ಮಹಾರಾಷ್ಟ್ರದ ಪಶ್ಚಿಮ ಘಟ್ಟದಲ್ಲಿ ಮಳೆರಾಯನ ಆರ್ಭಟ ಮುಂದುವರೆದಿದ್ದು ಇತ್ತ ಗಡಿಜಿಲ್ಲೆ ಬೆಳಗಾವಿಯಲ್ಲೂ ವರ್ಷಧಾರೆ ಮುಂದುವರೆದಿದೆ. ಚಿಕ್ಕೋಡಿ ತಾಲೂಕಿನ ಕೆಳ ಹಂತದ ಯಡೂರು ಕಲ್ಲೋಳ, ಮಲ್ಲಿಕವಾಡ ದತ್ತವಾಡ, ಕಾರದಗಾ ಭೋಜ ಸೇತುವೆಗಳು ಜಲಾವೃತವಾಗಿದ್ದು, ಬೆಳಗಾವಿ ಜಿಲ್ಲೆಯಲ್ಲಿ ಎಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ ಎಂದು ಎಂದು ಜಿಲ್ಲಾಧಿಕಾರಿಗಳಾದ ನಿತೇಶ್ ಪಾಟೀಲ್ ಹೇಳಿದ್ದಾರೆ.
ಬೆಳಗಾವಿಯಲ್ಲಿ ತಮ್ಮ ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಡಿಸಿ ನಿತೇಶ್ ಪಾಟೀಲ್ ಮಹಾರಾಷ್ಟ್ರ ಪಶ್ಚಿಮ ಘಟ್ಟಗಳಲ್ಲಿ ವರುಣರಾಯನ ಆರ್ಭಟ ಮುಂದುವರೆದಿದೆ. ಮಹಾ ಮಳೆಯಿಂದ ಕೃμÁ್ಣ ನದಿ ಒಳ ಹರಿವು ಹೆಚ್ಚಳವಾಗಿದೆ. ಕೃμÁ್ಣ ನದಿಗೆ 70 ಸಾವಿರಕ್ಕೂ ಅಧಿಕ ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಅμÉ್ಟೀ ಪ್ರಮಾಣದ ನೀರನ್ನ ಹಿಪ್ಪರಗಿ ಬ್ಯಾರೇಜನಿಂದ ಹೊರ ಬಿಡಲಾಗುತ್ತಿದೆ.
ಚಿಕ್ಕೋಡಿ ತಾಲೂಕಿನ ಕೆಳ ಹಂತದ ಯಡೂರು ಕಲ್ಲೋಳ, ಮಲ್ಲಿಕವಾಡ ದತ್ತವಾಡ, ಕಾರದಗಾ ಭೋಜ ಸೇತುವೆಗಳು ಜಲಾವೃತವಾಗಿವೆ. ಪರ್ಯಾಯ ಮಾರ್ಗಗಳ ಮೂಲಕ ಜನರ ಸಂಚಾರ ಮುಂದುವರೆದಿದೆ. ಇತ್ತ ಘಟಪ್ರಭಾ, ಮಲಪ್ರಭಾ ನದಿಗಳ ಒಳ ಹರಿವು ಕೂಡ ಹೆಚ್ಚಳವಾಗಿದೆ. ಇನ್ನೂ ಮೂರನಾಲ್ಕು ದಿನ ಹೀಗೆ ಮಳೆ ಮುಂದೊರೆಯಲಿದ್ದು, ನದಿ ಪಾತ್ರದ ಜನರಲ್ಲಿ ಅರ್ಲಟ್ ಆಗಿ ಇರಲು ಸೂಚಿಸಲಾಗಿದೆ. ಇನ್ನೂ ನಾಲ್ಕು ದಿನಗಳಕಾಲ ಬೆಳಗಾವಿ ಜಿಲ್ಲೆಗೆ ಎಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.
ಇನ್ನು ಜಿಲ್ಲೆಯಲ್ಲಿ ಮಳೆಯ ಪ್ರಮಾಣ ಹೆಚ್ಚಳವಾಗುತ್ತಿರುವುದರಿಂದ ಅಗತ್ಯ ಕ್ರಮಗಳನ್ನು ಕುರಿತಂತೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಜಿಲ್ಲಾಧಿಕಾರಿಗಳಾದ ನಿತೇಶ್ ಪಾಟೀಲ್, ಬೆಳಗಾವಿ ಜಿಲ್ಲೆಗೆ 69 ಸಾವಿರ ಕ್ಯೂಸೆಕ್‍ನಷ್ಟು ನೀರು ಹರಿದು ಬರುತ್ತಿದೆ. ಅದೇ ರೀತಿ ಆಲಮಟ್ಟಿ ಜಲಾಶಯಕ್ಕೆ ನೀರು ಹರಿದು ಹೋಗುತ್ತಿದೆ. ಮಹಾರಾಷ್ಟ್ರದ ಕೊಯ್ನಾ ಜಲಾಶಯದಲ್ಲಿ ಕೇವಲ ಶೇಕಡ 22ರಷ್ಟು ನೀರು ಸಂಗ್ರಹವಾಗಿದೆ. ಕೋಯ್ನಾ ಅಥವಾ ಮಹಾರಾಷ್ಟ್ರದ ಯಾವುದೇ ಡ್ಯಾಂನಿಂದ ನೀರು ಬಿಡ್ತಿಲ್ಲ.
ಮಳೆ ಎಷ್ಟು ಆಗಿದೆಯೋ ಆ ನೀರು ಮಾತ್ರ ಇರೋದು ಹಿಡಕಲ್ ಜಲಾಶಯದಲ್ಲಿ ಕೇವಲ ಶೇಕಡ 17.5ರಷ್ಟು ನೀರು ಸಂಗ್ರಹವಾಗಿದೆ. ನವಿಲುತೀರ್ಥ ಜಲಾಶಯದಲ್ಲಿ ಶೇಕಡ 34ರಷ್ಟು ನೀರು ಸಂಗ್ರಹವಿದೆ. ನೀರು ಒಳಹರಿವು ಬಂದರೂ ಡ್ಯಾಂಗಳಲ್ಲಿ ಸಂಗ್ರಹ ಸಾಮಥ್ರ್ಯ ಇದೆ. ಮಾಕರ್ಂಡೇಯ ಜಲಾಶಯದಲ್ಲಿಯೂ ಸಹ ಶೇಕಡ 36ರಷ್ಟು ನೀರು ಸಂಗ್ರಹವಿದೆ. ಸದ್ಯದ ಮಟ್ಟಿಗೆ ಬೆಳಗಾವಿ ಜಿಲ್ಲೆಯಲ್ಲಿ ಯಾವುದೇ ಸಮಸ್ಯೆ ಇಲ್ಲ. ಮುಂದಿನ ದಿನಗಳಲ್ಲಿ ತುಂಬಾ ಮಳೆ ಬಂದ್ರೆ, ಡ್ಯಾಂನಿಂದ ನೀರು ಬಿಟ್ರೆ ಸಮಸ್ಯೆ ಆಗುತ್ತೆ. ಕರ್ನಾಟಕ ಮಹಾರಾಷ್ಟ್ರ ನೀರಾವರಿ ಇಲಾಖೆ ಅಧಿಕಾರಿಗಳು ಸಂಪರ್ಕದಲ್ಲಿದ್ದಾರೆ ಎಂದರು.
ಇನ್ನು ಮಳೆಯಿಂದಾದ ಹಾನಿ ಕುರಿತಂತೆ ಮಾತನಾಡಿದ ಅವರು, ಬೆಳಗಾವಿ ಜಿಲ್ಲೆಯಲ್ಲಿ 37 ಮನೆಗಳು ಭಾಗಶಃ ಹಾನಿಯಾಗಿವೆ. ಖಾನಾಪುರ ತಾಲೂಕಿನಲ್ಲಿ ಒಂದು ಶಾಲೆಗೆ ಹಾನಿಯಾಗಿದೆ. ಎರಡು ಹೆಕ್ಟೇರ್ ಪ್ರದೇಶದಲ್ಲಿ ಬಾಳೆಹಣ್ಣು, ತರಕಾರಿ ಬೆಳೆ ನಾಶವಾಗಿದೆ. ಸಿಎಂ ಸಹ ಎಲ್ಲರಿಗೂ ಅಲರ್ಟ್ ಆಗಲು ಹೇಳಿದ್ದಾರೆ. ಈಗಾಗಲೇ ಎನ್‍ಡಿಆರ್‍ಎಫ್, ಎಸ್‍ಡಿಆರ್‍ಎಫ್ ತಂಡ ನಮ್ಮಲ್ಲಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಮಳೆ ಬಹಳ ದಿನ ಬಂದ್ರೆ ಸಮಸ್ಯೆ ಆಗುತ್ತೆ. ಹೋದ ವರ್ಷಕ್ಕೆ ಹೋಲಿಸಿದರೆ ಶೇಕಡ 50ರಷ್ಟು ಡ್ಯಾಂ ಸ್ಟೋರೇಜ್ ಇz.É ತಹಶಿಲ್ದಾರ್ ಅಕೌಂಟ್‍ಗಳಲ್ಲಿ ಹಣ ಇದ್ದು
ತುರ್ತು ಪರಿಹಾರಕ್ಕೂ ಯಾವುದೇ ಸಮಸ್ಯೆ ಇಲ್ಲ ಎಂದು ಡಿಸಿ ನಿತೇಶ ಪಾಟೀಲ್ ತಿಳಿಸಿದ್ದಾರೆ.