ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ಕೊಡುವದು ಬಿಡುವದು ವರಿಷ್ಟರಿಗೆ ಬಿಟ್ಟ ವಿಚಾರ ಎಂದು ಅಥಣಿ ಶಾಸಕ ಮಹೇಶ ಕುಮಟಳ್ಳಿ ಹೇಳಿದರು.
ಅವರು ಇಂದು ಸುವರ್ಣಸೌಧ ಮುಂಭಾಗದಲ್ಲಿ ಮಾದ್ಯಮಗಳೊಂದಿಗೆ ಮಾತನಾಡುತ್ತಾ ರಮೇಶ್ ಜಾರಕಿಹೊಳಿ ಅಧಿಕಾರಕ್ಕೆ ಬಂದಿಲ್ಲ, ಸಚಿವ ಸ್ಥಾನ ಕೊಡ್ತೇವೆಂಬ ಭರವಸೆ ಕೊಟ್ಟಿದ್ದಾರೆ.
ವರಿಷ್ಠರು ಭರವಸೆ ಈಡೇರಿಸ್ತಾರೆ ಎಂಬ ನಂಬಿಕೆ ಇದೆ ನಾನು ಸೈಲೆಂಟಾಗಿಲ್ಲ ಕ್ಷೇತ್ರದಲ್ಲಿ ಪಕ್ಷದ ಕೆಲಸ ಮಾಡ್ತಿದ್ದೇನೆ. ಸವದಿಗೆ ಮುಂದೆ ಟಿಕೆಟ್ ಎಂಬ ಪ್ರಶ್ನೆಗೆ ಅವರು ಎಂಎಲ್ಸಿ, ನಾನು ಎಂಎಲ್ಎ ಇದ್ದೇನೆ ಇಬ್ಬರು ಪಕ್ಷದ ಕೆಲಸ ಮಾಡ್ತಿದ್ದೇವೆ, ಟಿಕೆಟ್ ಕೊಡುವುದು ಬಿಡುವುದು ವರಿಷ್ಠರಿಗೆ ಬಿಟ್ಟಿದ್ದು. ಒಬ್ಬರಿಗೆ ಎಂಎಲ್ಸಿ, ಎಂಎಲ್ಎ ಟಿಕೆಟ್ ಕೊಡ್ತಾರೆ
ನಮ್ಮ ವರಿಷ್ಠರು ಏನು ಹೇಳ್ತಾರೆ ಅದರಂತೆ ನಡೆದುಕೊಳ್ತೇವೆ ನಮ್ಮಲ್ಲಿ ಯಾವುದೇ ಅಸಮಾಧಾನ ಇಲ್ಲ ಎಂದು ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಹೇಳಿಕೆ ನೀಡಿದರು