ಹುಕ್ಕೇರಿ ತಾಲೂಕಿನ ನೂತನ ತಹಸಿಲ್ದಾರರಾಗಿ ಮಂಜುಳಾ ನಾಯಿಕ ಅಧಿಕಾರ ಸ್ವೀಕರಿಸಿದರು.
ನೂತನ ದಂಡಾಧಿಕಾರಿಗಳಿಗೆ ಗ್ರೇಡ್ 2 ತಹಸಿಲ್ದಾರ ಕಲ್ಲೋಳಿ ಮತ್ತು ಕಂದಾಯ ಸಿಬ್ಬಂದಿಗಳು ಹೂಗುಚ್ಚ ನೀಡಿ ಸ್ವಾಗತಿಸಿದರು.
ನಂತರ ಮಾದ್ಯಮಗಳೊಂದಿಗೆ ಮಾತನಾಡಿದ ಮಂಜುಳಾ ನಾಯಿಕ ಬೆಳಗಾವಿ ಮತ್ತು ಧಾರವಾಡ ಜಿಲ್ಲೆಗಳಲ್ಲಿ ಸೇವೆ ಸಲ್ಲಿಸಿ ಈಗ ರಾಜ್ಯ ಸರ್ಕಾರದ ನಿದೇರ್ಶನ ಮೇರೆಗೆ ಹುಕ್ಕೇರಿ ತಾಲೂಕಿನಲ್ಲಿ ಸೇವೆಗೆ ಇಂದು ಹಾಜರಾಗಿದ್ದೆನೆ , ಕಂದಾಯ ಸಿಬ್ಬಂದಿ ಮತ್ತು ವಿವಿಧ ಇಲಾಖೆಗಳ ಸಹಕಾದಿಂದ ಸರ್ಕಾರದ ಯೋಜನೆಗಳು ಕಟ್ಟ ಕಡೆಯ ಜನರಿಗೆ ತಲುಪಿಸುವ ಪ್ರಾಮಾಣಿಕ ಪ್ರಯತ್ನ ಮಾಡುವೆ ಎಂದರು
ಈ ಸಂದರ್ಭದಲ್ಲಿ ಉಪ ತಹಸಿಲ್ದಾರ ಎನ್ ಆರ್ ಪಾಟೀಲ, ಕಂದಾಯ ನಿರಿಕ್ಷಕ ಸಾರಾಪೂರೆ, ಗ್ರಾಮ ಲೆಕ್ಕಾಧಿಕಾರಿ ರಾಟೋಡ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.