ಬಿಜಾಪುರ: ಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರನ್ನು ವಿವಿಧ ಯತಿಗಳು ಇಂದು ಭೇಟಿಯಾಗಿ ಯೋಗಕ್ಷೇಮ ವಿಚಾರಿಸಿದರು.
ಸ್ವಾಮೀಜಿ ವಿಜಯಾನಂದಜಿ, ಸ್ವಾಮೀಜಿ ಸ್ವಾಮಿ ಸುಮೇಧಾನಂದಜಿ, ಸ್ವಾಮೀಜಿ ಸ್ವಾಮಿ ನರೇಶಾನಂದಜಿ, ಸ್ವಾಮೀಜಿ ಶಾರದೇಶಾನಂದಜಿ, ಸ್ವಾಮೀಜಿ ಸುಖದೇವಾನಂದಜಿ ಯೋಗಕ್ಷೇಮ ವಿಚಾರಿಸಿದರು.
ಈ ವೇಳೆ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರು ಅನಾರೋಗ್ಯದ ನಡುವೆಯೂ ಭಜನೆ ಮಾಡಲು ಆದೇಶ ನೀಡಿದರು. ಅದರಂತೆ ಸ್ಥಳದಲ್ಲೇ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ಯತಿಗಳು ಭಜನೆ ಮಾಡಿ ಆಶಯ ಪೂರೈಸಿದರು.