Breaking News

ಅಮಿತ್ ಶಾ ಈ ಜಿಲ್ಲೆಗಳಲ್ಲಿ ಎರಡು ದಿನ ಅಬ್ಬರದ ಪ್ರಚಾರ

Spread the love

ಬೆಂಗಳೂರು: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಇಂದಿನಿಂದ ಎರಡು ದಿನಗಳ ಕಾಲ ರಾಜ್ಯದಲ್ಲಿ ಚುನಾವಣಾ ರಣಕಹಳೆ ಮೊಳಗಿಸಲಿದ್ದಾರೆ.ಇಂದು ಧಾರವಾಡ, ಗದಗ, ಹಾವೇರಿ ಮತ್ತು ದಾವಣಗೆರೆ ಜಿಲ್ಲೆಯಲ್ಲಿ ಚುನಾವಣಾ ಪ್ರಚಾರ ನಡೆಸಿದ್ರೇ, ನಾಳೆ ಉಡುಪಿ, ಮಡಿಕೇರಿ, ಮಂಗಳೂರಿನಲ್ಲಿ ಅರ್ಭಟ ಮೆರೆಯಲಿದ್ದಾರೆ.

 

ಈ ಕುರಿತಂತೆ ಅಧಿಕೃತ ಪ್ರವಾಸದ ವಿವರವನ್ನು ಬಿಜೆಪಿಯಿಂದ ಬಿಡುಗಡೆ ಮಾಡಲಾಗಿದ್ದು, ದಿನಾಂಕ 28-04-2023ರಂದು ನವದೆಹಲಿಯಿಂದ ಹುಬ್ಬಳ್ಳಿಯ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. ಅಲ್ಲಿಂದ ಧಾರವಾಡದ ಅಣ್ಣಿಗೇರಿಗೆ ಹೆಲಿಕ್ಯಾಪ್ಟರ್ ಮೂಲಕ ತೆರಳಲಿದ್ದಾರೆ. ಅಣ್ಣಿಕೇರಿಯಲ್ಲಿ ಸಾರ್ವಜನಿಕ ಸಭೆಯಲ್ಲಿ ಮಾತನಾಡಲಿದ್ದಾರೆ. ಆ ಬಳಿಕ ಗದಗದ ಲಂಕೇಶ್ವರಕ್ಕೆ ಹೆಲಿಕ್ಯಾಪ್ಯರ್ ಮೂಲಕ ತೆರಳಲಿದ್ದಾರೆ.

ಲಂಕೇಶ್ವರದಲ್ಲಿ ಸಾರ್ವಜನಿಕ ಸಭೆಯಲ್ಲಿ ಮಾತನಾಡಲಿದ್ದು, ಅಲ್ಲಿಂದ ಹಾವೇರಿಯ ಅಕ್ಕಿ ಆಲೂರು ಹೆಲಿಪ್ಯಾಡ್ ನಲ್ಲಿ ಇಳಿಯಲಿದ್ದಾರೆ. ಅಕ್ಕಿ ಆಲೂರು, ಹಾನಗಲ್ ನಲ್ಲಿ ಸಾರ್ವಜನಿಕ ಸಭೆಯಲ್ಲಿ ಮಾತನಾಡಲಿದ್ದಾರೆ. ಅಲ್ಲಿ ಚುನಾವಣಾ ಪ್ರಚಾರ, ಕಾರ್ಯಕರ್ತರ ಸಭೆಯನ್ನು ನಡೆಸಿದ ಬಳಿಕ, ದಾವಣಗೆರೆ ಜಿಲ್ಲೆಗೆ ತೆರಳಲಿದ್ದಾರೆ.

ದಾವಣಗೆರೆಯ ಗಾಂಧಿ ಮೈದಾನದಲ್ಲಿ ಸಾರ್ವಜನಿಕ ಸಭೆಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಅಲ್ಲದೇ ಹರಿಹರದಲ್ಲಿ ರೋಡ್ ಶೋ ಕೂಡ ನಡೆಸಲಿದ್ದಾರೆ. ದಾವಣಗೆರೆಯಲ್ಲೇ ರಾತ್ರಿ ತಂಗಲಿದ್ದಾರೆ.

ದಿನಾಂಕ 29-04-2023ರಂದು ದಾವಣಗೆರೆಯ ಜಿಎಂಐಟಿ ಹೆಲಿಪ್ಯಾಡ್ ನಿಂದ ಹೆಲಿಕ್ಯಾಪ್ಟರ್ ಮೂಲಕ, ಮಡಿಕೇರಿಗೆ ತೆರಳಲಿದ್ದಾರೆ. ಮಡಿಕೇರಿಯ ಗಾಂಧಿ ಗ್ರೌಂಡ್ ನಲ್ಲಿ ಸಾರ್ವಜನಿಕ ಸಭೆಯಲ್ಲಿ ಭಾಗಿಯಾಗಿ ಮಾತನಾಡಲಿದ್ದಾರೆ. ಅಲ್ಲಿಂದ ಉಡುಪಿಗೆ ತೆರಳಲಿದ್ದು, ಕಟ್ಟಪಾಡಿಯ ಗ್ರೀನ್ ವ್ಯಾಲಿ ಗ್ರೌಂಡ್ ನಲ್ಲಿ ಸಭೆಯಲ್ಲಿ ಭಾಗವಹಿಸಲಿದ್ದಾರೆ.

ಉಡುಪಿಯಿಂದ ಬೈಂದೂರಿಗೆ ಹೆಲಿಕ್ಯಾಪ್ಟರ್ ಮೂಲಕ ಸಿದ್ಧಾಪುರಕಕ್ಕೆ ತೆರಳಲಿದ್ದಾರೆ. ಸಿದ್ಧಾಪುರದಲ್ಲಿ ರೋಡ್ ಶೋ ನಡೆಸಲಿದ್ದಾರೆ. ಸಾರ್ವಜನಿಕ ಸಭೆ, ಕಾರ್ಯಕರ್ತರ ಸಭೆ ನಡೆಸಲಿದ್ದಾರೆ. ಅಲ್ಲಿಂದ ಮಂಗಳೂರಿಗೆ ತೆರಳಲಿದ್ದು, ಮಂಗಳೂರಿನಲ್ಲಿ ಬೃಹತ್ ರೋಡ್ ಶೋ ನಡೆಸಲಿದ್ದಾರೆ. ಅಲ್ಲದೇ ಓಷನ್ ಪೆರ್ಲ್ ಹೋಟೆಲ್ ನಲ್ಲಿ ಬಿಜೆಪಿ ಕಾರ್ಯಕರ್ತರ ಸಭೆಯನ್ನು ನಡೆಸಲಿದ್ದಾರೆ. ಆ ಬಳಿಕ ಮಂಗಳೂರು ವಿಮಾನ ನಿಲ್ದಾಣದಿಂದ ರಾತ್ರಿ 8.50ಕ್ಕೆ ನವದೆಹಲಿಗೆ ತೆರಳಲಿದ್ದಾರೆ.


Spread the love

About Laxminews 24x7

Check Also

ಇನ್ನೂ ಎರಡು ದಿನ ಮಹಾಮಳೆ

Spread the loveಬೆಂಗಳೂರು: ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಳೆಯಾಗುತ್ತಿದ್ದು, ಇನ್ನೂ ಎರಡು ದಿನಗಳ ಕಾಲ (ಜು.7) ಜೋರು ಗಾಳಿ ಸಹಿತ ಮಳೆಯಾಗುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ