ಬೆಳಗಾವಿಯ ಕೆಲವು ಬಿಜೆಪಿ ಶಾಸಕರು, ಸಚಿವರು ನಮ್ಮ ಜಿಲ್ಲೆ ಬಿಟ್ಟು ನೆರೆಯ ಜಿಲ್ಲೆಯಲ್ಲಿ ಆಸ್ಪತ್ರೆ ಆಗಬೇಕೆಂದು ಸಿಎಂಗೆ ಪತ್ರ ಬರೆಯುತ್ತಾರೆ. ಆದರೆ ಬೆಳಗಾವಿ ಸುಲುವಾಗಿ ಇವರು ಬೇಡಿಕೆ ಇಡುವುದಿಲ್ಲ.
ಬೆಳಗಾವಿ ನೆರೆ ಜಿಲ್ಲೆಯಲ್ಲಿ 21 ಲಕ್ಷ ಜನಸಂಖ್ಯೆ ಇರುವಲ್ಲಿ ಮೂರುವರೆ ಸಾವಿರ ಬೆಡ್ ಇರುವ ಆಸ್ಪತ್ರೆಗಳಿವೆ. ಬೆಳಗಾವಿ ಅತೀ ದೊಡ್ಡ ಜಿಲ್ಲೆ 51 ಲಕ್ಷ ಜನಸಂಖ್ಯೆಗೆ 700 ಬೆಡ್ ಇರುವ ಜಿಲ್ಲಾಸ್ಪತ್ರೆ ಮಾತ್ರ ಇದೆ.
ಬೆಳಗಾವಿ ಸಚಿವ, ಶಾಸಕರು ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ. ಜನರ ಹಿತ ಕಾಪಾಡುವುದು ಅವರಿಗೆ ಇಲ್ಲ. ಆದ್ದರಿಂದ ಆಮ್ ಆದ್ಮಿ ಬೆಳಗಾವಿಗೆ ಏಮ್ಸ್ ನೀಡುವ ಹಾಗೆ ಜನಾಂದೋಲನ ಮಾಡಿ. ರಾಜ್ಯ ಸರಕಾರ ಬೆಳಗಾವಿಗೆ ಮಲತಾಯಿ ಧೋರಣೆ ಮಾಡದೆ, ಏಮ್ಸ್ ಕೊಡಬೇಕು. ಈ ಕುರಿತು ಆಮ್ ಆದ್ಮಿ ಜಿಲ್ಲಾಧ್ಯಂತ ಹೋರಾಟ ಮಾಡುತ್ತಿದೆ.
ಈಗಾಗಲೇ ಕಿತ್ತೂರು, ಗೋಕಾಕ, ಬೈಲಹೊಂಗಲ, ಬೆಳಗಾವಿ ದಕ್ಷಿಣ, ರಾಯಬಾಗ, ಅಥಣಿ ವಿಧಾನಸಭಾ ಮತಕ್ಷೇತ್ರದ ಆಮ್ ಆದ್ಮಿ ಮುಖಂಡರು, ಕಾರ್ಯಕರ್ತರು ಈಗಾಗಲೇ ಹೋರಾಟ ಮಾಡಿದ್ದಾರೆ. ಬೆಳಗಾವಿ ಜನರಲ್ಲಿ ಮನವಿ ಮಾಡಿಕೊಳ್ಳುತ್ತೇವೆ. ಬೆಳಗಾವಿಗೆ ಏಮ್ಸ್ ನೀಡಲು ಸರಕಾರಕ್ಕೆ ಒತ್ತಾಯಿಸಲು ಆಪ್ ಜತೆ ಧ್ವನಿಗೂಡಿಸಿ.
Laxmi News 24×7