Breaking News

ಬೆಳಗಾವಿ ಗ್ರಾಮೀಣ ಪೊಲೀಸರು ಕಾರ್ಯಾಚರಣೆ ನಡೆಸಿ 8 ಜನರನ್ನು ಬಂಧಿಸಿ, 25,93,500/- ರೂ ಮೌಲ್ಯದ ಡಿಎಪಿ ರಸಗೊಬ್ಬರ ಚೀಲ ಹಾಗೂ 2 ಟ್ರಕ್ ಗಳ ವಶ

Spread the love

ಬೆಳಗಾವಿ – ಬೆಳಗಾವಿ ಗ್ರಾಮೀಣ ಪೊಲೀಸರು ಕಾರ್ಯಾಚರಣೆ ನಡೆಸಿ 8 ಜನರನ್ನು ಬಂಧಿಸಿ, 25,93,500/- ರೂ ಮೌಲ್ಯದ ಡಿಎಪಿ ರಸಗೊಬ್ಬರ ಚೀಲಗಳನ್ನು ಹಾಗೂ 2 ಟ್ರಕ್ ಗಳನ್ನು ವಶಪಡಿಸಿಕೊಂಡಿದ್ದಾರೆ.

ದಿನಾಂಕ 23-05-2022 ರಂದು ಬೆಳಗಾವಿ ಗ್ರಾಮೀಣ ಪೊಲೀಸ ಠಾಣಿಯ ವ್ಯಾಪ್ತಿಯ ದೇಸೂರ ರೈಲ್ವೆ ಸ್ಟೇಷನ್‌ ಹತ್ತಿರ ಗೂಡ್ಡ ಶೇಡ್ ಗೊಡಾವನದಲ್ಲಿಟ್ಟ 900 ಆರ್‌ಸಿಎಫ್ ಕಂಪನಿಯ ಡಿಎಪಿ ರಸಗೊಬ್ಬರದ ಚೀಲಗಳು ಕಳುವಾದ ಬಗ್ಗೆ ಶಿವಾಜಿ ಬಾಳಾರಾಮ ಆನಂದಾಚೆ ಸಾ: ಹೊನಗಾ ಇವರು ನೀಡಿದ ದೂರಿನಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿತ್ತು.

ಶ್ರೀನಿವಾಸ ಹಾಂಡ, ಪಿಐ ಬೆಳಗಾವಿ ಗ್ರಾಮೀಣ ಪೊಲೀಸ ಠಾಣೆ ಇವರ ನೇತೃತ್ವದಲ್ಲಿ ಜಾಡು ಹಿಡಿದು, ಐದು ಜನರನ್ನು ಪತ್ತೆ ಮಾಡಿ ವಿಚಾರಣೆಗೊಳಪಡಿಸಲಾಯಿತು.

1) ನಾಗರಾಜ ಈರಣ್ಣಾ ಪಠಾತ ( 21) ಸಾ: ಹಲಗಿಮರಡಿ ತಾ :ಜಿ ಬೆಳಗಾವಿ

2) ಪಂಡಿತ ಕಲ್ಲಪ್ಪಾ ಸನದಿ (37) ಸಾ: ಲಕ್ಲಬೈಲ್ ತಾ: ಖಾನಾಪೂರ ಬಿ : ಬೆಳಗಾವಿ

3) ವಸೀಮ್ ಇಸ್ಮಾಯಿಲ್ ಮಕಾಂದರ (23) ಸಾ: ಹೊಸ ವಂಟಮೂರಿ ತಾ :ಜಿ ಬೆಳಗಾವಿ

4) ಮಂಜುನಾಥ ಸೋಮಪ್ಪಾ ಹಮ್ಮನ್ನವರ ( 30) ಸಾ: ಲಕ್ಕೆಬೈಲ ತಾ : ಖಾನಾಪೂರ ಜಿ : ಬೆಳಗಾವಿ

5) ಗಜಬರ ಗೌಸಮುದ್ದಿನ ಅಡ್ಡಿಮನಿ (39) ವರ್ಷ ಸಾ: ಹುದಲಿ ತಾ :ಜಿ ಬೆಳಗಾವಿ

ಇವರನ್ನು ಬಂಧಿಸಿ ಅವರಿಂದ 1) ಆರ್‌ಸಿಎಫ್ ಕಂಪನಿಯ ಡಿ.ಎ.ಪಿ ರಸಗೊಬ್ಬರದ 810 ಚೀಲಗಳು ಅ.ಕಿ. 10,93,500/- ರೂ

2) ಕಳ್ಳತನ ಮಾಡಲು ಉಪಯೋಗಿಸಿದ ಎರಡು ಟ್ರಕ್ ಗಳು 15,00,000 ರೂ ಮೌಲ್ಯ, ಹೀಗೆ ಒಟ್ಟು 25,93,500/- ರೂ ಮೌಲ್ಯದ ಸ್ವತ್ತನ್ನು ವಶಪಡಿಸಿಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು ಅದೆ.

ವಾರದೊಳಗೆ ಆರೋಪಿಗಳನ್ನು ಪತ್ತೆ ಮಾಡುವಲ್ಲಿ ಶ್ರಮಿಸಿದ ತಂಡವನ್ನು ಪೊಲೀಸ್ ಆಯುಕ್ತರು ಹಾಗೂ ಉಪ ಆಯುಕ್ತರುಗಳು ಶ್ಲಾಘಿಸಿದ್ದಾರೆ.


Spread the love

About Laxminews 24x7

Check Also

ಬೆಳಗಾವಿಯಲ್ಲಿ ಭಾರಿ ಮಳೆಗೆ ಮನೆ ಕುಸಿತ

Spread the love ಬೆಳಗಾವಿಯಲ್ಲಿ ಭಾರಿ ಮಳೆಗೆ ಮನೆ ಕುಸಿತ ಕಳೆದ ಮೂರ್ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಬೆಳಗಾವಿಯಲ್ಲಿ ಒಂದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ