ಗದಗ: ಕೌಟುಂಬಿಕ ಕಲಹ ಹಿನ್ನೆಲೆ ಮಗನಿಂದಲೇ ತಂದೆಯ ಬರ್ಬರ ಹತ್ಯೆ ನಡೆದಿರುವ ಘಟನೆ ತಾಲೂಕಿನ ಹುಲಕೋಟಿ ಗ್ರಾಮದಲ್ಲಿ ಬುಧವಾರ ನಡೆದಿದೆ.
ಹುಲಕೊಟಿ ಗ್ರಾಮದ 58 ವರ್ಷದ ಗಣೇಶ ಅಡಿವೆಪ್ಪ ಚಿಕ್ಕನಟ್ಟಿ ಕೊಲೆಯಾದವರು. ವಿಜಯ ಗಣೇಶ ಚಿಕ್ಕನಟ್ಟಿ ಕೊಲೆ ಮಾಡಿದ ಮಗ.
ಕಳೆದ ಕೆಲ ವರ್ಷಗಳಿಂದ ಗಣೇಶ ಚಿಕ್ಕನಟ್ಟಿ, ಹೆಂಡತಿ ಹಾಗೂ ಮಗನಿಗೆ ನಿತ್ಯ ಕಿರುಕುಳ ನೀಡಿ, ಮನೆಯಲ್ಲಿ ಜಗಳವಾಡುತ್ತಿದ್ದ ಎಂದು ತಿಳಿದು ಬಂದಿದೆ.
ಎಂದಿನಂತೆ ತಂದೆ ಗಣೇಶ ಮನೆಯಲ್ಲಿ ತಾಯಿಗೆ ಕಿರುಕುಳ ನೀಡುತ್ತಿದ್ದನ್ನು ಗಮನಿಸಿದ ಮಗ, ತಂದೆ ಮಲಗಿರುವ ವೇಳೆ ಕೊಡಲಿಯಿಂದ ಬಲವಾಗಿ ಕುತ್ತಿಗೆಗೆ ಹೊಡೆದಿದ್ದಾನೆ. ಪರಿಣಾಮ ಗಣೇಶ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಕೊಲೆ ನಂತರ ವಿಜಯ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾನೆ.