Breaking News

ಕಾಂಗ್ರೆಸ್ ನವರಿಗೆ ನಾಚಿಕೆ ಆಗಬೇಕು ಎಂದು ಜೀರ್ಲಿ ವಕೀಲರು ಹೇಕಿದ್ದೆಕ್ಕೆ ಗೊತ್ತಾ?

Spread the love

ಜೂನ್ 25 1975ರಲ್ಲಿ ಇಂಧಿರಾ ಗಾಂಧಿ ನೇತೃತ್ವದ ಕಾಂಗ್ರೆಸ್ ಸರಕಾರ ದೇಶದಲ್ಲಿ ಹೇರಿದ್ದ ತುರ್ತು ಪರೀಸ್ಥಿತಿಯ ಕರಾಳ ಸತ್ಯವನ್ನು ಜನರಿಗೆ ತಿಳಿಸುವ ಉದ್ದೇಶದಿಂದ ಬಿಜೆಪಿ ವತಿಯಿಂದ ವಿಶೇಷ ಕಾರ್ಯಕ್ರಮವನ್ನು ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ವಕ್ತಾರ ಎಂಬಿ ಜಿರಲಿ ಹೇಳಿದ್ದಾರೆ.

ಬೆಳಗಾವಿ ನಗರದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ ಎಂ.ಬಿ ಜಿರಲಿ ರವರು, 1975ರಲ್ಲಿ ದೇಶದಲ್ಲಿ ಹೇರಲಾಗಿದ್ದ ತುರ್ತು ಪರೀಸ್ಥಿತಿಯನ್ನು ಕುರಿತಂತೆ ಬೇಸರ ವ್ಯಕ್ತಪಡಿಸಿದರು. ಜೂನ್ 25, 1975ರಲ್ಲಿ ದೇಶದ ಆಗಿನ ಪ್ರಧಾನ ಮಂತ್ರಿಗಳಾಗಿದ್ದ ಇಂದಿರಾ ಗಾಂಧಿ ನೇತೃತ್ವದ ಸರಕಾರ ದೇಶದಲ್ಲಿ ತುರ್ತು ಪರೀಸ್ಥಿತಿಯನ್ನು ಘೋಷಣೆ ಮಾಡಿತ್ತು. ದೇಶದ ಪ್ರತಿಯೊಬ್ಬ ಪ್ರಜೆ ದೇಶದ ಈ ದೇಶದ ರಾಜಕೀಯ ಭವಿಷ್ಯವನ್ನು ತಿಳಿಯಬೇಕು. ಇದು ಕಾಂಗ್ರೆಸ್ ದೇಶದ ಪ್ರಜಾಪ್ರಭುತ್ವದೊಡನೆ ಮಾಡುವ ಚೆಲ್ಲಾಟವಾಗಿದೆ.

ತುರ್ತು ಪರೀಸ್ಥಿತಿಯ ಅವಧಿಯಲ್ಲಿ ಕೆಲ ನಾಯಕರನ್ನು ಜೈಲ;ಇಗೆ ಹಾಕಲಾಗಿತ್ತು. ಈ ವೇಳೆ ದೇಶದ ಪ್ರಜಾಪ್ರಭುತ್ವ ಉಳಿವಿಗಾಗಿ ಹೋರಾಡಿದ ನಾಯಕರನ್ನು ಸ್ಮರಿಸುವ ಕೆಲಸವಾಗಬೇಕು. ಅದಕ್ಕಾಗಿ ಇಂದು ಸಾಯಂಕಾಲ ನಾವು ತುರ್ತು ಪರೀಸ್ಥಿತಿ ಸಂದರ್ಭದಲ್ಲಿ ಜೈಲಿಗೆ ಹಾಕಲಾಗಿದ್ದ ನಾಯಕರನ್ನು ಕರೆದು ಅವರನ್ನು ಸನ್ಮಾನಿಸುವ ಕೆಲಸ ಮಾಡುತ್ತಿದ್ದೇವೆ.

ನಗರದ ಕೆಎಲ್‍ಇ ಜೀರಗೆ ಹಾಲ್‍ನಲ್ಲಿ ಇಂದು ಸಾಯಂಕಾಲ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. ದೇಶದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಈ ಕರಾಳ ದಿನವನ್ನು ಆಚರಣೆ ಮಾಡುವಂತೆ ಹೇಳಲಾಗಿದೆ. ಈ ವೇಳೆ ಜನರಿಗೆ ಈ ಅವಧಿಯಲ್ಲಿ ದೇಶಕ್ಕಾದÀ ನಷ್ಟ ಕುರಿತಂತೆ ಜನರಿಗೆ ತಿಳಿಸುವ ಕೆಲಸವಾಗಬೇಕು ಎಂದರು.

ಮುಂದುವರೆದು ಮಾತನಾಡಿದ ಅವರು, ಈ ದಿನ 1975ರ ಅವಧಿಯಲ್ಲಿ ದೇಶದಲ್ಲಿ ತುರ್ತು ಪರೀಸ್ಥಿತಿಯನ್ನು ಎಲ್ಲಾ ಜನರು ವಿರೋಧ ವ್ಯಕ್ತಪಡಿಸಿದರು. ಬೆಳಗಾವಿ ನಗರದಲ್ಲಿ ಅಪ್ಪಾ ಸಾಹೇಬ್ ಮುತಕೇಕರ್, ದಿ. ಗಣಪತ್‍ರಾವ್ ಕುಲಕರ್ಣಿ ರವರು, ಹಣಮಂತರಾವ್ ಮುತಾಲಿಕ್‍ರವರು, ರಾಮಚಂದ್ರ ಜೋಶಿ, ವಿಲಾಸರಾವ್ ಪವಾರ್, ಬಂಡೋಪಂತ ಜೋಶಿರವರು, ಪಾಂಡುರಂಗ ನಿಕಾರ್ಗೆರವರು ಜೈಲುವಾಸವನ್ನು ಅನುಭವಿಸಿದರು. ಈ ವೇಳೆ ಈ ಎಲ್ಲಾ ನಾಯಕರನ್ನು ಯಾವುದೇ ಕಾರಣವಿಲ್ಲದೇ ಜೈಲಿಗೆ ಕಳಿಸಲಾಗುತ್ತೆ.


Spread the love

About Laxminews 24x7

Check Also

ಸರ್ಕಾರಕ್ಕೆ 4,416 ಕೋಟಿ ರೂ. ಅಬಕಾರಿ ರಾಜಸ್ವ ಸಂಗ್ರಹ: ಕಳ್ಳಭಟ್ಟಿ ಮುಕ್ತ ಕಲಬುರಗಿ ಜಿಲ್ಲೆಗೆ ಪಣ, ಗಡಿಯಲ್ಲಿ ಕಟ್ಟೆಚ್ಚರ

Spread the loveಕಲಬುರಗಿ: ಜಿಲ್ಲೆಯಲ್ಲಿ ಅಕ್ರಮ ಕಳ್ಳಭಟ್ಟಿ ಮತ್ತು ಕಲಬೆರೆಕೆ ಸೇಂದಿ ಹಾಗೂ ಮಾದಕ ವಸ್ತುಗಳ (ಗಾಂಜಾ ಮತ್ತು ಇತರೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ