Breaking News
Home / ರಾಜಕೀಯ / ಪರೇಶ್​ ಮೆಸ್ತಾ ಸಾವಿನ ಮರು ತನಿಖೆ ಆಗದಿದ್ರೆ ಉಗ್ರ ಹೋರಾಟ ಮಾಡುತ್ತೇವೆ ಎಂದ ಮುತಾಲಿಕ್​

ಪರೇಶ್​ ಮೆಸ್ತಾ ಸಾವಿನ ಮರು ತನಿಖೆ ಆಗದಿದ್ರೆ ಉಗ್ರ ಹೋರಾಟ ಮಾಡುತ್ತೇವೆ ಎಂದ ಮುತಾಲಿಕ್​

Spread the love

ತ್ತರಕನ್ನಡ: ಪರೇಶ್ ಮೆಸ್ತಾ ಹತ್ಯೆ ಪ್ರಕರಣ ಇನ್ನೂ ಜೀವಂತವಾಗಿದ್ದು ಯುವಕನ ಸಾವಿಗೆ ನ್ಯಾಯ ಸಿಕ್ಕಿಲ್ಲ ಎಂದು ಹಿಂದು ಸಂಘಟನೆಗಳು ಇನ್ನೂ ಹೋರಾಟದಲ್ಲಿ ನಿರತವಾಗಿವೆ.

ಇದೀಗ ಸಿಬಿಐ ಮರುತನಿಖೆ ಆಗದಿದ್ದರೆ ಬಿಜೆಪಿ ಶಾಸಕರು, ಸಂಸದರ ಮನೆ ಮುಂದೆ ಉಗ್ರ ಧರಣಿ ಮಾಡಲಾಗುತ್ತದೆ ಎಂದು ಹೊನ್ನಾವರದಲ್ಲಿ ಶ್ರೀರಾಮ ಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.

 

‘ಪ್ರಕರಣದಲ್ಲಿ ಅಂದಿನ ಜಿಲ್ಲಾಧಿಕಾರಿ ಹಾಗೂ ಪೋಸ್ಟ್ ಮಾರ್ಟಮ್ ಮಾಡಿದ ವೈದ್ಯರನ್ನು ಸಹ ಮರು ತನಿಖೆ ಮಾಡಬೇಕು. ಬಿಜೆಪಿಯವರು ಚುನಾವಣೆಯಲ್ಲಿ ಕರಾವಳಿ ಉದ್ದಕ್ಕೂ ಪರೇಶ್ ಮೇಸ್ತಾ ತಂದೆತಾಯಿಯನ್ನು ಪ್ರಚಾರಕ್ಕೆ ಕರೆದುಕೊಂಡು ಹೋದ್ರಿ. ಐದು ವರ್ಷ ಆಯ್ತು ಅವರ ಮನೆಯಲ್ಲಿ ಏನಿದೆ ಏನಿಲ್ಲ ಎನ್ನುವುದನ್ನು ಕೇಳುವ ಸೌಜನ್ಯ ತೋರಿಲ್ಲ.

ಘಟನೆಯ ಸಂಪೂರ್ಣ ಲಾಭವನ್ನು ಅಂದಿನ ಬಿಜೆಪಿ ಇಂದಿನ ಶಾಸಕರು,ಎಂಪಿ ಯವರು ತೆಗೆದುಕೊಂಡಿದ್ದಾರೆ. ಇವತ್ತು ಐದು ಎಮ್.ಎಲ್.ಎ ಗಳು ಎಂಪಿ ಬಾಯಿ ಮುಚ್ಚಿಕೊಂಡಿದ್ದಾರೆ. ಜನರನ್ನ ಕಾರ್ಯಕರ್ತರನ್ನು ಬೀದಿಗಿಳಿಸಿ ಅವರ ಮೇಲೆ ಕೇಸು ಹಾಕಿಸಿ ತಾವು ಗೆದ್ದರು ಇಂದು ಆನಂದವಾಗಿ ಮೆರೆಯುತಿದ್ದಾರೆ. ಆದ್ರೆ ಪರೇಶ್ ಮೇಸ್ತಾ ಸಾವಿಗೆ ನ್ಯಾಯ ಕೊಡಿಸಲಿಲ್ಲ’ ಎಂದು ಹೊನ್ನಾವರದಲ್ಲಿ ಮುತಾಲಿಕ್ ಹೇಳಿಕೆ ನೀಡಿದ್ದಾರೆ.


Spread the love

About Laxminews 24x7

Check Also

ಕಾಲೇಜು ವಿದ್ಯಾರ್ಥಿಯಿಂದ ಸೆಕ್ಯೂರಿಟಿ ಕಾರ್ಡ್ ಹತ್ಯೆ!

Spread the love ಬೆಂಗಳೂರು : ಬೆಂಗಳೂರಿನಲ್ಲಿ ಕಾಲೇಜು ವಿದ್ಯಾರ್ಥಿ ಒಬ್ಬ ಚಾಕುವಿನಿಂದ ಇರಿದು ಸೆಕ್ಯೂರಿಟಿ ಗಾರ್ಡನ್ನು ಭೀಕರವಾಗಿ ಕೊಲೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ