಿಂದ ನಮ್ಮ ನಾಡಿಗೆ ಅಪಾರ ಹಾನಿಯಾಗಿದೆ ಎಂದು ಜಾರಕಿಹೊಳಿ ಸಹೋದರು ಪ್ರಕಟಣೆ ಮೂಲಕ ತಿಳಿಸಿದ್ದಾರೆ.