ಶಿವಮೊಗ್ಗ : ಅಕ್ರಮ ಸಂಬಂಧ ಹೊಂದಿದ್ದಾನೆ ಎಂದು ಆರೋಪಿಸಿ ಯುವಕರ ಗುಂಪೊಂದು ಯುವಕನನ್ನು ಮಾರಾಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.
ಇಲ್ಲಿನ ಇಲಿಯಾಜ್ ನಗರದ 100 ಅಡಿ ರಸ್ತೆಯಲ್ಲಿ ಕೊಲೆ ನಡೆದಿದ್ದು, ಆಸೀಫ್(25) ಮೃತ ವ್ಯಕ್ತಿ. ಈತನನ್ನು ಜಬಿವುಲ್ಲಾ (25) ಹಾಗೂ ಇತರ ಮೂವರು ಯುವಕರು ಸೇರಿ ಕೊಲೆ ಮಾಡಿದ್ದಾರೆ.
ಮೃತ ಆಸಿಫ್, ಇಲಿಯಾಜ್ ನಗರದ 100 ಅಡಿ ರಸ್ತೆಯಲ್ಲಿ ಬೈಕ್ನಲ್ಲಿ ಬಂದು ನಿಂತಾಗ ಹಿಂಬದಿಯಿಂದ ಬಂದ ನಾಲ್ವರು ಮಾರಾಕಾಸ್ತ್ರಗಳಿಂದ ದಾಳಿ ಮಾಡಿದ್ದಾರೆ. ಈ ವೇಳೆ, ಆಸೀಫ್ ತಲೆಗೆ ಬಲವಾಗಿ ಹೊಡೆದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಜನ ಸಂಚಾರವಿದ್ದಾಗಲೇ ಕೊಲೆ ನಡೆದಿದ್ದನ್ನು ನೋಡಿ ಸ್ಥಳೀಯರು ಗಾಬರಿಗೊಂಡಿದ್ದಾರೆ.
ಅನೈತಿಕ ಸಂಬಂಧಕ್ಕೆ ಬಲಿಯಾದ್ನಾ ಆಸೀಫ್: ಇಲಿಯಾಜ್ ನಗರದ ವಿವಾಹಿತ ಮಹಿಳೆಯೊಂದಿಗೆ ಆಸೀಫ್ ಅನೈತಿಕ ಸಂಬಂಧ ಹೊಂದಿದ್ದನು ಎನ್ನಲಾಗಿದ್ದು, ಇದೇ ವಿಚಾರಕ್ಕೆ ಕೊಲೆ ನಡೆದಿದೆ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ದೊಡ್ಡಪೇಟೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಮೃತ ಆಸೀಫ್ ಹಾಗೂ ಜಬೀವುಲ್ಲಾ ಇಬ್ಬರು ಆಟೋ ಚಾಲಕರೆಂದು ತಿಳಿದು ಬಂದಿದೆ.
ಹೆತ್ತ ತಾಯಿ ಕೊಂದ ಮಗಳು : ಮಹಿಳೆಯೊಬ್ಬರು ಹೆತ್ತ ತಾಯಿಯನ್ನು ಕೊಂದು ಸೂಟ್ ಕೇಸ್ನಲ್ಲಿ ಶವ ತುಂಬಿಕೊಂಡು ಸೋಮವಾರ (ಜೂನ್ 12 ರಂದು) ರಾತ್ರಿ 11:30ಕ್ಕೆ ಮೈಕೋ ಲೇಔಟ್ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದ ಘಟನೆ ನಡೆದಿತ್ತು. ಸೆನಾಲಿ ಸೇನ್ (39)ಎಂಬಾಕೆ ತಮ್ಮ 71 ವರ್ಷದ ತಾಯಿ ಬೀವಾ ಪಾಲ್ ಕೊಲೆ ಮಾಡಿ ಬಳಿಕ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಳು. ಒಂದೇ ಮನೆಯಲ್ಲಿದ್ದ ಸೆನಾಲಿಯ ತಾಯಿ ಹಾಗೂ ಅತ್ತೆ ನಡುವೆ ಪ್ರತಿನಿತ್ಯ ಜಗಳವಾಗುತ್ತಿತ್ತಂತೆ. ಇದರಿಂದ ಬೇಸತ್ತಾ ಆರೋಪಿ ಮಹಿಳೆ ಸ್ವತಃ ತಾನೇ ತಾಯಿಗೆ ನಿದ್ರೆ ಮಾತ್ರೆಗಳನ್ನು ನುಂಗಿಸಿದ್ದಾಳೆ. ಬಳಿಕ ತಾಯಿ ಹೊಟ್ಟೆ ನೋವು ಎಂದಾಗ ವೇಲ್ನಿಂದ ಆಕೆಯ ಕುತ್ತಿಗೆ ಬಿಗಿದು ಸಾಯಿಸಿದ್ದಾಳೆ