Breaking News

ಪ್ರೀತಿಸಲು ಒಲ್ಲೆ ಎಂದಿದ್ದಕ್ಕೆ ಚೂರಿಯಿಂದ ಇರಿದು ಹತ್ಯೆಗೈದ!

Spread the love

ಪುತ್ತೂರು: ಹಾಡಹಗಲೇ ಯುವತಿಯೊಬ್ಬಳನ್ನು ಮನಸೋಇಚ್ಛೆ ಚೂರಿಯಿಂದ ಇರಿದು ಕೊಲೆ ಮಾಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಮುಂಡೂರು ಗ್ರಾಮದ ಕಂಪ ಎಂಬಲ್ಲಿ ಇಂದು(ಮಂಗಳವಾರ) ಸಂಭವಿಸಿದೆ.

ಗಿರಿಜಾ ಎಂಬುವರ ಪುತ್ರಿ ಜಯಶ್ರೀ(23) ಕೊಲೆಯಾದ ದುರ್ದೈವಿ. ಕನಕಮಜಲಿನ ಉಮೇಶ ಎಂಬಾತ ಜಯಶ್ರೀ ಒಬ್ಬಳೇ ಇದ್ದ ವೇಳೆ ಮನೆಗೆ ನುಗ್ಗಿ ಹೊಟ್ಟೆಗೆ ಇರಿದು ಚೂರಿಯನ್ನು ಹೊಟ್ಟೆಯಲ್ಲೇ ಬಿಟ್ಟು ಪರಾರಿಯಾಗಿದ್ದಾನೆ.

 

ಉಮೇಶ ಕೆಲ ಸಮಯದಿಂದ ಜಯಶ್ರೀಯನ್ನು ಪ್ರೀತಿಸುತ್ತಿದ್ದು, ಆಗಾಗ್ಗೆ ಜಯಶ್ರೀ ಮನೆಗೆ ಬರುತ್ತಿದ್ದನು. ಆದರೆ ಇತ್ತೀಚೆಗೆ ಆತನ ನಡತೆ ಇಷ್ಟವಾಗದ ಕಾರಣ ನವೆಂಬರ್‌ನಿಂದ ಆತನನ್ನು ದೂರವಿಟ್ಟಿದ್ದಳು. ಇದರಿಂದ ಅಸಮಾಧಾನಗೊಂಡ ಉಮೇಶ ಕೃತ್ಯವೆಸಗಿದ್ದಾನೆ ಎನ್ನಲಾಗಿದೆ. ತೀವ್ರ ರಕ್ತಸ್ರಾವವಾಗಿ ಜೀವನ್ಮರಣ ಸ್ಥಿತಿಯಲ್ಲಿದ್ದ ಯುವತಿಯನ್ನು ಸ್ಥಳೀಯರು ಆಸ್ಪತ್ರೆಗೆ ಕರೆದೊಯ್ದರಾದರೂ ಮಾರ್ಗಮಧ್ಯೆಯೇ ಕೊನೆಯುಸಿರೆಳೆದಿದ್ದಾಳೆ. ಸಂಪ್ಯ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪೊಲೀಸರು ತನಿಖೆ ನಡೆಸುತ್ತಿದ್ದು, ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.


Spread the love

About Laxminews 24x7

Check Also

ಗ್ರಾಮ ಪಂಚಾಯತ್​ ವ್ಯಾಪ್ತಿಯಲ್ಲಿ ಬಡಾವಣೆಗಳನ್ನು ರೂಪಿಸಲು ಅನುಸರಿಸಬೇಕಾದ ಕ್ರಮಗಳ ಬಗ್ಗೆ ಸುತ್ತೋಲೆ

Spread the loveಬೆಂಗಳೂರು : ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸ್ಥಳೀಯ ಯೋಜನಾ ಪ್ರದೇಶವನ್ನು ಹೊರತುಪಡಿಸಿದ ಪ್ರದೇಶಗಳಲ್ಲಿನ ಭೂಪರಿವರ್ತಿತ ಜಮೀನುಗಳಲ್ಲಿ ಬಡಾವಣೆಗಳ ವಿನ್ಯಾಸ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ