Breaking News

ಬೆಳಗಾವಿಯಲ್ಲಿ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಪತ್ರಿಕಾ ದಿನಾಚರಣೆ

Spread the love

ಬೆಳಗಾವಿಯಲ್ಲಿ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಪತ್ರಿಕಾ ದಿನಾಚರಣೆ ಹಾಗೂ ಗುರುವಂದನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು

ನಗರದ ಜೀರಗೆ ಹಾಲ್‍ನಲ್ಲಿ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕ ಹಾಗು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಬೆಳಗಾವಿ ಇವರ ಸಂಯುಕ್ತ ಆಶ್ರಯದಲ್ಲಿ ಪತ್ರಿಕಾ ದಿನಾಚರಣೆ ಹಾಗೂ ಗುರುವಂದನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ದೀಪವನ್ನು ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಗಣ್ಯರು ಚಾಲನೆ ನೀಡಿದರು.

ಈ ವೇಳೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾಧಿಕಾರಿಗಳಾದ ನಿತೇಶ್ ಪಾಟೀಲ್, ಮಾಧ್ಯಮ ಸ್ವಾತಂತ್ರ್ಯಕ್ಕೆ ಯಾವುದೇ ಕಾರಣಕ್ಕೂ ಅಡೆತಡೆ  ಬಾರದು .ರಾಜ್ಯದ ಪತ್ರಿಕಾ ರಂಗಕ್ಕೆ ಬಹಳ ದೊಡ್ಡ ಇತಿಹಾಸವಿದೆ. ಸ್ವಾತಂತ್ರ್ಯ ಪೂರ್ವದಿಂದಲೂ ಪತ್ರಿಕಾ ರಂಗ ತನ್ನದೇ ಆದ ಸ್ವಾತಂತ್ರ್ಯ ಪಡೆದುಕೊಂಡಿದೆ ಎಂದು ಹೇಳಿದರು.

ರಾಜ್ಯದ ಹಾಗೂ ದೇಶದ ಆಡಳಿತಕ್ಕೆ ಆಯ್ಕೆ ಆಗುವ ಪ್ರತಿ ಅಭ್ಯರ್ಥಿಯು ಕೂಡ ಪತ್ರಿಕೆ, ಪ್ರಚಲಿತ ವಿಷಯಗಳು ಓದಲೇ ಬೇಕು. ಪತ್ರಿಕೆಗಳನ್ನು ಪುಸ್ತಕದ ಮಾದರಿಯಲ್ಲಿ ಓದುವುದು ದೇಶದ ಆಡಳಿತ ಸೇವೆಯ ಪರೀಕ್ಷೆ ಬರೆಯುವ ಪ್ರತಿ ಅಭ್ಯರ್ಥಿಯು ಮಾದರಿಯಾಗಿದೆ. ಸಂದರ್ಶನದಲ್ಲಿ ಸಹ ಪತ್ರಿಕೆ ಹಾಗೂ ಪ್ರಚಲಿತ ಸ್ಥಳೀಯ ಘಟನೆಗಳು ಸಹ ಪತ್ರಿಕೆಯ ಅವಲಂಬಿಸಿ. ಪ್ರತಿಯೊಬ್ಬರೂ ಸುದ್ದಿ ಇಲ್ಲದೆ ಇರಲು ಸಾಧ್ಯವಿಲ್ಲ ಎಂದು ಹೇಳಿದರು.

ನಮ್ಮ ಆಡಳಿತದಲ್ಲಿ ಸಂವಿಧಾನದ 4 ನೇ ಅಂಗವಾಗಿ ಪತ್ರಿಕಾ ಮಾಧ್ಯಮ ಕಾರ್ಯ ನಿರ್ವಹಿಸುತ್ತಿದೆ.
3 ಆಡಳಿತ ವಿಭಾಗದಲ್ಲಿಯೂ ತಿದ್ದುವ ಕೆಲಸ ನಾಲ್ಕನೇ ಅಂಗವಾಗಿ ಮಾಧ್ಯಮಗಳು ತಮ್ಮ ಕಾರ್ಯ ಮಾಡುತ್ತಿವೆ. ಮಾಧ್ಯಮಗಳು ಅತ್ಯಂತ ವ್ಯವಸ್ಥಿತವಾಗಿ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸುವುದು ಶ್ಲಾಘನೀಯ.
ಭಾರತ ದೇಶ ಅಭಿವ್ಯಕ್ತಿ ಸ್ವಾತಂತ್ರ್ಯದ ದೇಶವಾಗಿದೆ. ಇತರೆ ದೇಶಕ್ಕೆ ಹೋಲಿಸಿದರೆ ಭಾರತ ಅಭಿವ್ಯಕ್ತಿ ಸ್ವಾತಂತ್ರ್ಯದ ನೀಡಿದ ಮುಂಚೂಣಿಯ ದೇಶವಾಗಿದೆ. ಸಾಮಾಜಿಕ ಜಾಲತಾಣ ಸಮರ್ಪಕವಾಗಿ ಬಳಸಿಕೊಳ್ಳಬೇಕು. ಸಾಮಾಜಿಕ ಮಾಧ್ಯಮದ ಮೂಲಕ ಪ್ರತಿ ಹಳ್ಳಿಯ ಜನರನ್ನು ತಲುಪುತ್ತಿವೆ ಎಂದು ಹೇಳಿದರು.

ಪತ್ರಿಕಾ ರಂಗದ ಆದರ್ಶಗಳನ್ನು ಬಳಸಿಕೊಂಡು, ದೇಶಕ್ಕೆ ಉತ್ತಮ ಮಾದರಿಯ ವ್ಯಕ್ತಿಗಳಾಗಬೇಕು ಎಂದು
ಪತ್ರಕರ್ತರಿಗೆ ಅವರು ಕಿವಿಮಾತು ಹೇಳಿದರು. ನಮ್ಮ ಜೀವನ ಬದಲಾವಣೆಯಲ್ಲಿ ನಮ್ಮ ಗುರುಗಳ ಪಾತ್ರ ಮಹತ್ವದಾಗಿದೆ. ಎಲ್ಲರೂ ಗುರುಗಳ ಸೇವೆ ಮರೆಯಬಾರದು ಎಂದು ತಿಳಿಸಿದರು.

1843 ರಲ್ಲಿ ಮಂಗಳೂರು ಸಮಾಚಾರ ಮೊಟ್ಟ ಮೊದಲ ಕನ್ನಡ ಪತ್ರಿಕೆಯಾದ ಉದಯಿಸಿತು.
ಕರ್ನಾಟಕ ಏಕೀಕರಣಕ್ಕೆ ಪತ್ರಿಕಾ ರಂಗ ದೊಡ್ಡ ಕೊಡುಗೆ ಆಗಿದೆ. ಅಖಿಲ ಭಾರತೀಯ ಪರೀಕ್ಷೆಗಳನ್ನು ಬರೆಯಲು ಸಹ ಪತ್ರಿಕೆಗಳನ್ನು ಓದಬೇಕು. ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿದೆ. ಮಾಧ್ಯಮ ಶಾಸಕಾಂಗ, ನ್ಯಾಯಾಂಗ, ಕಾರ್ಯಾಂಗದ ಕಿವಿ ಹಿಂಡುವ ಕರ್ತವ್ಯ ಮಾಧ್ಯಮ ನಿರ್ವಹಿಸುತ್ತಿದೆ. ಮಾಧ್ಯಮಗಳು ವ್ಯಗ್ರವಾಗಿ ವರ್ತಿಸಬಾರದು ಮಾಧ್ಯಮಗಳ ಸ್ವಾತಂತ್ರ್ಯಕ್ಕೆ ಯಾವುದೇ ರೀತಿಯ ಅಡೆತಡೆ ಯಾವ ಕಾಲಕ್ಕೂ ಬರುವುದಿಲ್ಲ. ಭಾರತ ದೇಶ freedom of expression ಹೊಂದಿದೆ. ಇಷ್ಟರ ಮಟ್ಟಿಗೆ ಸ್ವಾತಂತ್ರ್ಯ ಹೊಂದಿದೆ. ಇದು ಇತರ ದೇಶಗಳಲ್ಲಿ ಇಲ್ಲ.

ಪತ್ರಿಕೆ ಮತ್ತು ಮಾಧ್ಯಮ ಭಾರತ ದೇಶದ ಪ್ರಗತಿಗೆ ಪೂರಕ ಎಂದರು. ಕಾರ್ಯಕ್ರಮದಲ್ಲಿ ಪೊಲೀಸ್ ಕಮಿಶನರ್ ಡಾ.ಬೋರಲಿಂಗಯ್ಯ, ಎಸ್‍ಪಿ ಡಾ. ಸಂಜೀವ್ ಪಾಟೀಲ್, ಖ್ಯಾತ ಭಾಷಣಕಾರರಾದ ಗುರುರಾಜ್ ಕರ್ಜಗಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪನಿರ್ದೇಶಕರಾದ ಗುರುನಾಥ್ ಕಡಬೂರು, ಪತ್ರಕರ್ತರ ಸಂಘದ ರಾಜ್ಯ ಉಪಾಧ್ಯಕ್ಷರಾದ ಪುಂಡಲೀಕ ಬಾಳೋಜಿ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಕ್ಷರಾದ ದಿಲೀಪ್ ಕುರುಂದವಾಡೆ, ಉಪಾಧ್ಯಕ್ಷರಾದ  ರಾಜಶೇಖರ್ ಪಾಟೀಲ್, ಮೊದಲಾದ ಗಣ್ಯರು ಭಾಗಿಯಾಗಿದ್ದರು.


Spread the love

About Laxminews 24x7

Check Also

ಡಿಸೆಂಬರ 31 ಒಳಗಾಗಿ ಬೆಳಗಾವಿ ಜಿಲ್ಲೆ ವಿಭಜಿಸಿ,.

Spread the love ಡಿಸೆಂಬರ 31 ಒಳಗಾಗಿ ಬೆಳಗಾವಿ ಜಿಲ್ಲೆ ವಿಭಜಿಸಿ,. ಚಿಕ್ಕೋಡಿ: ಆಡಳಿತಾತ್ಮಕ ಮತ್ತು ಅಭಿವೃದ್ಧಿ ದೃಷ್ಟಿಯಿಂದ ಡಿಸೆಂಬ‌ರ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ