ಬೆಂಗಳೂರು: ಸಿನಿಮೀಯ ರೀತಿಯಲ್ಲಿ ಪತ್ನಿಯನ್ನು ಕೊಲೆಗೈದಿರುವ ಪತಿಯನ್ನು ಬಂಧಿಸಿರುವ ಘಟನೆ ಮಡಿವಾಳ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಬಿಹಾರ ಮೂಲದ ಜ್ಯೋತಿ ಕುಮಾರಿ (38) ಕೊಲೆಯಾದ ಮಹಿಳೆ. ಪತಿ ಪೃಥ್ವಿರಾಜ್(30) ಬಂಧಿತ ಆರೋಪಿ.
ಕೃತ್ಯಕ್ಕೆ ಸಹಕರಿಸಿದ ಸಮೀರ್ ಕುಮಾರ್ ತಲೆಮರೆಸಿಕೊಂಡಿದ್ದಾನೆ.
12 ವರ್ಷಗಳ ಹಿಂದೆ ನಗರಕ್ಕೆ ಬಂದಿದ್ದ ಪೃಥ್ವಿರಾಜ್, ಎಲೆಕ್ಟ್ರಾನಿಕ್ಸ್ ವಸ್ತುಗಳ ಮಾರಾಟಗಾರನಾಗಿ ಕೆಲಸ ಮಾಡುತ್ತಿದ್ದ. ಈ ಮಧ್ಯೆ ಬಿಹಾರ ಮೂಲದ ಜ್ಯೋತಿ ಕುಮಾರಿಯನ್ನು 2021ರ ನವೆಂಬರ್‌ನಲ್ಲಿ ಮದುವೆಯಾಗಿದ್ದನು. ಆದರೆ, ಇಬ್ಬರ ನಡುವೆ ವಯಸ್ಸಿನ ಅಂತರ ಹೆಚ್ಚಾಗಿದ್ದರಿಂದ ಕೌಟುಂಬಿಕ ವಿಚಾರದಲ್ಲಿ ಜಗಳ ನಡೆಯುತ್ತಿತ್ತು.
ಸಿನಿಮೀಯ ಮಾದರಿ ಕೊಲೆ: ಕನ್ನಡ ಸೂಪರ್ ಹಿಟ್ “ಬಾ ನಲ್ಲೆ ಮಧುಚಂದ್ರಕೆ” ಸಿನಿಮಾದ ನಾಯಕ ತನ್ನ ನಾಯಕಿಯನ್ನು ಹಿಮಾಲಯಕ್ಕೆ ಎತ್ತರದ ಪ್ರದೇಶ ದಿಂದ ತಳ್ಳಿ ಕೊಲೆಗೈಯುತ್ತಾನೆ. ಅದೇ ಮಾದರಿ ಪೃಥ್ವಿರಾಜ್ ಪತ್ನಿ ಜ್ಯೋತಿಕುಮಾರಿಯನ್ನು ಪ್ರವಾಸದ ನೆಪ ದಲ್ಲಿ ಕರೆದೊಯ್ದು ಕೊಲೆಗೈದಿದ್ದಾನೆ.
ಇದಕ್ಕೂ ಮುನ್ನ ಪತ್ನಿ ಕೊಲೆಗೈಯುವ ವಿಚಾರವನ್ನು ತನ್ನ ಸ್ನೇಹಿತ ಸಮೀರ್ ಕುಮಾರ್ ಬಳಿ ಹೇಳಿಕೊಂಡು ಸಂಚು ರೂಪಿಸಿದ್ದ ಆರೋಪಿ, ಪತ್ನಿಗೆ ಪುಸಲಾಯಿಸಿ ಆ.1ರಂದು ಪ್ರವಾಸಕ್ಕೆಂದು ಜೂಮ್ ಕಾರಿನಲ್ಲಿ ಉಡುಪಿ ಬಳಿ ಮಲ್ಪೆ ಬೀಚ್‌ಗೆ ಕರೆದೊಯ್ದಿದ್ದಾನೆ.