Home / ರಾಜಕೀಯ / ಕೋಲಾರದಲ್ಲಿ ಮಾರ್ಗದರ್ಶಿ ಚಿಟ್ಸ್​​​ನ 109ನೇ ಶಾಖೆ ಉದ್ಘಾಟನೆ

ಕೋಲಾರದಲ್ಲಿ ಮಾರ್ಗದರ್ಶಿ ಚಿಟ್ಸ್​​​ನ 109ನೇ ಶಾಖೆ ಉದ್ಘಾಟನೆ

Spread the love

ಕೋಲಾರ: ಕರ್ನಾಟಕದಲ್ಲಿ ಮಾರ್ಗದರ್ಶಿ ಚಿಟ್ಸ್​​​​​ನ 22ನೇ ಶಾಖೆ ಉದ್ಘಾಟನೆಗೊಂಡಿದೆ. ಸಂಸ್ಥೆಯ ಒಟ್ಟಾರೆ 109 ನೇ ಶಾಖೆ ಇದಾಗಿದೆ. ಕಂಪನಿ ಎಂಡಿ ಶೈಲಜಾ ಕಿರಣ್ ಅವರು ಈ ಶಾಖೆಯನ್ನು ವರ್ಚುಯಲ್​ ಆಗಿ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಶಾಖೆಯ ಅಧಿಕಾರಿಗಳು, ಸಿಬ್ಬಂದಿ ಹಾಗೂ ಚಂದಾದಾರರು ಭಾಗವಹಿಸಿದ್ದರು.

ನೂತನ ಶಾಖೆ ಉದ್ಘಾಟನೆ ಬಳಿಕ ಮಾತನಾಡಿದ ಮಾರ್ಗದರ್ಶಿ ಚಿಟ್ಸ್​ ನಿರ್ದೇಶಕರಾದ ಪಿ ಲಕ್ಷ್ಮಣ್​ರಾವ್​, ಕೋಲಾರ ಜನತೆಯ ಸಹಕಾರ ಅಮೂಲ್ಯವಾದದ್ದು ಎಂದು ಹೇಳಿದರು. ಜನತೆ ಮಾರ್ಗದರ್ಶಿ ಚಿಟ್ಸ್​ ಕಂಪನಿಯಿಂದ ಸೌಲಭ್ಯಗಳನ್ನು ಪಡೆಯಬಹುದು. ಇಂದಿನವರೆಗೆ ಕೋಲಾರ ಶಾಖೆಯಲ್ಲಿ 19 ಕೋಟಿ ವಹಿವಾಟು ನಡೆಸಲಾಗಿದ್ದು, ಮಾಸಾಂತ್ಯಕ್ಕೆ 26 ಕೋಟಿ ರೂಗಳ ಗುರಿ ಹೊಂದಲಾಗಿದೆ ಎಂದು ತಿಳಿಸಿದರು. ಕೋಲಾರ ಜಿಲ್ಲೆಯ ಸಾರ್ವಜನಿಕರ ಅಗತ್ಯತೆಗಳಿಗೆ ಅನುಸಾರವಾಗಿ ಸಂಸ್ಥೆಯು ತನ್ನ ಚೀಟಿ ಸೇವೆಗಳನ್ನು ನೀಡಲು ಸದಾ ಬದ್ಧವಾಗಿದೆ ಎಂದರು. ಕೋಲಾರ ಶಾಖೆಯಲ್ಲಿ 1 ಲಕ್ಷದಿಂದ 30 ಲಕ್ಷ ಮೊತ್ತದ ವರೆಗಿನ ಚೀಟಿ ಗುಂಪುಗಳನ್ನು ಪ್ರಾರಂಭಿಸಲಾಗಿದೆ. ಚೀಟಿ ಗುಂಪುಗಳು ಕ್ರಮವಾಗಿ 25, 30, 40 ಮತ್ತು 50 ತಿಂಗಳುಗಳ ಅವಧಿಯದ್ದಾಗಿವೆ.


Spread the love

About Laxminews 24x7

Check Also

ಅಧಿಕಾರಿಗಳ ಭರವಸೆ: ಧರಣಿ ಅಂತ್ಯ.

Spread the love ರಾಮದುರ್ಗ: ಗ್ರಾಮ ಪಂಚಾಯ್ತಿಗಳಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರಗಳ ಹಣವನ್ನು ಸಂಬಂಧಿಸಿದ ಅಧಿಕಾರಿಗಳಿಂದ ಸರ್ಕಾರಕ್ಕೆ ಭರಿಸುವ ಭರವಸೆಯನ್ನು ತಾಲ್ಲೂಕು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ