Breaking News

ಬಾಗಲಕೋಟೆ ಜಿಲ್ಲಾಧಿಕಾರಿಗೆ ಕ್ಲಾಸ್​ ತೆಗೆದುಕೊಂಡ ಮಾಜಿ ಸಿಎಂ

Spread the love

ಬಾಗಲಕೋಟೆ: ಜೂನ್ 21 ರಂದು ಪಟ್ಟದಕಲ್ಲಿನಲ್ಲಿ ನಡೆಯುವ ಯೋಗ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯಲ್ಲಿ ಕೇಳದೇ ಹೆಸರು ಹಾಕಿದ್ದಕ್ಕೆ ಗರಂ ಆಗಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಾಗಲಕೋಟೆ ಡಿಸಿ ಸುನೀಲಕುಮಾರ ಅವರಿಗೆ ಕರೆ ಮಾಡಿ ತರಾಟೆಗೆ ತೆಗೆದುಕೊಂಡರು.

ಕರೆ ಮಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ನಿನಗೆ ಶಿಷ್ಟಾಚಾರ ಅಂದ್ರೆ ಏನು ಎಂಬುದು ಗೊತ್ತಿಲ್ವಾ? ನೀನು ಮೊದಲು ಶಿಷ್ಟಾಚಾರವನ್ನು ಪಾಲಿಸಬೇಕು. ಅವನ್ಯಾರೋ ಸಚಿವ ಬರ್ತಾನೆ ಅಂತಾ ನೀನು ಆಮಂತ್ರಣ ಪತ್ರಿಕೆ ಮಾಡಿ ಕಳುಹಿಸಿಬಿಟ್ಟರೆ ಏನು ಅರ್ಥ. ನೀನು ಡಿಸಿಯಾದರೆ, ನಾನು ಈ ಕ್ಷೇತ್ರದ ಶಾಸಕ. ನೀನೊಬ್ಬ ಸೇವಕ. ನಿನ್ನ ಜವಾಬ್ದಾರಿಯನ್ನು ತಿಳಿದುಕೊಳ್ಳಬೇಕು

ಎಂದು ಏಕವಚನದಲ್ಲೇ ಹಿಗ್ಗಾಮುಗ್ಗಾ ಕ್ಲಾಸ್​ ತೆಗೆದುಕೊಂಡರು.ಆಮತ್ರಣ ಪತ್ರಿಕೆಯಲ್ಲಿ ನನ್ನ ಹೆಸರು ಹಾಕುವ ಮುನ್ನ ನನ್ನನ್ನು ಸಂಪರ್ಕಿಸಬೇಕು ಎಂಬುದು ತಿಳಿದಿರಲಿಲ್ಲವಾ? ಕ್ಷೇತ್ರದ ಜನರಿಗೆ ಇದು ಯಾವ ಸಂದೇಶ ಹೋಗುತ್ತದೆ?ನಿಮಗೆಲ್ಲ ಯಾರ್ರಿ ಕೆಲಸ ಕೊಟ್ಟವನು. ಇನ್ನೊಂದಿ ಸಾರಿ ಹೀಗಾದ್ರೆ ಸುಮ್ಮನೆ ನಾನು ಸುಮ್ಮನೇ ಬಿಡುವುದಿಲ್ಲ. ವಿಧಾನ ಸಭೆಯಲ್ಲಿ ಧ್ವನಿ ಎತ್ತುತ್ತೇನೆ. ಅಸೆಂಬ್ಲಿಗಿಂತ ಮೊದಲು ನೀನು ನನ್ನ ಕಾಣಬೇಕು ಎಂದು ಡಿಸಿಗೆ ಎಚ್ಚರಿಕೆ ನೀಡಿದರು.


Spread the love

About Laxminews 24x7

Check Also

ರೈತರು ಉತ್ಪಾದಿಸುವ ಆಹಾರ ಧಾನ್ಯಗಳ ಖರೀದಿ ಜವಾಬ್ದಾರಿ ಎಫ್​​​ಸಿಐಗೆ ವಹಿಸಿ: ಈರಣ್ಣ ಕಡಾಡಿ

Spread the loveಬೆಂಗಳೂರು: ರೈತರು ಉತ್ಪಾದಿಸುವ ಆಹಾರ ಧಾನ್ಯಗಳನ್ನು ಖರೀದಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ಇದರ ಜವಾಬ್ದಾರಿಯನ್ನು ಭಾರತೀಯ ಆಹಾರ ನಿಗಮ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ