ನಿಪ್ಪಾಣಿ: ‘ದೇಶದಿಂದ ಪೆಟ್ರೊಲ್ ಗಡಿಪಾರು ಮಾಡಲು ತೀರ್ಮಾನಿಸಲಾಗಿದೆ. ಮುಂದಿನ ದಿನಗಳಲ್ಲಿ ಇಂಧನ ದರ ಕೇವಲ ರೂ.25 ಆಗಲಿದೆ’ ಎಂದು ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತೀನ್ ಗಡ್ಕರಿ ಸುಳಿವು ನೀಡಿದರು.
ನಿಪ್ಪಾಣಿ ತಾಲೂಕಿನ ಬೋರಗಾವ ಪಟ್ಟಣದಲ್ಲಿ ಆಯೋಜಿಸಲಾಗಿದ್ದ ಪ್ರಚಾರ ಸಭೆಯಲ್ಲಿ ಬಿಜೆಪಿ ಅಭ್ಯರ್ಥಿ ಸಚಿವೆ ಶಶಿಕಲಾ ಜೊಲ್ಲೆ ಪರ ಮತಯಾಚಿಸಿ ಮಾತನಾಡಿದರು. ‘2004ರಲ್ಲಿ ತಾತ್ಕಾಲೀನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ರಾಮ ನಾಯಿಕ ನೇತೃತ್ವದಲ್ಲಿ ಒಂದು ಮಂಡಳಿ ಬ್ರಾಜಿಲ್‌ಗೆ ಹೋಗಿತ್ತು.
ನಾನು ಅದರಲ್ಲಿ ಸದಸ್ಯನಾಗಿದ್ದೆ. ಕಬ್ಬಿನ ರಸ, ಸಿ ಮೊಲ್ಯಾಸಿಸ್, ಬಿ ಮೊಲ್ಯಾಸಿಸ್‌ದಿಂದ ಇಥೆನಾಲ್ ತಯಾರಾಗುತ್ತಿತ್ತು. ಶೇ.26ರಷ್ಟು ಇಥೆನಾಲ್ ಪೆಟ್ರೊಲ್‌ನಲ್ಲಿ ಬಳಕೆಯಾಗುತ್ತಿತ್ತು. ನಮ್ಮ ದೇಶದಲ್ಲೂ ವಾಜಪೇಯಿ ಸರ್ಕಾರ ಶೇ.೫ರಷ್ಟು ಇಥೆನಾಲ್ ಬಳಸಲು ನಿರ್ಣಯಿಸಿತು. ಹಂತಹಂತವಾಗಿ ಅದನ್ನು ಏರಿಕೆ ಮಾಡಲು ನಿರ್ಧರಿಸಲಾಗಿತ್ತು.
ಆದರೆ ನಂತರ ಕಾಂಗ್ರೆಸ್ ಸರ್ಕಾರ ಬಂದು ಇದನ್ನು ತಡೆಹಿಡಿಯಿತು. 2014 ರಲ್ಲಿ ಮೋದಿಜಿಯವರ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ಬಂದು ಈ ಯೋಜನೆ ಮತ್ತೆ ಕೈ ಹಿಡಿದೇವು. ಶೇ.20ರಷ್ಟು ಇಥೆನಾಲ್ ಬಳಸಲು ನಿರ್ಣಯಿಸಲಾಗಿದೆ. ಸಕ್ಕರೆಯ ಹೆಚ್ಚಿನ ಉತ್ಪಾದನೆಗಿಂತ ಇಥೆನಾಲ್ ಉತ್ಪಾದನೆಗೆ ಸರ್ಕಾರ ನಿರ್ಧರಿಸಿದೆ. ಹಲವಾರು ವಸ್ತುಗಳಿಂದ ಇಥೆನಾಲ್ ತಯಾರಿಸಲಾಗುತ್ತಿದ್ದು ಯುವವರ್ಗಕ್ಕೆ ಉದ್ಯೋಗವಕಾಶ ಸಿಗುತ್ತಿದೆ’ ಎಂದರು.