ಬೆಳಗಾವಿಯಲ್ಲಿ ಬಿಜೆಪಿ ನಾಯಕಿ ನುಪೂರ್ ಶರ್ಮಾ, ರೋಹಿತ್ ಚಕ್ರತೀರ್ಥ ಅವರಿಗೆ ಶ್ರೀರಾಮಸೇನೆಯ ಬೆಂಬಲವಿದೆ. ನುಪೂರ್ ಶರ್ಮಾ ಸತ್ಯವನ್ನೇ ಹೇಳಿದ್ದಾರೆ ಎಂದು ಶ್ರೀರಾಮಸೇನೆಯ ಮುಖ್ಯಸ್ಥರಾದ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
ಬೆಳಗಾವಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಶ್ರೀ ರಾಮಸೇನೆ ಮುಖ್ಯಸ್ಥರಾದ ಪ್ರೆಮೋದ್ ಮುತಾಲಿಕ್, ಬಿಜೆಪಿ ನಾಯಕಿ ನುಪುರ್‍ಶರ್ಮಾ ಹಾಗೂ ರೋಹಿತ್ ಚಕ್ರೀರ್ಥರವರಿಗೆ ಬೆಂಬಲ ಸೂಚಿಸಿದರು. ಸತ್ಯವನ್ನು ಹೇಳಿದವರನ್ನು ಯಾರಿದೋ ಒತ್ತಡಕ್ಕೆ ಮಣಿದು ಉಚ್ಚಾಟನೆ ಮಾಡುವುದು ಸರಿಯಲ್ಲ. ಪ್ರಖರ ವಾಗ್ಮಿ, ವಕ್ತಾರರಿಗೆ ಯಾವುದೇ ಹೇಳಿಕೆ ಹಿನ್ನೆಲೆ ಉಚ್ಚಾಟನೆ ಸರಿಯಲ್ಲ. ವಕ್ರಾರರನ್ನು ತೆಗೆದುಹಾಕಿ ಅನ್ಯಾಯ, ಅಸತ್ಯವನ್ನು ಮೇಲೆತುತ್ತಿದ್ದೀರಿ.
ಮುಸ್ಲಿಂ ರಾಷ್ಟ್ರಗಳಿಗೆ ನಮ್ಮಲ್ಲಿ ಮೂಗು ತುರಿಸುವ ಅವಶ್ಯಕತೆ ಇಲ್ಲ. ಎಮ್ ಎಫ್ ಹುಸೇನ್ ಹಿಂದು ದೇವರನ್ನು ಅವಮಾನ ಮಾಡಿದ ಯಾಕೆ ಸುಮ್ಮನೆ ಇದ್ರು. ನಾವು ಹುಸೇನ್ ವಿರುದ್ಧ ಕೇಸ್ ದಾಖಲು ಮಾಡಿದ್ದೇವೆ. ಬಾಂಗ್ಲಾ, ಪಾಕಿಸ್ತಾನದಲ್ಲಿ ಅಲ್ಪ ಸಂಖ್ಯಾತ ಹಿಂದುಗಳ ಕಥೆ ಏನು. ಪಾಕಿಸ್ತಾನದಲ್ಲಿ 12 ಕೋಟಿ ಇದ್ದ ಹಿಂದುಗಳ ಜನಸಂಖ್ಯೆ ಇಂದು 12 ಲಕ್ಷ ತಲುಪಿದೆ. ಹಾಗಾಗಿ ಬಿಜೆಪಿ ನುಪೂರ್ ಶರ್ಮಾ ಉಚ್ಚಾಟನೆ ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು
Laxmi News 24×7