ಗಣೇಶ ಹಬ್ಬಕ್ಕೆ ಕೆಎಸ್‌ಆರ್‌ಟಿಸಿ ಹೆಚ್ಚುವರಿ ಬಸ್ ಘೋಷಣೆ ಬೆನ್ನಲ್ಲೆ NWKRTC ಸಹ ಪ್ರಯಾಣಿಕರ ಅನುಕೂಲಕ್ಕಾಗಿ ಹೆಚ್ಚುವರಿ ಬಸ್ ಬಿಡುವುದಾಗಿ ತಿಳಿಸಿದೆ.
ವಾಯವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (NWKRTC)ಯಿಂದ ಗೌರಿ ಗಣೇಶದ ಮುಗಿಸಿ ಉತ್ತರ ಕರ್ನಾಟಕದಿಂದ ತಮ್ಮ ಕೆಲಸದ ಊರುಗಳಿಗೆ ತೆರಳುವವರಿಗೆ ನೆರವಾಗಲೆಂದು 500ಕ್ಕೂ ಅಧಿಕ ವಿಶೇಷ ಬಸ್‌ಗಳನ್ನು ಕಾರ್ಯಾಚರಣೆ ನಡೆಸುವುದಾಗಿ ತಿಳಿಸಿದೆ.
ಸೋಮವಾರ ಗಣೇಶ ಚತುರ್ಥಿ ಇದೆ. ಅಲ್ಲದೇ ಶನಿವಾರ, ಭಾನುವಾರ ವಾರಾಂತ್ಯ ಇರುವುದರಿಂದ ಬಹುತೇಕ ಮಂದಿ ಗುರುವಾರ ಮತ್ತು ಶುಕ್ರವಾರ ರಾತ್ರಿಯಿಂದ ಉತ್ತರ ಕರ್ನಾಟಕ, ಪುಣೆ, ಕಲ್ಯಾಣ ಕರ್ನಾಟಕದ ಜಿಲ್ಲೆಗಳು ಸೇರಿದಂತೆ ನಾನಾ ಕಡೆ ತೆರಳುತ್ತಾರೆ.
ಹಬ್ಬ ಮುಗಿಸಿದ ಬಳಿಕ ಅವರೆಲ್ಲರಿಗೂ ಹಬ್ಬದ ಮರುದಿನ ತೆರಳಲು ಕಷ್ಟವಾಗಬಾರದೆಂದು NWKRTC ಯಿಂದ ಹೆಚ್ಚುವರಿ ಬಸ್ ಬಿಡಲಾಗುತ್ತದೆ. ಬೆಳಗಾವಿ, ಹುಬ್ಬಳ್ಳಿ, ಧಾರವಾಡ, ಹಾವೇರಿ, ಗದಗ, ಉತ್ತರ ಕನ್ನಡ, ಬಾಗಲಕೋಟೆ ಜಿಲ್ಲೆ ಸೇರಿದಂತೆ ಇನ್ನಿತರ ಜಿಲ್ಲೆಗಳಿಗೆ ಹೆಚ್ಚುವರಿ ಬಸ್ ಸಂಚರಿಸಲಿವೆ.
NWKRTC ನಿಗಮವು ಮಲ್ಟಿ ಎಕ್ಸೆಲ್ (ವೋಲ್ವೊ), ಸ್ಲೀಪರ್, ರಾಜಹಂಸ ಸೇರಿ 50 ಐಶಾರಾಮಿ ಬಸ್ಸುಗಳು ಹಾಗೂ 200 ವೇಗಧೂತ ಸಾರಿಗೆ ಮತ್ತು 250ಕ್ಕೂ ಹೆಚ್ಚು ಹೆಚ್ಚುವರಿ ಬಸ್ಸುಗಳನ್ನು ಕಾರ್ಯಾಚರಣೆ ಮಾಡಲಾಗುವುದು ಎಂದು ತಿಳಿಸಿದೆ.
ಹೀಗಾಗಿ ಹಬ್ಬಕ್ಕೆ ಬರುವವರಿಗೆ ಅನುಕಲವಾಗುವಂತೆ ಬೆಂಗಳೂರು ಮತ್ತಿತರ ಸ್ಥಳಗಳಿಂದ ಹುಬ್ಬಳ್ಳಿ, ಧಾರವಾಡ, ಗದಗ, ಬೆಳಗಾವಿ, ಉತ್ತರ ಕನ್ನಡ, ಹಾವೇರಿ, ಬಾಗಲಕೋಟೆ ಮತ್ತಿತರ ಪ್ರಮುಖ ಸ್ಥಳಗಳಿಗೆ ಹೆಚ್ಚುವರಿ ಬಸ್ಸುಗಳು ಸಂಚರಿಸಲಿವೆ. ವೋಲ್ವೊ, ಸ್ಲೀಪರ್, ರಾಜಹಂಸ ಮುಂತಾದ 50 ಪ್ರತಿಷ್ಠಿತ ಐಶಾರಾಮಿ ಬಸ್ಸುಗಳು ಹಾಗೂ 200 ವೇಗದೂತ ಸಾರಿಗೆ ಸೇರಿದಂತೆ 250ಕ್ಕೂ ಹೆಚ್ಚು ಹೆಚ್ಚುವರಿ ಬಸ್ಸುಗಳನ್ನು ಕಾರ್ಯಾಚರಣೆ ಮಾಡಲಿವೆ.
ಇದಷ್ಟೇ ಅಲ್ಲದೇ ಜಿಲ್ಲೆ ಸ್ಥಳೀಯ ಬಸ್ ನಿಲ್ದಾಣಗಳಿಂದ ವಿವಿಧ ಜಿಲ್ಲೆಗಳಿಗೆ ಬೇಕಾಗುವಷ್ಟು, ಅಗತ್ಯತೆ ತಕ್ಕಂತೆ ಸಾರಿಗೆ ಬಸ್ ಓಡಾಟಕ್ಕೆ ನಿರ್ಧರಿಸಲಾಗಿದೆ. ಹೀಗಾಗಿ ಯಾವ ಭಾಗದ ಜನರಿಗೂ ಹಬ್ಬದ ನಂತರ ತೊಂದರೆ ಅಗದಂತೆ ನಿಗಮ ನೋಡಿಕೊಳ್ಳಲಿದೆ. ಇದರಿಂದ ಬೆಂಗಳೂರು, ಮಂಗಳೂರು, ಪುಣೆ, ಹೈದರಾಬಾದ್ ಕಡೆಗೆ ಹೋಗುವ ಪ್ರಯಾಣಿಕರಿಗೆ ನೆರವಾಗಲಿದೆ.