ಶಿವಮೊಗ್ಗ: ಈ ಸರ್ಕಾರದಲ್ಲಿ ಕಮಿಷನ್ಗೆ ಲೆಕ್ಕ ಇಲ್ಲ. ಆರ್ಎಸ್ಎಸ್ ಪ್ರಮುಖರಿಗೆ ಶಾಸಕರು, ಸಚಿವರಿಂದ ಕಮಿಷನ್ ಹೋಗ್ತಾ ಇದೆ. ಆರ್ಎಸ್ಎಸ್ ನ 2-3 ಜನ ಪ್ರಮುಖರಿಗೆ ಕಮಿಷನ್ ಹಣ ಕೊಡಲೇಬೇಕು. ಶಾಸಕರು, ಸಚಿವರು ಎಲ್ಲರೂ ಪ್ರತಿ ತಿಂಗಳು ಪಕ್ಷದ ಹಿಂದಿರುವ ಮುಖಂಡರಿಗೆ ನೇರವಾಗಿ ಕಮಿಷನ್ ಕೊಡಬೇಕು ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಹೊಸ ಬಾಂಬ್ ಸಿಡಿಸಿದ್ದಾರೆ.
ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪಕ್ಷ ನೇರವಾಗಿ ಆರ್ಎಸ್ಎಸ್ನಿಂದ ನಡೆಯುತ್ತಿದೆ. ಇದರ ಬಗ್ಗೆ ಯಾವುದೇ ಸಂಶಯವಿಲ್ಲ. ಪ್ರತಿ ಕ್ಷೇತ್ರದಲ್ಲಿ 20 ರಿಂದ 30 ಕೋಟಿ ಖರ್ಚು ಮಾಡಲು ಹಣ ಸಂಗ್ರಹ ಆಗುತ್ತಿದೆ. ಬೆಂಗಳೂರಿನ ಶಾಸಕರು, ಸಚಿವರಿಗೆ ಎಷ್ಟು ಕಮಿಷನ್ ಕೊಟ್ಟಿದ್ದಾರೆ ಎಂದು ಕೇಳಿ ನೋಡಿ ಎಂದರು.
ರಾಷ್ಟ್ರಪತಿ ಚುನಾವಣೆ ವಿಚಾರ: ಈಗಿರುವ ಎನ್ಡಿಎ ಅಭ್ಯರ್ಥಿ ಗೆಲ್ಲಲೂ ಯಾವುದೇ ಸಮಸ್ಯೆ ಇಲ್ಲ. ನಡ್ಡಾ ಅವರು ಸಹ ಕಾಲ್ ಮಾಡಿದ್ದಾರೆ. ಅಭ್ಯರ್ಥಿ ದ್ರೌಪದಿ ಮುರ್ಮು ಸಹ ಮಾತನಾಡಿದ್ದಾರೆ. ಶಾಸಕರ ಜೊತೆ ಕುಳಿತು ಚರ್ಚೆ ಮಾಡಿ, ಅಂತಿಮ ನಿರ್ಣಯ ತೆಗೆದುಕೊಳ್ಳುತ್ತೇವೆ ಎಂದು ಹೆಚ್ಡಿಕೆ ಹೇಳಿದ್ರು.