Breaking News

3ನೇ ಪತಿಯನ್ನ ಮನೆಯಿಂದ ಹೊರ ಹಾಕಿದ ಬಿಗ್‍ಬಾಸ್ ಸ್ಪರ್ಧಿ

Spread the love

ಚೆನ್ನೈ: ಲಾಕ್‍ಡೌನ್ ವೇಳೆ ಸರಳವಾಗಿ ಮಕ್ಕಳ ಸಮ್ಮುಖದಲ್ಲಿ ಮೂರನೇ ಮದುವೆಯಾಗಿದ್ದ ಬಿಗ್‍ಬಾಸ್ ಸ್ಪರ್ಧಿ, ನಟಿ, ವನಿತಾ ವಿಜಯಕುಮಾರ್ ದಾಂಪತ್ಯದಲ್ಲಿ ಬಿರುಕು ಬಿಟ್ಟಿರುವ ಬಗ್ಗೆ ವರದಿಯಾಗಿದೆ.

ಮೂರನೇ ಪತಿ ಪೀಟರ್ ಪೌಲ್ ಸದ್ಯ ಮನೆಯಲ್ಲಿಲ್ಲ ಎಂಬುದನ್ನ ಸ್ವತಃ ವನಿತಾ ಒಪ್ಪಿಕೊಂಡಿದ್ದಾರೆ. ನಿರ್ಮಾಪಕ ರವೀಂದ್ರ ಚಂದ್ರಶೇಖರನ್ ತಮ್ಮ ಫೇಸ್‍ಬುಕ್ ನಲ್ಲಿ ವನಿತಾ ಪತಿಯನ್ನ ಹೊರ ಹಾಕಿರುವ ಬಗ್ಗೆ ಬರೆದುಕೊಂಡಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಲೈವ್ ಬಂದ ನಟಿ ಎಲ್ಲ ಊಹಾಪೋಹಗಳಿಗೆ ಗೊಂದಲಮಯವಾಗಿ ಸ್ಪಷ್ಟನೆ ನೀಡಿದ್ದಾರೆ.

ಮದುವೆ ಆದಾಗ ಪತಿ ಪೀಟರ್ ಓರ್ವ ಕುಡಿತದ ದಾಸ ಎಂಬ ವಿಚಾರ ನನಗೆ ಗೊತ್ತಿರಲಿಲ್ಲ. ಸಂಸಾರ ಚೆನ್ನಾಗಿತ್ತು, ಆದ್ರೆ ಪೀಟರ್ ಮದ್ಯ ಸೇವನೆ ಮಾತ್ರ ಬಿಡಲಿಲ್ಲ. ಕುಡಿತ ದಾಸನಾಗಿದ್ದರೂ ನಾನು ಎಲ್ಲವನ್ನ ತಾಳ್ಮೆಯಿಂದ ಫೇಸ್ ಮಾಡಿದ್ದೇನೆ. ಸಮಾಜದಲ್ಲಿ ಮಕ್ಕಳ ಆರೈಕೆಗೆ ಒರ್ವ ಪುರುಷನ ಅವಶ್ಯಕತೆ ಹಿನ್ನೆಲೆ ಮೂರನೇ ಮದುವೆಯಾಗಿದ್ದೇನೆ ಎಂದು ವನಿಯಾ ಹೇಳಿಕೊಂಡಿದ್ದಾರೆ.

ನಿರಂತರ ಮದ್ಯ ಸೇವನೆಯಿಂದಾಗಿ ಪೀಟರ್ ಗೆ ಹೃದಯಾಘಾತವಾಗಿತ್ತು. ಆಸ್ಪತ್ರೆಗೆ ದಾಖಲಿಸಿ ಒಳ್ಳೆಯ ಚಿಕಿತ್ಸೆ ನೀಡಿದ್ದರಿಂದ ಪೀಟರ್ ಗುಣಮುಖನಾಗಿ ಮನೆಗೆ ಬಂದ. ಆದ್ರೆ ಪೀಟರ್ ಸ್ಮೋಕಿಂಗ್ ಮತ್ತು ಡ್ರಿಂಕಿಂಗ್ ಚಟದಿಂದ ಹೊರ ಬರಲೇ ಇಲ್ಲ. ಒಮ್ಮೆ ರಕ್ತ ವಾಂತಿ ಮಾಡಿಕೊಂಡಾಗಿ ಒಂದು ಐಸಿಯುನಲ್ಲಿರಿಸಿ ಚಿಕಿತ್ಸೆ ಸಹ ನೀಡಲಾಗಿತ್ತು. ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಬಂದ ಬಳಿಕ ಪೀಟರ್ ಮದ್ಯಕ್ಕಾಗಿ ಜನರ ಬಳಿ ಹಣ ಕೇಳಲಾರಂಭಿಸಿದ. ಸಿನಿಮಾದ ಕೆಲ ಸಹದ್ಯೋಗಿಗಳು ಫೋನ್ ಮಾಡಿ ಏನಾಗ್ತಿದೆ ಎಂದು ಪ್ರಶ್ನಿಸಿದರು. ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್, ಒತ್ತಡ ಮತ್ತು ಆರೋಪಗಳನ್ನ ಹ್ಯಾಂಡಲ್ ಮಾಡಲು ಪೀಟರ್ ನಿಂದ ಸಾಧ್ಯವಾಗಲಿಲ್ಲ.

ಒಂದು ದಿನ ಗೋವಾ ಪ್ರವಾಸಕ್ಕೆ ತೆರಳಿದಾಗ ಪೀಟರ್ ಸೋದರನ ಸಾವಿನ ಸುದ್ದಿ ಬಂತು. ಪ್ರವಾಸದಲ್ಲಿದ್ದಾಗ ಪೀಟರ್ ತುಂಬು ದುಃಖದಲ್ಲಿದ್ದರು. ಮನೆಯ ಬಗ್ಗೆ ಹೆಚ್ಚು ನೆನಪು ಮಾಡಿಕೊಳ್ಳುತ್ತಿದ್ದರು. ಹೀಗಾಗಿ ನನ್ನಿಂದ ಹಣ ಪಡೆದು ಹೋದ ಪೀಟರ್ ನನ್ನನ್ನು ಇದುವರೆಗೆ ನನ್ನ ಸಂಪರ್ಕಿಸಿಲ್ಲ ಎಂದು ಮಾತ್ರ ಹೇಳಿದ್ದಾರೆ.


Spread the love

About Laxminews 24x7

Check Also

ಧರ್ಮಸ್ಥಳ ಪ್ರಕರಣದ ಮಾಸ್ಟರ್​​ ಮೈಂಡ್ ದಕ್ಷಿಣಕನ್ನಡ ಮಾಜಿ ಡಿಸಿ ಸಸಿಕಾಂತ್ ಸೆಂಥಿಲ್ ಎಂದು ಜನಾರ್ದನ ರೆಡ್ಡಿ ಗಂಭೀರ ಆರೋಪ

Spread the love ಬೆಂಗಳೂರು/ದಕ್ಷಿಣ ಕನ್ನಡ: “ಧರ್ಮಸ್ಥಳದ ವಿರುದ್ಧ ನಡೆಯುತ್ತಿರುವ ಷಡ್ಯಂತರದ ಹಿಂದಿನ ಮಾಸ್ಟರ್​ ಮೈಂಡ್​​ ತಮಿಳುನಾಡಿನ ತಿರುವಲ್ಲೂರಿನ ಕಾಂಗ್ರೆಸ್​ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ