Breaking News

ಜೀವಂತ ಹಾವು ಕೊರಳಿಗೆ ಧರಿಸಿ ಶಿವನ ಪಾತ್ರ ನಿರ್ವಹಿಸಿದ ಕಲಾವಿದ – ಬೆಚ್ಚಿಬಿದ್ದ ಪ್ರೇಕ್ಷಕರು

Spread the love

ಚಿಕ್ಕೋಡಿ: ಹಲ್ಲು ತಗೆದ ಜೀವಂತ ನಾಗರಹಾವನ್ನು ಶಿವನ ಪಾತ್ರಧಾರಿ ಕೊರಳಲ್ಲಿ ಧರಿಸಿ ಸ್ಟೇಜ್ ಮೇಲೆ ಬಂದು ನಟನೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಸಂಕೋನಟ್ಟಿ ಗ್ರಾಮದಲ್ಲಿ ನಡೆದಿದೆ.

ಇಂಚಗೇರಿ ಮಠದ ಸಪ್ತಾಹ ಹಿನ್ನೆಲೆ ಗುರುವಾರ ರಾತ್ರಿ ಜಗಜ್ಯೋತಿ ಬಸವೇಶ್ವರ ನಾಟಕ ಪ್ರದರ್ಶನ ಆಯೋಜನೆ ಮಾಡಲಾಗಿತ್ತು. ಈ ವೇಳೆ ನಾಗರಹಾವನ್ನು ಕೊರಳಲ್ಲಿ ಹಾಕಿಕೊಂಡು ಶಿವನ ಪಾತ್ರಧಾರಿ ಚರಂತಯ್ಯ ಕಾಜಿಬೀಳಗಿ ನಟನೆ ಮಾಡಿದ್ದಾರೆ. 

ಚರಂತಯ್ಯ ಕಳೆದ 30 ವರ್ಷಗಳಿಂದ ಬಸವೇಶ್ವರ ನಾಟಕದಲ್ಲಿ ಶಿವನ ಪಾತ್ರವನ್ನು ಮಾಡುತ್ತಿದ್ದಾರೆ. ಪಾತ್ರ ನಿರ್ವಹಣೆ ವೇಳೆ ಮೈಮೇಲೆಲ್ಲಾ ಹಾವು ಓಡಾಡಿದರೂ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಣೆ ಮಾಡಿದ್ದಾರೆ.ವೇದಿಕೆ ಮೇಲೆ ಹಾವು ಕಂಡು ಇತರ ಪಾತ್ರಧಾರಿಗಳು ಹಾಗೂ ಪ್ರೇಕ್ಷಕರು ಕೆಲ ಸಮಯ ದಂಗಾಗಿ ಹೋಗಿದ್ದರು. 


Spread the love

About Laxminews 24x7

Check Also

ಸರ್ಕಾರ ಸಲ್ಲಿಸಿರುವ ಅರ್ಜಿ ವಿಲೇವಾರಿವರೆಗೂ ಸಿಎಟಿ ಆದೇಶ ಜಾರಿಗೆ ಒತ್ತಾಯಿಸದಂತೆ ವಿಕಾಸ್ ಕುಮಾರ್​ಗೆ ಸೂಚನೆ

Spread the loveಬೆಂಗಳೂರು: ಆರ್​​ಸಿಬಿ ವಿಜಯೋತ್ಸವದ ಸಂದರ್ಭದಲ್ಲಿ ನಡೆದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯಲೋಪ ಎಸಗಿದ್ದ ಆರೋಪದಡಿ ಕೆಲವು ಅಧಿಕಾರಿಗಳನ್ನು ಅಮಾನತು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ