Breaking News

ಜನಸ್ನೇಹಿ ಪೊಲೀಸ್ ವ್ಯವಸ್ಥೆಗೆ ಆದ್ಯತೆ’: ಬೆಳಗಾವಿ ಉತ್ತರ ವಲಯ ನೂತನ ಐಜಿಪಿ ವಿಕಾಸ್‌ ಕುಮಾರ್ ಅಧಿಕಾರ ಸ್ವೀಕಾರ

Spread the love

ಬೆಳಗಾವಿ: ಮರಳು ಮಾಫಿಯಾ ಸೇರಿದಂತೆ ‌ಇನ್ನಿತರ ಅಕ್ರಮ ಚಟುವಟಿಕೆಗಳಿಗೆ ಕಡಿವಾಣಕ್ಕೆ ಕ್ರಮ ವಹಿಸುವುದು ಸೇರಿದಂತೆ ಜನಸ್ನೇಹಿ ಪೊಲೀಸ್ ವ್ಯವಸ್ಥೆಗೆ ಆದ್ಯತೆ ‌ನೀಡಲಾಗುವುದು ಎಂದು ಉತ್ತರ ವಲಯ ನೂತನ ಐಜಿಪಿ ವಿಕಾಶಕುಮಾರ್​ ವಿಕಾಸ್‌ ಹೇಳಿದರು.

ಬೆಳಗಾವಿಯ ಐಜಿಪಿ ಕಚೇರಿಯಲ್ಲಿ ಇಂದು ಉತ್ತರ ವಲಯ ನೂತನ ಐಜಿಪಿ ಆಗಿ ಅವರು ಅಧಿಕಾರ ಸ್ವೀಕರಿಸಿದರು. ನೂತನ ಐಜಿಪಿಯನ್ನು ಬೆಳಗಾವಿ ಎಸ್ಪಿ ಡಾ.ಸಂಜೀವ್ ಪಾಟೀಲ ಆತ್ಮೀಯವಾಗಿ ಬರಮಾಡಿಕೊಂಡರು. ಇದಕ್ಕೂ ಮೊದಲು ಜಿಲ್ಲಾ ಪೊಲೀಸರಿಂದ ಗೌರವ ವಂದನೆ ಸ್ವೀಕರಿಸಿದರು.

ಅಧಿಕಾರ ‌ಸ್ವೀಕರಿಸಿದ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಐಜಿಪಿ ಐಜಿಪಿ ವಿಕಾಶಕುಮಾರ್​ ವಿಕಾಸ್‌, ಬೆಳಗಾವಿ ನನಗೇನೂ ಹೊಸದಲ್ಲ. 2005ರಲ್ಲಿ ಪ್ರೊಬೇಷನರಿ ಆಗಿ ಎಂಟು ತಿಂಗಳು ಕೆಲಸ ಮಾಡಿದ್ದೇನೆ. ಪ್ರೊಬೇಷನರಿ ಅವಧಿಯಲ್ಲಿ ದೊರೆತ ಪ್ರೀತಿ ಮರೆಯಲು ಸಾಧ್ಯವಿಲ್ಲ. ಒಳ್ಳೆಯ ಭಾವನೆಯಿಂದ ಇಂದು ಐಜಿ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದೇನೆ ಎಂದರು.

ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದು ನಮ್ಮ ಮೊದಲ ಆದ್ಯತೆ. ಉತ್ತರ ವಲಯ ವ್ಯಾಪ್ತಿಯಲ್ಲಿ ಬರುವ ಜಿಲ್ಲೆಗಳಲ್ಲಿ ಸಮನ್ವಯದಿಂದ ಎಲ್ಲರಿಗೂ ಮಾರ್ಗದರ್ಶನ ಮಾಡಬೇಕಾಗುತ್ತದೆ. ಆ ನಿಟ್ಟಿನಲ್ಲಿ ಒಂದೊಳ್ಳೆ ತಂಡವಾಗಿ ಕೆಲಸ ಮಾಡುತ್ತೇವೆ. ಯಾವುದೇ ಅಕ್ರಮ ಚಟುವಟಕೆಗಳಿಗೆ ಅವಕಾಶ ಮಾಡಿ ಕೊಡುವುದಿಲ್ಲ ಎಂದು ಭರವಸೆ ಕೊಟ್ಟರು.

ಬೆಳಗಾವಿ ವಲಯದಲ್ಲಿ ಅಕ್ರಮ ಕಂಟ್ರಿ ಪಿಸ್ತೂಲ್ ಪೂರೈಕೆ ತಡೆಗೆ ಕ್ರಮ ವಹಿಸುತ್ತೇನೆ. ಭೀಮಾ ತೀರದಲ್ಲಿ ಶಾಂತಿ ನೆಲೆಸಲು ಪೂರಕ ವಾತಾವರಣ ನಿರ್ಮಿಸಲಾಗುವುದು. ಜನರ ಬಳಿಗೆ ಪೊಲೀಸಿಂಗ್ ಹೋಗಬೇಕು, ಆ ನಿಟ್ಟಿನಲ್ಲಿ ನಮ್ಮ ಸಿಬ್ಬಂದಿಗೆ ಮಾರ್ಗದರ್ಶನ ಮಾಡುತ್ತೇನೆ.

ಕಳೆದ ಹತ್ತು ವರ್ಷದಲ್ಲಿ ಪೊಲೀಸ್ ವ್ಯವಸ್ಥೆಯಲ್ಲಿ ಸಾಕಷ್ಟು ಬದಲಾವಣೆ ಆಗಿದೆ. ಸಾರ್ವಜನಿಕರ ಜೊತೆಗೆ ಪೊಲೀಸರ ಸಂಬಂಧ ಬಹಳ ನಿಕಟವಾಗಿದೆ. ಇನ್ನಿತರ ವಿಷಯಗಳಿಗೆ ಸಂಬಂಧಿಸಿದಂತೆ ಆಯಾ ಜಿಲ್ಲೆಗಳ ಎಸ್ಪಿಗಳಿಂದ ಮಾಹಿತಿ ಪಡೆದುಕೊಂಡು ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.


Spread the love

About Laxminews 24x7

Check Also

ಚಾತುರ್ಮಾಸ ಹಿನ್ನೆಲೆ ಜೈನ ಮುನಿ ಶಿಷ್ಯೆಯರ ಪುರಪ್ರವೇಶ ಬೆಳಗಾವಿ ಜೈನ ಸಮಾಜದಿಂದ ಭವ್ಯ ಮೆರವಣಿಗೆಯೊಂದಿಗೆ ಸ್ವಾಗತ

Spread the love ಚಾತುರ್ಮಾಸ ಹಿನ್ನೆಲೆ ಜೈನ ಮುನಿ ಶಿಷ್ಯೆಯರ ಪುರಪ್ರವೇಶ ಬೆಳಗಾವಿ ಜೈನ ಸಮಾಜದಿಂದ ಭವ್ಯ ಮೆರವಣಿಗೆಯೊಂದಿಗೆ ಸ್ವಾಗತ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ