Breaking News

ಟಾಪ್​ಲೆಸ್​ ಆಗಿ ಬಂದ ಉರ್ಫಿ! ತಿಂಡಿ ಪ್ಲೇಟ್​-ಜ್ಯೂಸ್​ ಗ್ಲಾಸ್​ ಹಿಡಿದು ಮೈಮಾಟ ಪ್ರದರ್ಶಿಸುತ್ತಾ ಬ್ರೇಕ್​ಫಾಸ್ಟ್​ ಎಂದ ನಟಿ.

Spread the love

ಮುಂಬೈ: ವಿಚಿತ್ರ ಫ್ಯಾಷನ್ ಸೆನ್ಸ್​ನಿಂದ ಬಹಳಷ್ಟು ಜನಪ್ರಿಯತೆ ಪಡೆದ ನಟಿ ಊರ್ಫಿ ಜಾವೇದ್, ತಾವು ಧರಿಸುವ ಬಟ್ಟೆಯಿಂದಲೇ ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಫೇಮಸ್ ಆಗಿದ್ದಾರೆ. ಈಕೆ ಯಾವ ಬಟ್ಟೆ ತೊಟ್ಟರೂ ಅದು ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ಉರ್ಫಿ ಅಂದಾಕ್ಷಣ ಅರೆಬರೆ ಮೈಮಾಟ ಪ್ರದರ್ಶನವೇ ಕಣ್ಮುಂದೆ ಬರುತ್ತದೆ.

ಸದಾ ಕನಿಷ್ಠ ಬಟ್ಟೆ ತೊಟ್ಟು ಸಖತ್​ ಹಾಟ್ ಕಾಣಿಸಿಕೊಳ್ಳುವ ಉರ್ಫಿಯನ್ನು ಕಳೆದ ಮಂಗಳವಾರ (ಡಿ.20) ದುಬೈ ಪೊಲೀಸ್​ ಅಧಿಕಾರಿಗಳು ಬಂಧಿಸಿದ್ದಾರೆ ಎಂಬ ಸುದ್ದಿ ಬಾರೀ ಸದ್ದು ಮಾಡಿತ್ತು. ದುಬೈನ ಸಾರ್ವಜನಿಕ ಪ್ರದೇಶದಲ್ಲಿ ಅರೆಬೆತ್ತಲೆ ದೇಹ ಪ್ರದರ್ಶನ ಮಾಡಿರುವುದು ಆಕೆಯ ಬಂಧನಕ್ಕೆ ಕಾರಣ ಎಂದು ಹೇಳಲಾಗಿತ್ತು. ಉರ್ಫಿ ವಿಡಿಯೋ ಮಾಡಲು ಹೋಗಿದ್ದ ಸ್ಥಳದಲ್ಲಿ ಅಶ್ಲೀಲತೆಗೆ ಆಸ್ಪದವಿರಲಿಲ್ಲ. ಹೀಗಾಗಿ ಆಕೆಯನ್ನು ದುಬೈ ಅಧಿಕಾರಿಗಳು ಬಂಧಿಸಿ ವಿಚಾರಣೆ ನಡೆಸಿದ್ದಾರೆ ಎಂಬ ಸುದ್ದಿ ಕಾಡ್ಗಿಚ್ಚಿನಂತೆ ಹರಡಿತ್ತು.

ಅರೆಬರೆ ದೇಹ ಕಾಣುವಂತೆ ಪ್ರತಿನಿತ್ಯ ವಿಭಿನ್ನ ಉಡುಗೆ ತೊಟ್ಟು ಮುಂಬೈ ಬೀದಿಯಲ್ಲಿ ಕಾಣಿಸಿಕೊಳ್ಳುತ್ತಿರುತ್ತಾರೆ. ಆಕೆಯ ಇನ್​ಸ್ಟಾಗ್ರಾಂ ಇಣುಕಿ ನೋಡಿದರೆ ಅಲ್ಲಿ ಅರೆಬೆತ್ತಲೆ ಫೋಟೋಗಳ ರಾಶಿಯೇ ಇದೆ. ಇದೇ ಕಾರಣಕ್ಕೆ ಆಗಾಗ ಟ್ರೋಲ್ ಆಗುತ್ತಿರುತ್ತಾರೆ. ಇತ್ತೀಚೆಗಷ್ಟೇ ದುಬೈಗೆ ಭೇಟಿ ನೀಡಿದ್ದ ಉರ್ಫಿ, ದುಬೈ ಪೊಲೀಸರಿಂದ ಬಂಧನಕ್ಕೆ ಒಳಗಾಗಿದ್ದಾರೆ ಎಂದು ಭಾರಿ ಸುದ್ದಿಯಾಗಿತ್ತು. ಅದೇ ದಿನ ಕಂಬಿ ಹಿಂದೆ ನಿಂತು ಸಖತ್​ ಹಾಟ್​ ಆಗಿ ಕಾಣಿಸಿಕೊಂಡೇ ವಿಡಿಯೋ ತುಣುಕೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಟ್ರೋಲಿಗರಿಗೆ ಟಾಂಗ್​ ಕೊಟ್ಟಿದ್ದಳು. ಇದೀಗ ಟಾಪ್​ ಲೆಸ್​ ಆಗಿ ಕ್ಯಾಮರಾ ಮುಂದೆ ಕಾಣಿಸಿಕೊಂಡಿರುವ ಉರ್ಫಿ. ತನ್ನ ಇನ್​ಸ್ಟಾಗ್ರಾಮ್​ನಲ್ಲಿ ವಿಡಿಯೋ ತುಣುಕು ಅಪ್​ಲೋಡ್​ ಮಾಡಿ ನೆಟ್ಟಿಗರ ಉಬ್ಬೇರಿಸಿದ್ದಾಳೆ. ‘ಬ್ರೇಕ್‌ಫಾಸ್ಟ್’ ಎಂದು ಟ್ಯಾಗ್​ಲೈನ್​ ಕೂಡ ಹಾಕಿದ್ದಾಳೆ. ಇದಕ್ಕೆ ಕೆಲವರು ಫುಲ್​ ಮೀಲ್ಸ್​ ಇಲ್ವಾ ಎಂದೂ ಕಮಂಟ್​ ಮಾಡಿದ್ದಾರೆ.

ಎದೆ ಭಾಗದಲ್ಲಿ ಬಲಗೈಯಲ್ಲಿ ತಿಂಡಿಯ ತಟ್ಟೆ, ಎಡಗೈಯಲ್ಲಿ ಆರೆಂಜ್​ ಜ್ಯೂಸ್​ನ ಗ್ಲಾಸ್​ ಹಿಡಿದು ಬ್ಯಾಕ್​ ಲೆಸ್​ ಆಗಿ ಕ್ಯಾಮರಾಗೆ ಪೋಸ್​ ನೀಡುವ ಉರ್ಫಿ, ತಾನು ಮತ್ತಷ್ಟು ಹಾಟ್​ ಎಂದು ಸಾರಿದಂತಿದೆ. ಈಕೆಯ ಮಾದಕತೆಗೆ ಹಲವರು ಮನಸೋತಿದ್ದಾರೆ. ಇನ್ನೂ ಹಲವರು ಕೆಂಡಕಾರಿದ್ದಾರೆ. ಇದೇನಾ ಸಭ್ಯತೆ ಎಂದು ಪ್ರಶ್ನಿಸಿದ್ದಾರೆ. ಬಿಚ್ಚುಗಾಗಿ ಬಿಚ್ಚಮ್ಮ ಎಂದೂ ಮೂದಲಿಸಿದ್ದಾರೆ. ಹಲವರ್​ ಮೈ ಫೇವರಿಟ್​ ಉರ್ಫಿ ಎಂದು ಕಮಂಟ್ಸ್​ ಮಾಡಿದ್ದಾರೆ.


Spread the love

About Laxminews 24x7

Check Also

ಸರ್ಕಾರ ಸಲ್ಲಿಸಿರುವ ಅರ್ಜಿ ವಿಲೇವಾರಿವರೆಗೂ ಸಿಎಟಿ ಆದೇಶ ಜಾರಿಗೆ ಒತ್ತಾಯಿಸದಂತೆ ವಿಕಾಸ್ ಕುಮಾರ್​ಗೆ ಸೂಚನೆ

Spread the loveಬೆಂಗಳೂರು: ಆರ್​​ಸಿಬಿ ವಿಜಯೋತ್ಸವದ ಸಂದರ್ಭದಲ್ಲಿ ನಡೆದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯಲೋಪ ಎಸಗಿದ್ದ ಆರೋಪದಡಿ ಕೆಲವು ಅಧಿಕಾರಿಗಳನ್ನು ಅಮಾನತು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ