ಬಾಗಲಕೋಟೆ: ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿಯಾಗಿ ಹುಟ್ಟು ಹಬ್ಬದ ದಿನವೇ ಯುವಕನೊಬ್ಬ ದುರಂತ ಸಾವಿಗೀಡಾಗಿರುವ ಘಟನೆ ಗದ್ದನಕೇರಿ ತಾಂಡಾ ಸಮೀಪ ನಡೆದಿದೆ. ಅಪಘಾತದಲ್ಲಿ ಸ್ನೇಹಿತನೂ ಮೃತಪಟ್ಟಿದ್ದಾನೆ.
ನವನಗರದ ಸಂಗಮೇಶ (21) ಹಾಗೂ ಶಿರಗುಪ್ಪಿ ತಾಂಡಾದ ಕಿರಣ (21) ಮೃತ ದುರ್ದೈವಿಗಳು.
ನಿನ್ನೆ (ಡಿ.6) ಸಂಗಮೇಶ್ ಹುಟ್ಟುಹಬ್ಬವಿತ್ತು. ಹೀಗಾಗಿ ಹುಟ್ಟುಹಬ್ಬ ಆಚರಿಸಿಕೊಂಡು ಸ್ನೇಹಿತ ಕಿರಣ್ ಜೊತೆ ಬೈಕ್ನಲ್ಲಿ ಬರುವಾಗ ಭೀಕರ ಅಪಘಾತ ಸಂಭವಿಸಿದೆ.
ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರಲ್ಲಿ ಒಬ್ಬನ ದೇಹ ತುಂಡರಿಸಿದೆ. ಸ್ಥಳಕ್ಕೆ ಬಾಗಲಕೋಟೆ ಗ್ರಾಮೀಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅತಿಯಾದ ವೇಗವೇ ಅಪಘಾತಕ್ಕೆ ಕಾರಣ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.
Laxmi News 24×7