2023ಕ್ಕೆ ಹೆಚ್.ಡಿ. ಕುಮಾರಸ್ವಾಮಿ ಮತ್ತೆ ಸಿಎಂ ವಿಚಾರ: ರಾಜ್ಯದಲ್ಲಿ ನೊಂದವರನ್ನು ರಕ್ಷಿಸಲು ಮತ್ತೊಮ್ಮೆ ಸಿಎಂ ಆಗುವ ವಿಶ್ವಾಸ ಇದೆ. ಬಡವರಿಗಾಗಿ ಮತ್ತೊಂದು ಬಾರಿ ಸಿಎಂ ಆಗಲು ದೇವರ ಆಶೀರ್ವಾದ ಇದೆ. ಬಡವರಿಗಾಗಿ ಅಧಿಕಾರ ಹಿಡಿಯುವ ಇಚ್ಛೆಯಿದೆ. ಯಾರೇ ಏನೇ ಹೇಳಲಿ. ಜೆಡಿಎಸ್ ಪಕ್ಷ ಮುಗಿಸಿದ್ದೇವೆ. ತಲೆ ಎತ್ತಲು ಬಿಡಲ್ಲ ಅಂತ ಹೇಳಲಿ. ಯಾರೇ ಹೇಳಿದರೂ ಮೇಲೋಬ್ಬ ಇದ್ದಾನೆ. ಅವನ ಆಶೀರ್ವಾದ ಇದ್ದೇ ಇರುತ್ತದೆ ಎಂದರು.
ಪಂಚರತ್ನ ಯಾತ್ರೆ: ಈ ಬಾರಿ ಜೆಡಿಎಸ್ಅನ್ನು ಅಧಿಕಾರಕ್ಕೆ ತರಲೇಬೇಕು ಎಂದು ಮಿಷನ್ 123 ಗುರಿ ಇಟ್ಟುಕೊಂಡಿದ್ದೇವೆ. ಸ್ವತಂತ್ರ ಸರ್ಕಾರ ತರುವ ಗುರಿ ಇಟ್ಟುಕೊಂಡು ಜನರಿಗೆ ಮನವಿ ಮಾಡಿದ್ದೇನೆ. ಆಗಸ್ಟ್ ತಿಂಗಳಿನಿಂದ ಪಂಚರತ್ನ ರಥಯಾತ್ರೆ ಮಾಡುತ್ತೇನೆ. ಸಮ್ಮಿಶ್ರ ಸರ್ಕಾರದಲ್ಲಿ ಸಿಎಂ ಆಗುವ ಆಸೆ ಇಲ್ಲ. ಜನರ ಬದುಕಿಗೆ ಶಾಶ್ವತ ಪರಿಹಾರ ನೀಡಲು ಯಾತ್ರೆ ಹೊರಟಿದ್ದೇನೆ. ಏಳೆಂಟು ತಿಂಗಳು ಟೈಂ ಇದೆ. ಜನರ ಪರಿವರ್ತನೆ ಮಾಡುತ್ತೇನೆ ಎಂದು ವಿಶ್ವಾಸ ಕುಮಾರಸ್ವಾಮಿ ವ್ಯಕ್ತಪಡಿಸಿದರು.
Laxmi News 24×7