ರಾಜ್ಯ ಮಟ್ಟದ ಮಕ್ಕಳ ಚಿತ್ರಕಲಾ ಸ್ಪರ್ಧೆಯಲ್ಲಿ ಸೇಂಟ್ ಜೋಸೆಫ್ ವಿದ್ಯಾರ್ಥಿಗಳಾದ ಸಾನಿಯಾ ಜಹಗೀರದಾರ, ಆಫಿಯಾ ಶೇಖ ರಾಜ್ಯಕ್ಕೆ 2ನೇ ಸ್ಥಾನ
ಹೌದು ಧಾರವಾಡದ ಬಾಲ ವಿಕಾಸ ಅಕಾಡೆಮಿ ಮತ್ತು ಬಣ್ಣದ ಮನೆ ಸಾಂಸ್ಕೃತಿಕ ವೇದಿಕೆ ವತಿಯಿಂದ ಗದಗನಲ್ಲಿ ಇತ್ತಿಚೆಗೆ ಏರ್ಪಡಿಸಿದ್ದ “ಚಿನ್ನದ ಚಿತ್ರ ಚಿತ್ತಾರ” ಎಂಬ ರಾಜ್ಯ ಮಟ್ಟದ ಮಕ್ಕಳ ಚಿತ್ರಕಲಾ ಸ್ಪರ್ಧೆಯಲ್ಲಿ ಧಾರವಾಡದ ಸೇಂಟ್ ಜೋಸೆಫ್ ಹೈಸ್ಕೂಲಿನ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿ ಶಾಲೆಗೆ ಕೀರ್ತಿ ತಂದಿದ್ದಾರೆ.ಈ ಸ್ಪರ್ಧೆಯಲ್ಲಿ ಭಾಗವಹಿಸಿದ ಶಾಲೆಯ 200 ವಿದ್ಯಾರ್ಥಿಗಳ ಪೈಕಿ 10ನೇ ತರಗತಿ ವಿದ್ಯಾರ್ಥಿನಿ ಸಾನಿಯಾ ಪರವೀಜ್ ಅಹಮ್ಮದ್ ಜಹಗೀರದಾರ ಮತ್ತು 2ನೇ ತರಗತಿ ವಿದ್ಯಾರ್ಥಿನಿ ಆಫಿಯಾ ಶೇಖ ಬಹುಮಾನ ಪಡೆದಿದ್ದಾರೆ.
ಸ್ಪರ್ಧೆಯಲ್ಲಿ ರಾಜ್ಯದ ವಿವಿಧ ಶಾಲೆಗಳ 41ಸಾವಿರ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸಾಧನೆಗೈದ ವಿದ್ಯಾರ್ಥಿಗಳನ್ನು ಸೇಂಟ್ ಜೋಸೆಫ್ ಚರ್ಚ ಫಾದರ್ ರೆ.ಫಿಡಿಲಿನೊ,ಶಾಲೆ ಪ್ರಾಚಾರ್ಯ ಫಾದರ್ ಮೈಕೆಲ್ ಸೋಜ್ ಅಭಿನಂದಿಸಿದರು.ಈ ಸಂದರ್ಭದಲ್ಲಿ ಚಿತ್ರಕಲಾ ಶಿಕ್ಷಕ ಯೂಸೂಫ್ ಅಲಿ ಕಲಾಸಿ, ಶಿಕ್ಷಣ ಶ್ಯಾಮ್ ಮಲ್ಲನಗೌಡರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
Laxmi News 24×7