Breaking News
Home / ಜಿಲ್ಲೆ / ಬೆಳಗಾವಿ / ಬೆಳಗಾವಿಯಿಂದ ಸೇವೆ ನೀಡುತ್ತಿದ್ದ 12 ವಿಮಾನಗಳ ಸೇವೆ ಬಂದ್

ಬೆಳಗಾವಿಯಿಂದ ಸೇವೆ ನೀಡುತ್ತಿದ್ದ 12 ವಿಮಾನಗಳ ಸೇವೆ ಬಂದ್

Spread the love

ಬೆಳಗಾವಿ: ಬೆಳಗಾವಿಯಿಂದ ಸೇವೆ ನೀಡುತ್ತಿದ್ದ ಕೆಲ ವಿಮಾನ ಸೇವೆ ಬಂದ್ ಆಗಿವೆ. ಇದರಿಂದ ಉದ್ಯಮಗಳಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ಈ ಕುರಿತು ಸರಕಾರ ಹಾಗೂ ಇಲ್ಲಿನ ಜನಪ್ರತಿನಿಧಿಗಳು ಗಮನ ಹರಿಸುವ ಅವಶ್ಯಕತೆ ಇದೆ ಎಂದು ಬೆಳಗಾವಿ ಚೆಂಬರ್ ಆಫ್ ಕಾಮಸ್೯ ಸಭಾಂಗಣದಲ್ಲಿ ಉದ್ಯಮಿಗಳು ಹಕ್ಕೊತ್ತಾಯ ಮಾಡಿದರು.

ಮಂಗಳವಾರ ವಿವಿಧ ಉದ್ಯಮಿಗಳು ನಡೆಸಿದ ಸಭೆಯಲ್ಲಿ ಈ ನಿರ್ಣಯ ತೆಗೆದುಕೊಳ್ಳಲಾಯಿತು. ಚೇಂಬರ್ ಆಫ್ ಕಾಮಸ್೯ನ ಅಧ್ಯಕ್ಷ ಹೇಮೇಂದ್ರ ಪೋರವಾಲ್ ಮಾತನಾಡಿ, ಬೆಳಗಾವಿಯಲ್ಲಿ ಈಗಾಗಲೇ ಸಾಕಷ್ಟು ಬಾರಿ ಅನ್ಯಾಯವಾಗಿದೆ. ಉಡಾನ್ ಯೋಜನೆಯಲ್ಲಿಯೂ ಮೊದಲ‌ ಹಂತದಲ್ಲಿ ಆಯ್ಕೆಯಾಗಬೇಕಿತ್ತು. ಕಾರಣಾಂತರಗಳಿಂದ ನೆರೆಯ ಜಿಲ್ಲೆಗೆ ಹೋಗಿ ಎರಡನೇ ಹಂತದಲ್ಲಿ ಹೋರಾಟದ ಮೂಲಕ ಉಡಾನ್ ಸೇವೆ ಪಡೆಯುವಂತಾಯಿತು. ಈ ಮತ್ತೇ ಬೆಳಗಾವಿ ವಿಮಾನ ನಿಲ್ದಾಣದಿಂದ ಸುಮಾರು 12 ವಿಮಾನಗಳು ಸೇವೆ ನಿಲ್ಲಿಸಿದ್ದು ಉದ್ಯಮಕ್ಕೆ ಭಾರೀ ನಷ್ಟವಾಗುವ ಸಾಧ್ಯತೆ ಇದೆ ಎಂದು ಕಳವಳ ವ್ಯಕ್ತಪಡಿಸಿದರು.

ದೆಹಲಿ, ಚೆನ್ನೈ, ಮುಂಬಯಿ ಹಾಗೂ ಬೆಂಗಳೂರು ಮಾರ್ಗ ಇನ್ನಷ್ಟು ಹೆಚ್ಚಾಗಬೇಕು. ಹೊಸ ಹೊಸ ಉದ್ಯಮಿಗಳು ಬೆಳಗಾವಿಗೆ ಹೂಡಿಕೆ ಮಾಡಲು ಬರುತ್ತಿದ್ದಾರೆ. ವಿಮಾನ ಸೇವೆ ಸಮರ್ಪಕವಾಗಿ ಇರಲಿಲ್ಲ‌ ಎಂದರೆ ಬಂಡವಾಳ ಹೂಡಿಕೆದಾರರು ಹಿಂದೆಟ್ಟು ಹಾಕುತ್ತಾರೆ. ಆದ್ದರಿಂದ ಎಲ್ಲ ಸಂಘ ಸಂಸ್ಥೆಗಳು ಒಗ್ಗಟ್ಟು ಪ್ರದರ್ಶ ಮಾಡಿ ಸರಕಾರಕ್ಕೆ ಒತ್ತಡ ಹಾಕುವ ಅವಶ್ಯಕತೆ ಇದೆ ಎಂದರು.

ಬೆಳಗಾವಿ ವೇಗವಾಗಿ ಬೆಳೆಯುತ್ತಿದೆ. ‌ಇದರ ನಡುವೆ ಇಂಥ ವಿಮಾನಗಳು ಬಂದ್ ಮಾಡುವುದರಿಂದ ಉದ್ಯಮ ಕ್ಷೇತ್ರದಲ್ಲಿ ಮಾತ್ರವಲ್ಲ. ಶೈಕ್ಷಣಿಕ ಕ್ಷೇತ್ರದಲ್ಲೂ ಭಾರೀ‌ ನಷ್ಟವಾಗುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬೆಳಗಾವಿಗೆ ಬರಬೇಕಾದ ಯೋಜನೆಗಳು ಸಾಕಷ್ಟು ಬೇರೆ ಕಡೆ ಹೋಗಿವೆ. ಬೆಳಗಾವಿಯಲ್ಲಿ ದೊಡ್ಡ ಇಎಸ್ಐ ಆಸ್ಪತ್ರೆಯನ್ನು ‌ಕೇಂದ್ರ ಸರಕಾರ ಮಾಡಬೇಕು. ಅಲ್ಲದೆ. ಬೆಳಗಾವಿ ವಿಮಾನ ನಿಲ್ದಾಣದಿಂದ ಬಂದ್ ಆಗಿರುವ ವಿಮಾನಗಳು ಮತ್ತೇ ಸೇವೆ ಆರಂಭಿಸುವ ಕೆಲಸ ಮಾಡಬೇಕೆಂದರು.

ಉದ್ಯಮಿ ಅಜೀತಕುಮಾರ ಪಾಟೀಲ ಮಾತನಾಡಿ, ಐಟಿ ಹಾಗೂ ಸಾಫ್ಟ್‌ವೇರ್ ಗಳಿಗಾಗಿ ಹೊಸ ಸಂಘ ಸ್ಥಾಪನೆ ಮಾಡಲಾಗಿದೆ. ಐಟಿ ಸಮಸ್ಯೆಯ ಬಗ್ಗೆ ಕೇಳಲು ಯಾವ ವೇದಿಕೆಯೂ ಇಲ್ಲ.‌ ಈ ನಿಟ್ಟಿನಲ್ಲಿ ಐಟಿ ಹಾಗೂ ಸಾಫ್ಟ್‌ವೇರ್ ಉದ್ಯಮ ಬೆಳೆಯುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕೆಂದು ಸಲಹೆ‌ ನೀಡಿದರು.

ಉದ್ಯಮಿ ವೈಭವ್ ಪ್ರಸಾದ ಮಾತನಾಡಿ, ಕೇವಲ ನಾವು ವಿದೇಶ ಹಾಗೂ ನೆರೆ ರಾಜ್ಯದ ವಿಮಾನ ಪ್ರಯಾಣಿಕರ ಬಗ್ಗೆ ಚರ್ಚೆ ಮಾಡುವುದರ ಜೊತೆಗೆ ನಿಪ್ಪಾಣಿ, ಖಾನಾಪುರದಿಂದ ಸಾಕಷ್ಟು ಜನರು ತಮ್ಮ ತರಕಾರಿ ಸೇರಿದಂತೆ ವಿವಿಧ ಸಾಮಗ್ರಿ ಮಾರಾಟಕ್ಕಾಗಿ ಹುಬ್ಬಳ್ಳಿ-ಧಾರವಾಡ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದರ ಬಗ್ಗೆಯೂ ಚೇಂಬರ್ ಆಫ್ ಕಾಮಸ್೯ ಚಿಂತನೆ ನಡೆಸಬೇಕಿದೆ. ಅಲ್ಲದೆ ಉದ್ಯಮಿಗಳ ಕುಟುಂಬಕ್ಕೆ ಇಎಸ್ಐ ಆಸ್ಪತ್ರೆ ನಿರ್ಮಾಣ ಮಾಡಿ ಉಚಿತ ಆರೋಗ್ಯ ತಪಾಸಣೆಯನ್ನು ಪ್ರತಿ ವರ್ಷ ನಡೆಸುವಂತಾಗಬೇಕು ಎಂದು ಸಭೆಗೆ ತಿಳಿಸಿದರು


Spread the love

About Laxminews 24x7

Check Also

ಬೆಳಗಾವಿ ಮಹಾನಗರ ಪಾಲಿಕೆ: ನಾಲ್ಕು ಸ್ಥಾಯಿ ಸಮಿತಿಗಳಿಗೆ ಅವಿರೋಧ ಆಯ್ಕೆ

Spread the love ಬೆಳಗಾವಿ: ಇಲ್ಲಿನ ಮಹಾನಗರ ಪಾಲಿಕೆ 22ನೇ ಅವಧಿಗೆ ನಾಲ್ಕು ಸ್ಥಾಯಿ ಸಮಿತಿಗಳ 28 ಸದಸ್ಯ ಸ್ಥಾನಗಳಿಗೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ