Breaking News
Home / ರಾಜಕೀಯ / ರಾಜ್ಯದಲ್ಲಿ ಮಾಸ್ಕ್‌ ಕಡ್ಡಾಯ, ಹೊಸ ವರ್ಷದ ಆಚರಣೆಗೆ ಹಲವು ರೂಲ್ಸ್‌ ಜಾರಿ,

ರಾಜ್ಯದಲ್ಲಿ ಮಾಸ್ಕ್‌ ಕಡ್ಡಾಯ, ಹೊಸ ವರ್ಷದ ಆಚರಣೆಗೆ ಹಲವು ರೂಲ್ಸ್‌ ಜಾರಿ,

Spread the love

ಬೆಂಗಳೂರು: ರಾಜ್ಯ ಸರ್ಕಾರದಿಂದ ಬೆಂಗಳೂರಿಗೆ ಹೊಸ ಗೈಡ್‌ ಲೈನ್ಸ್‌ ರಿಲೀಸ್‌ ಮಾಡಿದೆ. ಇಂದು ಕೋವಿಡ್‌ ಬಗ್ಗೆ ಕುರಿತು ಸಭೆ ನಡೆಸಲಾಗಿತ್ತು ಈ ಸಭೆಯಲ್ಲಿ ಮಾರ್ಗಸೂಚಿ ಬಿಡುಗಡೆಗೊಳಿಸಿದೆ.

ನಗರದಲ್ಲಿ ಮಾಸ್ಕ್‌ ಕಡ್ಡಾಯಗೊಳಿಸಲಾಗಿದೆ.

ಕೊರೊನಾ ನಿಯಂತ್ರಣಕ್ಕೆ ಹಲವು ಕ್ರಮಗಳನ್ನ ಕೈಗೊಳ್ಳಲಾಗಿದೆ. ಎಲ್ಲಾ ಥಿಯೇಟರ್‌ ಗಳಲ್ಲೂ ಮಾಸ್ಕ್‌ ಕಡ್ಡಾಯಗೊಳಿಸಲಾಗಿದೆ. ಶಾಲಾ- ಕಾಲೇಜುಗಳಲ್ಲಿ ಮಾಸ್ಕ್‌ ಕಡ್ಡಾಯವಾಗಿದೆ. ನಿಯಮ ಉಲ್ಲಂಘಿಸಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ಕೋವಿಡ್‌ ಸಭೆ ಬಳಿಕ ಸಚಿವ ಆರ್‌ ಅಶೋಕ್‌ ಹೇಳಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಕೋವಿಡ್‌ ನಿಯಮ ಪಾಲನೆ ಮಾಡಬೇಕು. ಕೊರೊನಾ ನಿಯಂತ್ರಣಕ್ಕೆ ಬಿಗಿ ಕ್ರಮ ಕೈಗೊಳ್ಳಲಾಗಿದೆ ಎಂದರು.

ಇದೇ ವೇಳೇ ಮಾತನಾಡಿದ ಸಚಿವ ಸುಧಾಕರ್‌ ಸ್ವಯಂ ಪ್ರೇರಿತವಾಗಿ ಮೂರನೇ ಡೋಸ್‌ ಲಸಿಕೆಯನ್ನು ತೆಗೆದುಕೊಳ್ಳುವಂತೆ ಮನವಿ ಮಾಡಿದರು. ಇದೇ ವೇಳೆ ಹೊರದೇಶದವರನ್ನು ರ್ಯಾಂಡಮ್‌ ರೀತಿಯಲ್ಲಿ ಟೆಸ್ಟ್‌ ಮಾಡಲಾಗುವುದು ಅಂತ ತಿಳಿಸಿದರು. ಇನ್ನೂ ಇದೇ ವೇಳೆ ಅವರು ಯಾವ ಚಟುವಟಿಕೆಗಳಿಗೆ ನಾವು ನಿರ್ಬಂದ ಮಾಡಿಲ್ಲ ಅಂತ ಹೇಳಿದರು. ಯಾವುದೇ ರಾಜಕೀಯ ಕಾರ್ಯಕ್ರಮಗಳಿಗೆ ನಿಶೇಧವನ್ನು ಹೇರಿಲ್ಲ, ಆದರೆ ಕೋವಿಡ್‌ ನಿಯಮಗಳನ್ನು ಪಾಲಿಸುವಂತೆ ಸೂಚನೆ ನೀಡಲಾಗುವುದು ಅಂತ ಹೇಳಿದರು.

ಇನ್ನೂ ದಂಡಕ್ಕೆ ಸಂಬಂಧಪಟ್ಟಂತೆ ಯಾವುದೇ ನಿರ್ಧಾರವನ್ನು ತೆಗೆದುಕೊಂಡಿಲ್ಲ, ಈ ಬಗ್ಗೆ ಸಿಎಂ ಜೊತೆಗೆ ಚರ್ಚೆ ನಡೆಸಿದ ಬಳಿಕ ಅಂತಿಮ ತೀರ್ಮಾನವನ್ನು ತೆಗೆದುಕೊಳ್ಳಲಾಗುವುದು ಅಂತ ತಿಳಿಸಿದರು. ಶಾಲಾ ಕಾಲೇಜುಗಳ ಕ್ಲಾಸ್ ರೂಮ್‌ ಒಳಗೆ ಹಾಗೂ ಶಾಲೆಗೆ ಬರುವ ಮುನ್ನ ಕೊಠಡಿ ಬಳಿಯಲ್ಲಿ ಸ್ಯಾನಿಟೈಸರ್‌ ಇಡಬೇಕು. ಇದಲ್ಲದೇ ಹೊಸ ವರ್ಷದ ಆಚರಣೆ ಗೆ ಒಂದು ಗಂಟೆ ತನಕ ಮಾತ್ರ ಅವಕಾಶ ನೀಡಲಾಗಿದೆ. ಇನ್ನೂ ಹೊಟೆಲ್‌ನಲ್ಲಿ ಇರೋ ಟೇಬಲ್‌ಗಳಲ್ಲಿ ಮಾತ್ರ ಸರ್ವಿಸ್‌ ನೀಡಲು ಅವಕಾಶವಿದ್ದು, ಹೆಚ್ಚಿನ ಟೇಬಲ್‌ಗಳನ್ನು ಹಾಕಲು ಅವಕಾಶವಿಲ್ಲ, ಸರ್ವರ್ ಗಳು ಕಡ್ಡಾಯವಾಗಿ ಎರಡು ಡೋಸ್‌ ಲಸಿಕೆಯನ್ನು ಹಾಕಿಸಿಕೊಂಡಿರಬೇಕು ಅಂತ ಸಚಿವರು ಹೇಳಿದರು.


Spread the love

About Laxminews 24x7

Check Also

ಅಂಗನವಾಡಿಗಳಿಗೆ ಕಳಪೆ ಆಹಾರ ಉತ್ಪನ್ನಗಳು ಪೂರೈಕೆಯಾದರೆ ಕಠಿನ ಕ್ರಮ

Spread the love ಬೆಳಗಾವಿ: ಅಂಗನವಾಡಿಗಳಿಗೆ ಕಳಪೆ ಗುಣಮಟ್ಟದ ಪೂರಕ ಆಹಾರ ಉತ್ಪನ್ನಗಳು ಪೂರೈಕೆಯಾದರೆ ಸಂಬಂಧಿಸಿದ ಜಿಲ್ಲೆಯ ಉಪನಿರ್ದೇಶಕರ ವಿರುದ್ಧ ಕಠಿನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ