Breaking News

ರಾಜಕೀಯ ನಾಯಕನ‌ ರಂಗಿನಾಟದ ರಹಸ್ಯ ಬಟಾಬಯಲು

Spread the love

ರಾಜಕೀಯ ನಾಯಕರ ರಂಗಿನಾಟದ ವಿಡಿಯೋಗಳು ಕಾಲಕಾಲಕ್ಕೆ ಹೊರಬರುತ್ತಿರುತ್ತವೆ. ಈಗ ಮಹಾರಾಷ್ಟ್ರದ ರಾಜಕಾರಣಿಯೊಬ್ಬರ ವಿಡಿಯೋ ವೈರಲ್ ಆಗಿದೆ.ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಗೆ ಸಂಬಂಧಿಸಿದ ಪ್ರಮುಖ‌ ನಾಯಕರಿಗೆ ಸಂಬಂಧಿಸಿದ್ದಾಗಿದ್ದು, ಮಹಿಳೆಯು ಆತನನ್ನು “ಎಕ್ಸ್‌ಪೋಸ್” ಮಾಡುತ್ತಾರೆ.

 

ಐಷಾರಾಮಿ ಕೊಠಡಿಯ‌ ಬೆಡ್ ಮೇಲೆ ರಾಜಕಾರಣಿ ಕುಳಿತಿದ್ದು, ಆ ಮಹಿಳೆಯು ಮೊಬೈಲ್ ಕ್ಯಾಮರಾದ ಆನ್ ಮಾಡಿ ಆತನ‌ ಬಂಡವಾಳ ಬಿಚ್ಚಿಡುತ್ತಾಳೆ.

ತನ್ನ ಹೆಸರನ್ನು ಹೇಳಿಕೊಂಡು, ಇವನು ನನಗೆ ಮೋಸ ಮಾಡಿದ ವ್ಯಕ್ತಿ. ಅವನು ಅಕ್ರಮ ಸಂಬಂಧ ಹೊಂದಿದ್ದಾನೆ ಎಂದು ಹೇಳುತ್ತಾಳೆ. ಆಕೆಯ ಕೊರಳಿನಲ್ಲಿ ಮಂಗಳಸೂತ್ರವೂ ಕಾಣಿಸುತ್ತದೆ.

ಈ ವೇಳೆ ಆತ ವಿಡಿಯೋ ಮಾಡದಂತೆ ಅಡ್ಡಿ‌ ಮಾಡುತ್ತಾನೆ. ಆದರೆ ಆ ಮಹಿಳೆ, ಈಗ ನೋಡು.. ನಾನು ನಿನ್ನನ್ನು ಬಿಡುವುದಿಲ್ಲ. ನೀನು ನನಗೆ ಯಾಕೆ ಸುಳ್ಳು ಹೇಳಿದೆ? ಎಂದು ಪ್ರಶ್ನಿಸುತ್ತಾಳೆ. ಆಗ ಕ್ಯಾಮೆರಾ ಆಫ್ ಆಗುತ್ತದೆ. ಮಂಗಳವಾರ ಬೆಳಗ್ಗೆಯಿಂದ ಸಾಮಾಜಿಕ ಜಾಲತಾಣಗಳಲ್ಲಿ ಇದು ವೈರಲ್ ಆಗಿದೆ.‌

VIDEO CREDITS TO TV 9 MARATHI

https://twitter.com/i/status/1546875114851291137


Spread the love

About Laxminews 24x7

Check Also

ಮದುವೆ ಪತ್ರಿಕೆ ಕೊಡುವ ನೆಪದಲ್ಲಿ ಬಂದ ದುಷ್ಕರ್ಮಿಗಳು: ಮಾಲೀಕರ ಕೈಕಾಲು ಕಟ್ಟಿ 200 ಗ್ರಾಂ ಚಿನ್ನ ಕದ್ದು ಎಸ್ಕೇಪ್

Spread the loveಮಂಗಳೂರು/ಬೆಂಗಳೂರು: ಪರಿಚಯವೇ ಇಲ್ಲದವರು ಮನೆಗೆ ಆಹ್ವಾನ ಪತ್ರಿಕೆ ನೀಡುವ ಸೋಗಿನಲ್ಲಿ ಮನೆಗೆ ಬಂದು, ಹಾಡಹಗಲೇ ಮನೆ ಮಾಲೀಕರ ಕೈಕಾಲು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ