Breaking News

ಉತ್ತರ ಕನ್ನಡ ಜಿಲ್ಲೆಯ ಶಿರಸಿ – ಕುಮಟಾ ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿ ಪೂರ್ಣಗೊಳ್ಳದೆ ದಿನನಿತ್ಯ ಸವಾರರು ಪರದಾಡುವಂತಾಗಿದೆ.

Spread the love

ತ್ತರ ಕನ್ನಡ ಜಿಲ್ಲೆಯ ಶಿರಸಿ – ಕುಮಟಾ ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿ ಪೂರ್ಣಗೊಳ್ಳದೆ ದಿನನಿತ್ಯ ಸವಾರರು ಪರದಾಡುವಂತಾಗಿದೆ.

ಧೂಳುಮಯವಾದ ಹೆದ್ದಾರಿಯ ಸಮಸ್ಯೆಯ ಕುರಿತು ಸ್ಥಳೀಯರು ಹಾಗು ಸವಾರರು ಆರೋಪ ಮಾಡುತ್ತಿರುವುದು.ಕಾರವಾರ: ಅದು ನಿತ್ಯ ಸಾವಿರಾರು ವಾಹನಗಳು ಸಂಚಾರ ಮಾಡುವ ರಾಷ್ಟ್ರೀಯ ಹೆದ್ದಾರಿ.

ಇಲ್ಲಿ ಕಾಮಗಾರಿ ಪ್ರಾರಂಭವಾಗಿ ವರ್ಷಗಳೇ ಉರುಳಿದರೂ ಈವರೆಗೂ ಕಾಮಗಾರಿ ಮಾತ್ರ ಪೂರ್ಣಗೊಂಡಿಲ್ಲ. ಅರೆ ಬರೆ ಕಾಮಗಾರಿಯಾಗಿರುವ ಹೆದ್ದಾರಿಯಲ್ಲಿ ತಗ್ಗು, ದಿನ್ನೆ, ಧೂಳಿನ ಮಧ್ಯ ಅನಿವಾರ್ಯವಾಗಿ ವಾಹನಗಳು ಸಂಚಾರ ಮಾಡುವಂತಾಗಿದೆ. ಇನ್ನು ಈ ಹೆದ್ದಾರಿ ಸಂಚಾರ ಪ್ರಯಾಣಿಕರ ಪಾಲಿಗೆ ನಿತ್ಯ ನರಕಯಾತನೆಯಾಗಿದೆ. ಈ ಕುರಿತು ಒಂದು ವರದಿ ಇಲ್ಲಿದೆ ನೋಡಿ.

ಒಂದೆಡೆ ಹೀಗೆ ದಟ್ಟ ಧೂಳಿನ ಮಧ್ಯೆ ಸಂಚಾರ ಮಾಡುತ್ತಿರುವ ವಾಹನಗಳು. ಮತ್ತೊಂದೆಡೆ ಮುಖಕ್ಕೆ ಮಾಸ್ಕ್​ ಧರಿಸಿ ಧೂಳಿನ ನಡುವೆಯೇ ಪ್ರಯಾಣಿಸುತ್ತಿರುವ ವಾಹನ ಸವಾರರು. ಇವುಗಳೆಲ್ಲವುದರ ಮಧ್ಯೆ ಧೂಳು ಮುಳುಗಿ ಸೊರಗಿ ನಿಂತಿರುವ ನಿತ್ಯಹರಿದ್ವರ್ಣ ಕಾಡುಗಳು. ಈ ನರಕಯಾತನೆ ದೃಶ್ಯ ಉತ್ತರ ಕನ್ನಡ ಜಿಲ್ಲೆಯ ಶಿರಸಿ – ಕುಮಟಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಂಡು ಬರುತ್ತಿದೆ.

ಆಮೆ ಗತಿಯಲ್ಲಿ ಸಾಗುತ್ತಿರುವ ಕಾಮಗಾರಿ: ಹೌದು ಭಾರತ್ ಮಾಲಾ ಯೋಜನೆಯಡಿ ಶಿರಸಿಯಿಂದ ಕುಮಟಾವರಗೆ 60 ಕಿ.ಮೀ ರಾಜ್ಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಮೇಲ್ದರ್ಜೆಗೆ ಏರಿಸಲು ಕೇಂದ್ರ ಸರ್ಕಾರ 2018 ರಲ್ಲಿ ಅನುಮೋದನೆ ನೀಡಿತು. ಆದರೆ, ಪರಿಸರ ವಾದಿಗಳಿಂದ ಮರಗಳ ಮಾರಣ ಹೋಮವಾಗುತ್ತದೆ ಎಂದು, ಎರಡು ವರ್ಷಗಳ ಕಾಲ ಸ್ಟೇ ತರಲಾಗಿತ್ತು. ನಂತರದಲ್ಲಿ ಎಲ್ಲಾ ಅಡೆತಡೆಗಳನ್ನು ಬಗೆ ಹರಸಿ ಸುಮಾರು 440 ಕೋಟಿ ರೂ ವೆಚ್ಚದಲ್ಲಿ ಹೆದ್ದಾರಿ ಕಾಮಗಾರಿಯನ್ನು 2021 ರಲ್ಲಿ ಪ್ರಾರಂಭ ಮಾಡಿದೆ. ಆದರೆ, ಈ ಕಾಮಗಾರಿ ಆಮೆ ಗತಿಯಲ್ಲಿ ಸಾಗಿದ್ದರಿಂದ ಪ್ರಯಾಣಿಕರು ನಿತ್ಯ ನರಕಯಾತನೆ ಅನುಭವಿಸುವಂತಾಗಿದೆ.

ನ್ನು ಶಿರಸಿಯಿಂದ ಕುಮಟಾವರಗೆ ಕಿ.ಮೀ ಸಂಚಾರ ಕಲ್ಲು, ಮುಳ್ಳು, ಧೂಳು, ತೆಗ್ಗು,‌ ದಿಂಬಗಳಿಂದ ಕೂಡಿದೆ. ಹೆಚ್ಚಾಗಿ ಈ ಮಾರ್ಗದಲ್ಲಿ ಪ್ರವಾಸಿಗರು ಗೋಕರ್ಣ, ಮುರುಡೇಶ್ವರ, ಉಡುಪಿ, ಮಂಗಳೂರು, ಕಾರವಾರ ಭಾಗಕ್ಕೆ ಸಂಚಾರ ಮಾಡುತ್ತಾರೆ. ವಿಶೇಷ ಅಂದರೆ ಬೈಕ್ ರೈಡರ್ಸ್ ನಿತ್ಯ ಹರಿದ್ವರ್ಣ ಕಾಡುಗಳ ಮಧ್ಯ ಪ್ರಕೃತಿ ಸೌಂದರ್ಯ ಸವಿಯಲು ಗುಂಪು ಗುಂಪಾಗಿ ತೆರಳುತ್ತಾರೆ.

ಆದರೆ, ಈ ಹೆದ್ದಾರಿಯಲ್ಲಿ ಪ್ರಕೃತಿ ಸೊಬಗು ಸವಿಯುವುದು ಒಂದು ಕಡೆ ಇರಲಿ ಜೀವ ಉಳಿಸಿಕೊಂಡು ಹೋದರೆ ಸಾಕಪ್ಪ ಎನ್ನುವ ಸ್ಥಿತಿ ಇಲ್ಲಿ ಸೃಷ್ಟಿಯಾಗಿದೆ. ರಸ್ತೆ ಉದ್ದಕ್ಕೂ ದಟ್ಟ ಧೂಳಿನಿಂದ ತುಂಬಿಕೊಂಡಿದ್ದು ಹಲವು ಸಾಂಕ್ರಾಮಿಕ ರೋಗಗಳು ಅಂಟಿಕೊಳ್ಳುತ್ತಿವೆ. ಹೀಗಾಗಿ ಶೀಘ್ರದಲ್ಲಿ ರಸ್ತೆ ಕಾಮಗಾರಿ ಪೂರ್ಣಗೊಳಿಸಿ ಸೂಕ್ತ ಸಂಚಾರಕ್ಕೆ ಅನುವು ಮಾಡಿಕೊಂಡುವಂತೆ ಜನ ಒತ್ತಾಯ ಮಾಡುತ್ತಿದ್ದಾರೆ.

ಒಟ್ಟಿನಲ್ಲಿ ದಟ್ಟ ಕಾಡಿನ ಮಧ್ಯೆ ಸುಂದರವಾಗಿರಬೇಕಾದ ಹೆದ್ದಾರಿ, ಅರೆ ಬರೆ ಕಾಮಗಾರಿಯಿಂದ ಹದಗೆಟ್ಟು ಧೂಳು ಮಯವಾಗಿದೆ. ಶೀಘ್ರದಲ್ಲಿ ಕಾಮಗಾರಿ ಪೂರ್ಣಗೊಳಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಬೇಕಿದೆ.


Spread the love

About Laxminews 24x7

Check Also

ಜನರಲ್ಲಿ ವೈಚಾರಿಕತೆ, ವೈಜ್ಞಾನಿಕತೆ ಬೆಳೆಯದಿದ್ದರೆ, ಕೇವಲ ಮೌಢ್ಯ ನಿಷೇಧ ಕಾನೂನಿನ ಮೂಲಕ ನಿರೀಕ್ಷಿತ ಬದಲಾವಣೆ ಸಾಧ್ಯವಿಲ್ಲ ಎಂದ ಸಿಎಂ

Spread the loveಬೆಂಗಳೂರು: ”ದ್ವಿಭಾಷಾ ಸೂತ್ರ ನನ್ನ ಅಭಿಪ್ರಾಯವಾಗಿದೆ. ಅದನ್ನು ಸರ್ಕಾರದ ಅಭಿಪ್ರಾಯ ಮಾಡುವ ದಿಕ್ಕಿನಲ್ಲಿ ಪ್ರಯತ್ನಿಸುತ್ತೇನೆ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ