ನವದೆಹಲಿ: ನಾನು ವಿದ್ಯಾರ್ಥಿ ನಾಯಕನಾಗಿದ್ದಾಗ, ಅಂದು ಕಾಂಗ್ರೆಸ್ನಲ್ಲಿ ಸಚಿವರಾಗಿದ್ದ ಶ್ರೀಕಾಂತ್ ಕಾಂಗ್ರೆಸ್ ಪಕ್ಷಕ್ಕೆ ಸೇರುವಂತೆ ಆಹ್ವಾನಿಸಿದ್ದರು. ಆದರೆ ನಾನು, “ಬೇಕಾದರೆ ಬಾವಿಗೆ ಬೀಳುತ್ತೇನೆ. ನಿಮ್ಮ ಪಕ್ಷ ಸೇರುವುದಿಲ್ಲ, ನನಗೆ ನಿಮ್ಮ ಪಕ್ಷದ ಸಿದ್ಧಾಂತ ಇಷ್ಟವಿಲ್ಲ’ ಎಂದಿದ್ದೆ ಎಂದು ಕೇಂದ್ರ ಸಾರಿಗೆ ಮತ್ತು ರಾಷ್ಟ್ರೀಯ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ನಾಗ್ಪುರದಲ್ಲಿ ನಡೆದ ಉದ್ಯಮಿಗಳ ಸಭೆಯಲ್ಲಿ ಅವರು ಹಳೆಯ ದಿನಗಳ ಈ ನೆನಪನ್ನು ಹಂಚಿಕೊಂಡಿದ್ದಾರೆ. ಇದೇ ವೇಳೆ, ಅಗತ್ಯವಿದ್ದಾಗ ಒಬ್ಬರನ್ನು ಉಪಯೋಗಿಸಿಕೊಂಡು, ನಂತರ ಅವರನ್ನು ಹೊರಗೆಸೆಯುವುದು ತಪ್ಪು. ಒಬ್ಬನ ಕೈಯನ್ನು ನೀವು ಹಿಡಿದುಕೊಂಡಿದ್ದೀರೆಂದರೆ ಆತ ನಿಮ್ಮ ಸ್ನೇಹಿತ ಎಂದರ್ಥ. ಅವನ ಕೈಬಿಡಲೇಬಾರದು ಎಂದು ಹೇಳಿದ್ದಾರೆ.
Laxmi News 24×7