Breaking News

ಪ್ರಲ್ಹಾದ್ ಜೋಶಿ ಅವರು ನಮಗೆ ಭ್ರಷ್ಟಾಚಾರಿಗಳು ಅಂತಾರೆ. ಅನಿಲ್ ಅಂಬಾನಿ ಕಂಪನಿ ಅವರು ಒಂದು ಸೈಕಲ್ ನೂ ಮಾಡಿಲ್ಲ. ಅವರಿಗೆ ಹೆಲಿಕಾಪ್ಟರ್ ಮಾಡಲು ಕೊಟ್ಟಿದ್ದಾರೆ.

Spread the love

ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಮಾಡಿದ ಸಾಧನೆ ಪ್ರಚಾರ ಗಿಟ್ಟಿಸಿಕೊಳ್ಳೋದು, ಅದನ್ನು ಬಿಟ್ಟು ದೇಶಕ್ಕೆ ಯಾವುದೇ ಲಾಭವಾಗಿಲ್ಲ ಎಂದು ಸಚಿವ ಸಂತೋಷ ಲಾಡ್ ಕಿಡಿಕಾರಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಅವರು 10 ವರ್ಷ ಆಯ್ತು ಲೋಕ್ ಪಾಲ್ ಬಗ್ಗೆ ಪಾರ್ಲಿಮೆಂಟ್ ನಲ್ಲಿ ಮಾತನಾಡುತ್ತಿಲ್ಲ,

ಆದರೆ ಕಾಂಗ್ರೆಸ್ ಪಕ್ಷದ ಬಗ್ಗೆ ಬಹಳ ಮಾತನಾಡುತ್ತಿದ್ದಾರೆ. ಈಗಾಗಲೇ ಕ್ಯಾಗ್ ರಿಪೋರ್ಟ್ ಬಂದಾಗಿದೆ. ರೆಫೈಲ್ ಡೀಲ್ ಮುಚ್ಚಿ ಹೋಗಿದೆ ನಾನು ಮಾತನಾಡಲ್ಲ, ಈಗಿರುವ ಕ್ಯಾಗ್ ರಿಪೋರ್ಟ್ ನಲ್ಲಿ 6 ಜಾಗದಲ್ಲಿ ಸ್ಕ್ಯಾಮ್ ಆಗಿದೆ. ದೇಶ ಡೆಮೋಕ್ರೆಸಿ ಸೇಟಿಫೈ ನಲ್ಲಿ ನಡೀತಾ ಇಲ್ಲಾ ಎಂದು ಕಳವಳ ವ್ಯಕ್ತಪಡಿಸಿದರು.

ಇಂದಿರಾ ಗಾಂಧಿ, ಮನಮೋಹನ ಸಿಂಗ್ ಸೇರಿದಂತೆ ಹಲವರ ಕಾಲದಲ್ಲಿ ಆಗಿರುವ ಕೇಂದ್ರ ಸರ್ಕಾರದ ಸೆಂಟರ್ ಗಳು ಹೆಚ್ಚು ಮಾರಾಟ ಆಗಿರೋದು ಬಿಜೆಪಿಯವರ ಕಾಲದಲ್ಲಿ, ಪ್ರಚಾರ ಗಿಟ್ಟಿಸಿಕೊಳ್ಳೋದನ್ನ ಬಿಟ್ರೆ ಪ್ರಧಾನಿ ಮೋದಿ ಅವರಿಂದ ಕಳೆದ 10 ವರ್ಷದಲ್ಲಿ ದೇಶಕ್ಕೆ ಯಾವುದೇ ಲಾಭ ಆಗಿಲ್ಲ. ಚುನಾವಣೆ ಇದೆ ಗಿಮಿಕ್ ಸಹಿತ ನಡಿಯುತ್ತೆ. ಸಾವಿರಾರು ಕೋಟಿ ಸರ್ಕಾರದ ದುಡ್ಡು ಖರ್ಚು ಮಾಡಿ ಪ್ರಚಾರ ಗಿಟ್ಟಿಸಿಕೊಳ್ಳೋದು ಅವರ ತಂತ್ರ. ಮುಂದಿನ ದಿನಗಳಲ್ಲಿ ಯಾರು ಸರಿ, ತಪ್ಪು ಅಂತ ಜನ ಪಾಠ ಕಲಿಸ್ತಾರೆ ಎಂದು ಹರಿಹಾಯ್ದರು.

ಪ್ರಲ್ಹಾದ್ ಜೋಶಿ ಅವರು ನಮಗೆ ಭ್ರಷ್ಟಾಚಾರಿಗಳು ಅಂತಾರೆ. ಅನಿಲ್ ಅಂಬಾನಿ ಕಂಪನಿ ಅವರು ಒಂದು ಸೈಕಲ್ ನೂ ಮಾಡಿಲ್ಲ. ಅವರಿಗೆ ಹೆಲಿಕಾಪ್ಟರ್ ಮಾಡಲು ಕೊಟ್ಟಿದ್ದಾರೆ.

ಇದು ಯಾವ ಧರ್ಮ, ಅನುಭವ ಇಲ್ಲದ ಕಂಪನಿ ಅವರಿಗೆ ಫ್ರಾನ್ಸ್ ಕಂಪನಿ ಅವರಿಗೆ ನೇರವಾಗಿ ಕಾಂಟ್ರಾಕ್ಟ್ ಕೊಡ್ತೀರಿ ಅಂದ್ರೆ, ಇದು ನೇರ ಭ್ರಷ್ಟಾಚಾರ ತಾನೇ? ಎಂದು ಪ್ರಶ್ನೆ ಮಾಡಿದರು.


Spread the love

About Laxminews 24x7

Check Also

ರಾಜ್ಯದ ಹಲವೆಡೆ ವರುಣನ ಅಬ್ಬರ – ಬಿಸಿಲ ಬೇಗೆಗೆ ಬೆಂದಿದ್ದ ಭೂಮಿಗೆ ತಂಪೆರೆದ ಆಲಿಕಲ್ಲು ಮಳೆ

Spread the loveಬೆಂಗಳೂರು: ರಾಜ್ಯದ ಹಲವೆಡೆ ವರುಣನ ಅಬ್ಬರ ಜೋರಾಗಿದ್ದು, ಕೊಡಗು, ಹಾಸನ ಸೇರಿದಂತೆ ಹಲವೆಡೆ ಕೆಲ ಜಿಲ್ಲೆಗಳಲ್ಲಿ ಮಳೆರಾಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ