Breaking News

ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರವೆಸಗಿದ ಆರೋಪದಡಿ ಖಾಸಗಿ ಶಾಲೆಯ ಪ್ರಾಂಶುಪಾಲರನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.

Spread the love

ಬೆಂಗಳೂರು : ಬಾಲಕಿ ಮೇಲೆ ಅತ್ಯಾಚಾರವೆಸಗಿದ ಗಂಭೀರ ಸ್ವರೂಪದ ಆರೋಪದಡಿ ಖಾಸಗಿ ಶಾಲೆಯ ಪ್ರಾಂಶುಪಾಲರನ್ನು ವರ್ತೂರು ಠಾಣೆಯ ಪೊಲೀಸರು ಬಂಧಿಸಿದ್ದಾರೆ.

2ನೇ ತರಗತಿ ವ್ಯಾಸಂಗ ಮಾಡುತ್ತಿದ್ದ 10 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪವನ್ನು ಪ್ರಾಂಶುಪಾಲ ಎದುರಿಸುತ್ತಿದ್ದಾರೆ.

ನಡೆದಿದ್ದೇನು?: ನರ ದೌರ್ಬಲ್ಯ ಸಮಸ್ಯೆಯಿಂದ ಬಳಲುತ್ತಿದ್ದ ಬಾಲಕಿ ಎಂದಿನಂತೆ ನಿನ್ನೆ (ಗುರುವಾರ) ಬೆಳಗ್ಗೆ 8:30ಕ್ಕೆ ಶಾಲೆಗೆ ಹೋಗಿದ್ದಳು. ಪ್ರಾಂಶುಪಾಲರು ಶಾಲೆಯ ಪಕ್ಕದಲ್ಲಿಯೇ ಇದ್ದ ತನ್ನ ಮನೆಗೆ ಬಾಲಕಿಯನ್ನು ಕರೆದೊಯ್ದಿದ್ದರು. ನಂತರ ಕೇಕ್ ನೀಡಿ‌ ಕಳುಹಿಸಿದ್ದಾರೆ. ಸಂಜೆ ಬಾಲಕಿ ಮನೆಗೆ ಬಂದಿದ್ದಳು. ಈ ವೇಳೆ ಹೊಟ್ಟೆನೋವು ಎಂದು ಪೋಷಕರಿಗೆ ತಿಳಿಸಿದ್ದಾಳೆ. ಮಗಳ ಒಳಉಡುಪಿನಲ್ಲಿ ರಕ್ತಸ್ರಾವವಾಗಿರುವುದನ್ನು ಗಮನಿಸಿದ ತಾಯಿ ಕೂಡಲೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದರು. ಇದಾದ ನಂತರ ಶಾಲೆಯಲ್ಲಿ ನಡೆದಿರುವ ಘಟನೆಯನ್ನು ಬಾಲಕಿ ತಾಯಿಗೆ ವಿವರಿಸಿದ್ದಾಳೆ.

ಪೋಕ್ಸೋ ಪ್ರಕರಣ ದಾಖಲು: ವರ್ತೂರು ಠಾಣೆಯಲ್ಲಿ ಆರೋಪಿ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.ಡಿಸಿಪಿ ಪ್ರತಿಕ್ರಿಯೆ: “ವರ್ತೂರ್​ ಠಾಣಾ ವ್ಯಾಪ್ತಿಯ ಕಾನ್ವೆಂಟ್​ ಶಾಲೆಯ ಪ್ರಾಂಶುಪಾಲರು 10 ವರ್ಷದ ಬಾಲಕಿಯನ್ನು ಶಾಲೆಯ ಪಕ್ಕದಲ್ಲೇ ಇದ್ದ ತನ್ನ ಮನೆಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾರೆ. ಘಟನೆಯನ್ನು ಸಂಜೆ 4:30ಕ್ಕೆ ಮನೆಗೆ ಹಿಂತಿರುಗಿದ ಮಗು ತಾಯಿಯ ಮುಂದೆ ಹೇಳಿಕೊಂಡಿದೆ. ತಾಯಿ ಮಗುವನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ನಂತರ ನಮಗೆ ಮಾಹಿತಿ ಬಂತು. ನಾವು ವಿಚಾರಣೆ ಮಾಡಿದಾಗ ಬಾಲಕಿ ಹೇಳುತ್ತಿರುವುದು ನಿಜವೆಂದು ತಿಳಿಯಿತು. ಪ್ರಾಂಶುಪಾಲರನ್ನು ಬಂಧಿಸಿದ್ದೇವೆ” ಎಂದು ವೈಟ್​ ಫೀಲ್ಡ್‌​ ವಿಭಾಗದ ಡಿಸಿಪಿ ಗಿರೀಶ್ ತಿಳಿಸಿದರು.


Spread the love

About Laxminews 24x7

Check Also

ಶಾಸಕ ಕೆ.ಸಿ. ವೀರೇಂದ್ರಗೆ ಸೇರಿದ ಕೆಜಿಗಟ್ಟಲೇ ಚಿನ್ನ, ಐಷಾರಾಮಿ ಕಾರುಗಳು ಸೇರಿ 100 ಕೋಟಿ ರೂ. ಗೂ ಅಧಿಕ ಮೌಲ್ಯದ ಸ್ವತ್ತು ಜಪ್ತಿ

Spread the loveಶಾಸಕ ಕೆ.ಸಿ. ವೀರೇಂದ್ರಗೆ ಸೇರಿದ ಕೆಜಿಗಟ್ಟಲೇ ಚಿನ್ನ, ಐಷಾರಾಮಿ ಕಾರುಗಳು ಸೇರಿ 100 ಕೋಟಿ ರೂ. ಗೂ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ