Breaking News

ಹಿಡಕಲ್ ಡ್ಯಾಂ ನೀರು ಪೂರೈಕೆ ಪೈಪ್ ಭಗ್ನ; 50 ಅಡಿ ಎತ್ತರ ಪುಟಿದ ನೀರು

Spread the love

ಬೆಳಗಾವಿ: ಹಿಡಕಲ್ ಡ್ಯಾಂನಿಂದ ಬೆಳಗಾವಿ ನಗರಕ್ಕೆ ನೀರು ಪೂರೈಸುವ ಪೈಪ್ ಲೈನ್ ಶನಿವಾರ ಒಡೆದ ಪರಿಣಾಮ ಭಾರೀ ಪ್ರಮಾಣದಲ್ಲಿ ನೀರು ಸೋರಿಕೆಯಾಗಿದೆ.

ಖನಗಾಂವ ಬಿ.ಕೆ. ಗ್ರಾಮದ ಬಳಿ ಒತ್ತಡದಿಂದ ಒಡೆದ ಪೈಪ್ ಪೈನ್ ನಿಂದ ನೀರು ಸುಮಾರು 50 ಅಡಿ ಎತ್ತರಕ್ಕೆ ಚಿಮ್ಮಿತ್ತು. ಹಲವರು ಇದನ್ನು ಕಂಡು ಫೋಟೊ ಕ್ಲಿಕ್ಕಿಸಿಕೊಳ್ಳುತ್ತಿದ್ದರೆ ಬಿರು ಬೇಸಿಗೆಯಲ್ಲಿ ನೀರಿನ ಅಪವ್ಯಯವಾಗುತ್ತಿರುವುದಕ್ಕೆ ಮರುಗಿದರು.

ಬೆಳಗಾವಿ- ಗೋಕಾಕ್ ರಸ್ತೆಯಲ್ಲಿ ಈ ಭಾರಿ ಪ್ರಮಾಣದ ನೀರಿನ ಹೊರಹೊಮ್ಮುವಿಕೆಯಿಂದ ಕೆಲ ಕಾಲ ಸಂಚಾರದಲ್ಲಿ ವ್ಯತ್ಯಯ ಉಂಟಾಯಿತು. ರಾಜ್ಯ ಹೆದ್ದಾರಿಯ ಕೆಲ ಭಾಗ ಕಿತ್ತು ಹೋಗಿದ್ದು ಅಕ್ಕಪಕ್ಕದ ಹೊಲಗದ್ದೆಗಳಿಗೂ ನೀರು ನುಗ್ಗಿ ಹಾನಿ ಸಂಭವಿಸಿದೆ. ಅರ್ಧ ತಾಸಿಗೂ ಹೆಚ್ಚು ಕಾಲ ನೀರು ಸೋರಿಕೆಯಾಗಿದೆ.


Spread the love

About Laxminews 24x7

Check Also

ಗ್ರಾಮದೇವತೆ ಜಾತ್ರೆಯ ನಿಮಿತ್ಯ ಕಾಯಿ ಪೂಜೆ,ಭಂಡಾರದಲ್ಲಿ ಮಿಂದೆದ್ದ ಭಕ್ತರು

Spread the love ಗ್ರಾಮದೇವತೆ ಜಾತ್ರೆಯ ನಿಮಿತ್ಯ ಕಾಯಿ ಪೂಜೆ,ಭಂಡಾರದಲ್ಲಿ ಮಿಂದೆದ್ದ ಭಕ್ತರು ಗೋಕಾಕ ತಾಲೂಕಿನ ಕೊಣ್ಣೂರಲ್ಲಿರುವ ಗ್ರಾಮದೇವಿ (ದ್ಯಾಮಮ್ಮ) …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ