ಕಾರವಾರ: ನಗರದ ಲಂಡನ್ ಬ್ರಿಜ್ ಬಳಿ ಸೇತುವೆಯಿಂದ ಮಂಗಳವಾರ ಬೆಳಗ್ಗೆ ಕಾರೊಂದು ಕೆಳಗೆ ಬಿದ್ದು ಇಬ್ಬರು ಪ್ರಯಾಣಿಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮೃತರನ್ನು ಕಿರಣ್ (28) ಹಾಗೂ ರಾಕೇಶ್ ಸಿ.ಆರ್ (28) ಎಂದು ಗುರುತಿಸಲಾಗಿದೆ. ಮೃತರು ಚಿಕ್ಕಮಗಳೂರಿನ ನಿವಾಸಿಗಳೆಂದು ತಿಳಿದು ಬಂದಿದೆ. ಕಾರ್ ನಲ್ಲಿದ್ದ ಇನ್ನಿಬ್ಬರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಕಾರು ಅಂಕೋಲಾದಿಂದ ಗೋವಾ ಕಡೆಗೆ ಹೋಗುತ್ತಿದ್ದಾಗ ಈ ಅವಘಡ ನಡೆದಿದೆ. ಅಪಘಾತಕ್ಕೆ ನಿಖರ ಕಾರಣ ತಿಳಿದ ಬಂದಿಲ್ಲ. ಕಾರವಾರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Laxmi News 24×7