ತ್ರಿಚಕ್ರ ವಾಹನ ಅಪಘಾತಕ್ಕಿಡಾಗಿ ಓರ್ವ ವ್ಯಕ್ತಿ ಸಾವನ್ನಪ್ಪಿದ ಘಟನೆ ಬೈಲಹೊಂಗಲ ತಾಲೂಕಿನ ಮರಿಕಟ್ಟಿ ಗ್ರಾಮದ ಹಿರೇಬಾಗೇವಾಡಿ-ಮೋದಗಾ ರಸ್ತೆಯಲ್ಲಿ ನಡೆದಿದೆ.
ಮೃತರನ್ನು ಬೈಲಹೊಂಗಲ ತಾಲೂಕಿನ ನಾವಲಗಟ್ಟಿಯ ೪೦ ವರ್ಷದ ಗಣಪತಿ ಮುರಗೋಡ ಎಂದು ಗುರುತಿಸಲಾಗಿದೆ. ಹುಟ್ಟು ದಿವ್ಯಾಂಗರಾಗಿದ್ದ ಗಣಪತಿ ನಾವಲಗಟ್ಟಿಯಿಂದ ಮೊದಗಾ ಕಡೆಗೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ. ಮರಥರು ಸಹೋದರರು, ಸಹೋದರು ಮತ್ತು ಪತ್ನಿಯನ್ನು ಅಗಲಿದ್ದಾರೆ.
ಬೈಲಹೊಂಗಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.